ಮನುಷ್ಯನ ವಿವೇಚನಾ ಶಕ್ತಿಯೇ ಅತ್ಯುತ್ತಮ ತಂತ್ರಜ್ಞಾನ

ಚಿತ್ರದುರ್ಗದಲ್ಲಿ ಬುಧವಾರ ಏರ್ಪಡಿಸಿದ್ದ ಉಪನ್ಯಾಸ-ಸಂವಾದ ಕರ‍್ಯಕ್ರಮವನ್ನು ಶ್ರೀ ಸದ್ಗುರು ಉದ್ಘಾಟಿಸಿದರು. ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಶ್ರೀ ಬಸವಕುಮಾರ ಸ್ವಾಮೀಜಿ,ಶ್ರೀ ಶಿವಲಿಂಗಾನAದ ಸ್ವಾಮೀಜಿ, ಶ್ರೀ ಶಿವಬಸವ ಸ್ವಾಮೀಜಿ ಇದ್ದರು.
ಚಿತ್ರದುರ್ಗದಲ್ಲಿ ಬುಧವಾರ ಏರ್ಪಡಿಸಿದ್ದ ಉಪನ್ಯಾಸ-ಸಂವಾದ ಕರ‍್ಯಕ್ರಮವನ್ನು ಶ್ರೀ ಸದ್ಗುರು ಉದ್ಘಾಟಿಸಿದರು. ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಶ್ರೀ ಬಸವಕುಮಾರ ಸ್ವಾಮೀಜಿ,ಶ್ರೀ ಶಿವಲಿಂಗಾನAದ ಸ್ವಾಮೀಜಿ, ಶ್ರೀ ಶಿವಬಸವ ಸ್ವಾಮೀಜಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಈಶ ಫೌಂಡೇಷನ್‌ನ ಶ್ರೀ ಸದ್ಗುರು ಹೇಳಿಕೆ
  • ವಿಶೇಷ ಉಪನ್ಯಾಸ- ಸಂವಾದ ಕರ‍್ಯಕ್ರಮ
  • ಶ್ರೀ ಶಿವಶರಣ ಮಾದಾರ ಚನ್ನಯ್ಯ ಗುರುಪೀಠ
ಚಿತ್ರದುರ್ಗ: ಜೈವಿಕ ವಿಕಾಸ ಪ್ರಕ್ರಿಯೆಯಲ್ಲಿ ಮನುಷ್ಯನಿಗೆ ದೊರಕಿರುವ ಬುದ್ಧಿ ಶಕ್ತಿ, ವಿವೇಚನೆ ಹಾಗೂ ನಿರ್ಧಾರದ ಸಾಮ ರ್ಥ್ಯವು, ಅತ್ಯುನ್ನತ ತಂತ್ರಜ್ಞಾನವಾಗಿದೆ ಎಂದು ಈಶ ಫೌಂಡೇಷನ್ ಸಂಸ್ಥಾಪಕರಾದ ಶ್ರೀ ಸದ್ಗುರು ಹೇಳಿದರು.
ನಗರದ ಶ್ರೀ ಶಿವಶರಣ ಮಾದಾರ ಚನ್ನಯ್ಯ ಗುರುಪೀಠದಲ್ಲಿ ಬುಧವಾರ ಆಯೋಜಿಸಿದ್ದ ಶರಣರ ದೃಷ್ಟಿಯಲ್ಲಿ ಯೋಗ ವಿಜ್ಞಾನ ವಿಶೇಷ ಉಪನ್ಯಾಸ- ಸಂವಾದ ಕರ‍್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಮಗೆ ಲಭಿಸಿರುವ ತಂತ್ರಜ್ಞಾನವನ್ನು ಹೇಗೆ ಬಳಸಿಕೊಳ್ಳ ಬೇಕೆಂದು ತಿಳಿಯದೇ ಪರದಾಡುತ್ತಿದ್ದೇವೆ. ಮನುಷ್ಯನಲ್ಲಿ ಪ್ರಾಣಿ ಸಹಜ ಗುಣ ಹಾಗೂ ಮನುಷ್ಯತ್ವದ ನಡುವೆ ವ್ಯತ್ಯಾಸವಿದೆ. ಪ್ರಾಣಿಗಳು ತಮ್ಮ ಮೂಲ ಪ್ರವೃತ್ತಿ ಮತ್ತು ಪರಿಸರಕ್ಕೆ ತಕ್ಕಂತೆ ಬದುಕುತ್ತೇವೆ.
ನಿದ್ರಾಹಾರ ಇತ್ಯಾದಿ ದೈನಂದಿನ ಚಟುವಟಿಕೆ ಹಾಗೂ ಸಾವು ಎಂದೆಲ್ಲ ಸೀಮಿತವಾಗದೆ ನಮಗಿರುವ ವಿವೇಚನೆ ಬಳಸಿಕೊಂಡು, ಪ್ರಜ್ಞಾಪೂರ್ವಕವಾಗಿ ನಮ್ಮ ಬದುಕು ಹೀಗೇ ಇರಬೇಕೆಂದು ನಿರ್ಧರಿಸಬೇಕು ಎಂದರು.
ಜೀವ ವಿಕಾಸ ವಿಜ್ಞಾನದ ಪ್ರಕಾರ ಮನುಷ್ಯ ಮತ್ತು ಚಿಂಪಾAಜಿ ಡಿಎನ್‌ಎ ನಡುವೆ ಶೇ ೧.೨೩ ವ್ಯತ್ಯಾಸವಿದ್ದರೂ, ಬುದ್ಧಿಶಕ್ತಿ ಮತ್ತು ಅರಿವಿನ ಮಟ್ಟದಲ್ಲಿ ನಾವು ಜಗತ್ತನ್ನೇ ಆಳುವಷ್ಟು ವಿಕಸನಗೊಂಡಿದ್ದೇವೆ. ಈ ವಿಕಸನದ ಲಾಭ ನಮ್ಮದಾಗಬೇಕು.
ನಾವಿಂದು ಒಳ್ಳೆಯವರು ಎಂದು ಕರೆಸಿಕೊಂಡರೆ ಸಾಲದು. ಸಂವೇದನಾಶೀಲತೆ ಮತ್ತು ಆನಂದಮಯ ಮನಸ್ಥಿತಿ ಅಗತ್ಯವಿದೆ. ನಾವು ಮಾತ್ರ ಒಳ್ಳೆಯವರೆಂದು ಭಾವಿಸುವುದು ಅನೇಕ ಸಮಸ್ಯೆಗಳಿಗೆ ಕಾರಣ ಎಂದು ವಿಶ್ಲೇಷಿಸಿದರು.
ಆಯುರ್ವೇದ ರೋಗಕ್ಕೆ ನೀಡುವ ಔಷಧವಲ್ಲ
ರೋಗ ಲಕ್ಷಣಕ್ಕೆ ತಕ್ಕಂತೆ ಅಲೋಪಥಿ ಚಿಕಿತ್ಸೆ ಇರುತ್ತದೆ. ಆದರೆ ಆಯುರ್ವೇದ, ರೋಗಕ್ಕೆ ನೀಡುವ ಔಷಧವಲ್ಲ. ಆಯುರ್ ಎಂದರೆ ಜೀವಿತಾವಽ, ಮಾನವ ಜೀವನ ವ್ಯವಸ್ಥೆ ಮತ್ತು ಆರೋಗ್ಯದ ಸಮಗ್ರ ವಿಜ್ಞಾನವಾಗಿದೆ. ಮನುಷ್ಯನ ಸಹಜ ಆಯಸ್ಸನ್ನು ಪೂರ್ಣವಾಗಿ ಅನುಭವಿಸಲು ನೆರವಾಗುತ್ತದೆ. ಶರೀರ ಮತ್ತು ಮನಸ್ಸನ್ನು ಸಮತೋಲನದಲ್ಲಿಡುವುದು ಬದುಕಿನ ಅತ್ಯುನ್ನತ ಯಶಸ್ಸು. ಯುವ ಪೀಳಿಗೆ ಬುದ್ಧಿಶಕ್ತಿಯನ್ನು ಆತಂಕ ಮತ್ತು ಒತ್ತಡವನ್ನು ಸÊಷ್ಟಿಸಿಕೊಳ್ಳಲು ಬಳಸದೆ, ಸÊಜನಶೀಲತೆಗೆ ಸದ್ಬಳಕೆ ಮಾಡಿಕೊಳ್ಳ ಬೇಕಿದೆ ಎಂದರು.
ಬಳಕೆಯ ಮೇಲೆ ಎಐ ಭವಿಷ್ಯ ನಿರ್ಧಾರ
ಕಲೆ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ ಮೊದಲಾದ ಯಾವುದೇ ಕೆಲಸದಲ್ಲಿ ನಮ್ಮನ್ನು ನಾವು ಸಂಪೂರ್ಣವಾಗಿ ತೊಡಗಿಸಿಕೊಳ್ಳು ವುದೇ ನಿಜವಾದ ಆಧ್ಯಾತ್ಮ. ನಾವು ಹೇಗೆ ಬಳಸಿಕೊಳ್ಳುತ್ತೇವೆ ಎಂಬುದನ್ನು ಆಧರಿಸಿ ಕೃತಕ ಬುದ್ಧಿಮತ್ತೆ ಒಳ್ಳೆಯದೊ-ಕೆಟ್ಟದ್ದೋ ಎಂದು ನಿರ್ಧರಿಸಬಹುದಾಗಿದೆ.
ತಂತ್ರಜ್ಞಾನ, ಉಪಕರಣವಾಗಲಿ ಅದು ಯಾರ ಕೈಯಲ್ಲಿದೆ ಮತ್ತು ಅದನ್ನು ಹೇಗೆ ಬಳಸಲಾಗುತ್ತಿದೆ ಎಂಬುದರ ಮೇಲೆ ಅದರ ಗುಣ ನಿರ್ಧಾರವಾಗುತ್ತದೆ. ಎಐ ವಿಚಾರದಲ್ಲೂ ಇದೇ ನಿಯಮ ಅನ್ವಯಿಸುತ್ತದೆ ಎಂದರು.
ಸಾನ್ನಿಧ್ಯ ವಹಿಸಿದ್ದ ಶ್ರೀ ಶಿವಶರಣ ಮಾದಾರ ಚನ್ನಯ್ಯ ಗುರುಪೀಠದ ಪೀಠಾಧ್ಯಕ್ಷ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾ ಮೀಜಿ ಮಾತನಾಡಿ, ಅನೇಕ ಬಾರಿ ಸದ್ಗುರು ಅವರನ್ನು ಮಠಕ್ಕೆ ಬರ ಮಾಡಿಕೊಳ್ಳಬೇಕೆಂಬುದು ನಮ್ಮ ಅಪೇಕ್ಷೆಯಾಗಿತ್ತು. ಇಂದು ಕಾಲ ಕೂಡಿ ಬಂದಿದೆ.
ಆಧ್ಯಾತ್ಮದ ಮೇರು ಶಿಖರ ಶ್ರೀ ಸದ್ಗುರು ಅವರು ಮಠಕ್ಕೆ ಭೇಟಿ ಕೊಟ್ಟಿರುವುದು ನಮ್ಮೆಲ್ಲರ ಪುಣ್ಯ. ದೂರವಾಣಿ ಕರೆ ಮಾಡಿ ಬರುವುದಾಗಿ ತಿಳಿಸಿದರು. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಹಾಗೂ ಪ್ರಪಂಚದಲ್ಲಿ ಸನಾತನ ಧರ್ಮದ ರಕ್ಷಣೆಗೆ ನಿಂತಿರುವ ಅವರ ಶ್ರಮ ಶ್ಲಾಘನೀಯ ಎಂದರು.
ಶ್ರೀ ಮುರುಘಾ ಮಠದ ಆಡಳಿತ ಮಂಡಳಿ ಸದಸ್ಯ ಡಾ.ಶ್ರೀ ಬಸವಕುಮಾರ ಸ್ವಾಮೀಜಿ, ಶ್ರೀ ಕಬೀರಾನಂದಾಶ್ರಮದ ಶ್ರೀ ಶಿವಲಿಂಗಾನAದ ಸ್ವಾಮೀಜಿ, ಅಥಣಿ ಶಿವಯೋಗಾಶ್ರಮದ ಶಿವಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ನಗರದ ಶ್ರೀ ಅಂಜನಾ ನೃತ್ಯ ಕೇಂದ್ರದ ಕಲಾವಿದರು ನೃತ್ಯಪ್ರದರ್ಶನ ನೀಡಿದರು.
-----
ಜಿಲ್ಲೆಯಲ್ಲಿ ಆಧ್ಯಾತ್ಮಿಕ ಕೇಂದ್ರ
\ಎಸ್‌ಜೆಎA ಹೆಲಿಪ್ಯಾಡ್‌ನಲ್ಲಿ ಬಂದಿಳಿದ ಸದ್ಗುರುವನ್ನು ಅದ್ದೂರಿಯಾಗಿ ಮಠಕ್ಕೆ ಬರಮಾಡಿಕೊಳ್ಳಲಾಯಿತು. ಕರ‍್ಯಕ್ರಮಕ್ಕೂ ಮೊದಲು ಶ್ರೀ ಬಸವಮೂರ್ತಿ ಸ್ವಾಮೀಜಿ ಅವರೊಂದಿಗೆ ಕೆಲಕಾಲ ಸಮಾಲೋಚನೆ ನಡೆಸಿದರು. ಮಾದಾರ ಚನ್ನಯ್ಯ ಶ್ರೀಗಳು ಸ್ವತಃ ಕಾರು ಚಾಲನೆ ಮಾಡಿಕೊಂಡು ಹೆಲಿಪ್ಯಾಡ್‌ಗೆ ತೆರಳಿ ಸದ್ಗುರುಗಳನ್ನು ಬೀಳ್ಕೊಟ್ಟರು.
ಚಿತ್ರದುರ್ಗದಲ್ಲೂ ಚಿಕ್ಕಬಳ್ಳಾಪುರದಂತೆ ನಾನಾ ರಾಷ್ಟಿçÃಯ ಹೆದ್ದಾರಿಗಳು ಹಾದು ಹೋಗಿವೆ. ಇಲ್ಲೊಂದು ಭವ್ಯ ಆಧ್ಯಾತ್ಮಿಕ ಕೇಂದ್ರ ನಿರ್ಮಾಣವಾಗಬೇಕೆಂದು ಭಕ್ತರು ಆಶಿಸಿದರು.
----
ಮಲ್ಲಾಡಿಹಳ್ಳಿ ನೆನಪು
ಬಹಳ ವರ್ಷಗಳ ಹಿಂದೆ ಹೊಳಲ್ಕೆರೆ ಶ್ರೀ ರಾಘವೇಂದ್ರ ಗುರೂಜಿ ಅವರ ಮಲ್ಲಾಡಿಹಳ್ಳಿ ಆಶ್ರಮಕ್ಕೆ ತಾವು ಬಂದಿದ್ದನ್ನು ಸ್ಮರಿಸಿದ ರು. ಆರಂಭದಲ್ಲಿ ಕರ್ನಾಟಕದಲ್ಲಿ ಹುಟ್ಟಿ ಬೆಳೆದಿರುವ ತಮಗೆ ಕನ್ನಡ ಗೊತ್ತಿದೆ. ಆದರೆ, ಉಪನ್ಯಾಸಕ್ಕೆ ತೊಡಕಾಗುತ್ತದೆ ಎಂದು ಸದ್ಗುರು ಇಂಗ್ಲಿಷ್‌ನಲ್ಲಿ ಮಾತನಾಡಿದರು. ತಿಳಿಹಾಸ್ಯದೊಂದಿಗೆ ತಮ್ಮ ಆಳವಾದ ಆಧ್ಯಾತ್ಮಿಕ ಚಿಂತನೆಗಳನ್ನು ಹಂಚಿಕೊAಡರು. ಶ್ರೀಮಠದ ಆವರಣದಲ್ಲಿದ್ದ ಅತ್ತಿ ಹಣ್ಣಿನ ರುಚಿಯನ್ನು ಸವಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net