ವಸತಿ ಯೋಜನೆ -Àಲಾನುಭವಿಗಳ ಆಯ್ಕೆಯಲ್ಲಿರಲಿ ಪಾರದರ್ಶಕತೆ

ಚಿತ್ರದುರ್ಗದಲ್ಲಿ ಗುರುವಾರ ಕೆಎಂಆರ್‌ಇಸಿ ಎಂಡಿ ಡಾ. ಸಂಜಯ್ ಎಸ್. ಬಿಜ್ಜೂರು ಅವರು ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಡಿಸಿ ಟಿ. ವೆಂಕಟೇಶ್, ಸಿಇಒ ಡಾ.ಎಸ್. ಆಕಾಶ್, ಡಿಸಿಎಫ್ ಜಿ. ಗೊಪ್ಯಾನಾಯ್ಕ ಇತರರು ಇದ್ದರು.
ಚಿತ್ರದುರ್ಗದಲ್ಲಿ ಗುರುವಾರ ಕೆಎಂಆರ್‌ಇಸಿ ಎಂಡಿ ಡಾ. ಸಂಜಯ್ ಎಸ್. ಬಿಜ್ಜೂರು ಅವರು ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಡಿಸಿ ಟಿ. ವೆಂಕಟೇಶ್, ಸಿಇಒ ಡಾ.ಎಸ್. ಆಕಾಶ್, ಡಿಸಿಎಫ್ ಜಿ. ಗೊಪ್ಯಾನಾಯ್ಕ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸೋಲಾರ್ ಪ್ಯಾನಲ್ ಅಳವಡಿಕೆ, ಜಲ ಮರುಪೂರಣಕ್ಕೆ ಚಿಂತನೆ
  • ಕೆಎಂಇಆರ್‌ಸಿ ಎಂಡಿ ಡಾ. ಸಂಜಯ್ ಎಸ್. ಬಿಜ್ಜೂರು ತಾಕೀತು
  • ಸಿಇಪಿಎಂಐ ಝೆಡ್
ಚಿತ್ರದುರ್ಗ: ಗಣಿಗಾರಿಕೆ ಪ್ರಭಾವಿತ ವಲಯಗಳಲ್ಲಿ ಅನುಷ್ಠಾನಗೊಳ್ಳಲಿರುವ ವಸತಿ ಯೋಜನೆಗಳ -Àಲಾನುಭವಿಗಳ ಆಯ್ಕೆ ಯಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳವುದು ಕಡ್ಡಾಯ ಎಂದು ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ. ಸಂಜಯ್ ಎಸ್. ಬಿಜ್ಜೂರ್ ಅಽಕಾರಿಗಳಿಗೆ ಸೂಚಿಸಿದರು.
ಡಿಸಿ ಕಚೇರಿಯಲ್ಲಿ ಗುರುವಾರ ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮದ ಸಿಇಪಿಎಂಐ ಝೆಡ್ ಯೋಜನೆಯಡಿ (ಗಣಿಗಾರಿ ಕೆ ಪ್ರಭಾವಕ್ಕೆ ಒಳಗಾದ ವಲಯಗಳಿಗೆ ಸಮಗ್ರ ಪರಿಸರ ಯೋಜನೆ)ಕೈಗೊಳ್ಳಲಿರುವ ಕಾಮಗಾರಿ, ಯೋಜನೆಗಳ ಪ್ರಗತಿ ಪರಿಶೀಲಿಸಿ ಅವರು ಮಾತನಾಡಿದರು.
ಒತ್ತಡಗಳಿಗೆ ಮಣಿಯದೆ ನೈಜ ಹಾಗೂ ಅರ್ಹ -Àಲಾನುಭವಿಗಳನ್ನು ವಸತಿ ಯೋಜನೆಗಳಿಗೆ ಆಯ್ಕೆ ಮಾಡಬೇಕು. ಅರ್ಹರಿಗೆ ಯೋಜನೆ ಲಾಭ ಸಿಗುವಂತೆ ನೋಡಿಕೊಳ್ಳಬೇಕು ಎಂದು ಗ್ರಾಪಂ ಅಭಿವೃದ್ಧಿ ಅಽಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದರು.
ವಸತಿ ಯೋಜನೆಗಳ ವ್ಯವಸ್ಥಿತ ಜಾರಿಗೆ ನಿವೇಶನ ರಹಿತರು ಮತ್ತು ವಸತಿ ರಹಿತರು ಎಂದು ವಿಂಗಡಿಸಿಕೊAಡು ಗ್ರಾಪಂ ವ್ಯಾಪ್ತಿಯಲ್ಲಿ ನಿವೇಶನ ರಹಿತರಿಗೆ ಮೊದಲು ನಿವೇಶನ ಕಲ್ಪಿಸುವುದು ಸರ್ಕಾರದ ಆದ್ಯತೆಯಾಗಿದೆ.
ಇದಕ್ಕಾಗಿ ಗ್ರಾಮದಿಂದ ಗರಿಷ್ಠ ೨ ಕಿ.ಮೀ.ವ್ಯಾಪ್ತಿಯೊಳಗೆ ಚುರುಕಾಗಿ ಭೂಮಿ ಗುರುತಿಸಿ, ಲೇಔಟ್‌ಗೆ ಪ್ರಸ್ತಾವನೆ ಸಲ್ಲಿಸಬೇಕು. ರಸ್ತೆಗಳು, ಕುಡಿಯುವ ನೀರು, ಬೀದಿ ದೀಪ ಹಾಗೂ ವಿದ್ಯುತ್ ಮೊದಲಾದ ಮೂಲ ಸೌಕರ್ಯಗಳಿರುವ ಸುಸಜ್ಜಿತ ಲೇಔಟ್‌ಗಳನ್ನು ನಿರ್ಮಿಸಬೇಕು.
ಇಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಅಂಗನವಾಡಿ ಕೇಂದ್ರಗಳಿಗೆ ಜಾಗ ಕಾಯ್ದಿರಿಸಬೇಕು. ಹೊಸ ಲೇಔಟ್‌ಗೆ ಗ್ರಾಮದಿಂದ ಉತ್ತಮ ಸಂಪರ್ಕ ರಸ್ತೆ ನಿರ್ಮಾಣಕ್ಕೂ ವಿಶೇಷ ಗಮನ ಹರಿಸಬೇಕು. ಯಾವುದೇ ಕಾರಣಕ್ಕೂ ಲೇಔಟ್‌ಗಳನ್ನು ಸ್ಮಶಾನಗಳ ಪಕ್ಕದಲ್ಲಿ ನಿರ್ಮಿಸಬಾರದು ಎಂದರು.
ಅನುಷ್ಠಾನದಲ್ಲಿ ನಿರ್ಲಕ್ಷ ್ಯ ಸಲ್ಲ:
ನಿಗಮದ ಯೋಜನೆಯಡಿ ಜಿಲ್ಲೆಯಲ್ಲಿ ಕೈಗೊಂಡಿರುವ ವಿವಿಧ ಕಾಮಗಾರಿಗಳ ಅನುಷ್ಠಾನದ ಹೊಣೆಗಾರಿಕೆ ಆಯಾ ಇಲಾಖಾ ಅಽಕಾರಿಗಳದ್ದಾಗಿದೆ. ವಿಳಂಬ ಹಾಗೂ ನಿರ್ಲಕ್ಷ ್ಯ ಸಹಿಸುವುದಿಲ್ಲ. ಇವುಗಳ ಸಮರ್ಪಕ ಅನುಷ್ಠಾನ ಹೊಣೆ ತಮ್ಮದಾಗಿದೆ ಎಂದು ಜಿಲ್ಲಾ ಮಟ್ಟದ ಅಽಕಾರಿಗಳನ್ನು ಎಚ್ಚರಿಸಿದರು.
ಗಣಿಗಾರಿಕೆ ಪ್ರದೇಶಗಳಲ್ಲಿ ಆರೋಗ್ಯ ಸುಧಾರಣೆಗಾಗಿ ಹಮ್ಮಿಕೊಂಡಿರುವ ವಿಶೇಷ ಕಾರ್ಯಕ್ರಮಗಳನ್ನು ಆರೋಗ್ಯ ಇಲಾಖೆ ಅಽಕಾರಿಗಳು ಸಮರ್ಪಕವಾಗಿ ನಿರ್ವಹಿಸಬೇಕು. ವಿವಿಧ ಅಭಿವೃದ್ಧಿ ಯೋಜನೆಗಳು, ಕಾಮಗಾರಿಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು ಎಂದು ತಿಳಿಸಿದರು.
ಅಂತರ್ಜಲ ಕುಸಿತದ ಆತಂಕ:
ಗಣಿಗಾರಿಕೆಯಿಂದ ಪರಿಸರದ ಮೇಲಾಗಿರುವ ಹಾನಿ ಹಾಗೂ ಒತ್ತಡ ನಿವಾರಿಸಿ ವೈಜ್ಞಾನಿಕ ಕ್ರಮಗಳ ಮೂಲಕ ಜಿಲ್ಲೆಯ ಪರಿಸರ ಪುನರ್ ಸ್ಥಾಪಿಸಬೇಕಿದೆ ಎಂದು ಜಿಪಂ ಸಿಇಒ ಡಾ. ಆಕಾಶ್ ಹೇಳಿದರು.
ಜಿಲ್ಲೆಯಲ್ಲಿ ಅಂರ್ತಜಲ ಮಟ್ಟ ತೀವ್ರಗತಿಯಲ್ಲಿ ಕುಸಿಯತ್ತಿದೆ.
ಇದರಿಂದ ಜಿಲ್ಲೆಯ ಜನ ಜೀವನ, ಕೃಷಿ ಹಾಗೂ ತೋಟಗಾರಿಕೆ ಮೇಲೆ ಸಾಕಷ್ಟು ಪ್ರಭಾವ ಬೀರಲಿದೆ. ನಿಯಂತ್ರಣಕ್ಕೆ ಜಲ ಮರು ಪೂರಣ ವ್ಯವಸ್ಥೆ ಅಗತ್ಯವಿದೆ. ಜಲತಜ್ಞ ದೇವರಾಜರೆಡ್ಡಿ ಸಲಹೆಯಂತೆ ಸರ್ಕಾರಿ ಶಾಲೆಗಳಲ್ಲಿ ಜಲ ಮರುಪೂರಣ ವ್ಯವಸ್ಥೆ ಅಳ ವಡಿಕೆಗೆ ಯೋಚಿಸಲಾಗಿದೆ.
ಶಾಲೆಗಳಲ್ಲಿ ಸೋಲಾರ್ ಪ್ಯಾನಲ್‌ಗಳನ್ನು ಅಳವಡಿಸಿ, ವಿದ್ಯುತ್ ಉತ್ಪಾಸಬಹುದು. ಪದವಿ ಹಾಗೂ ಪಿಯು ನಂತರ ವಿದ್ಯಾಭ್ಯಾ ಸ ಮಾಡಿದ ಅಂಗನವಾಡಿ ಕಾರ್ಯಕರ್ತೆಯರಿಗೆ ತರಬೇತಿ ನೀಡಿದರೆ ಪೂರ್ವ ಪ್ರಾಥಮಿಕ ವಿದ್ಯಾರ್ಥಿಗಳ ಕಲಿಕೆ ಮಟ್ಟ ಉತ್ತಮ ಗೊಳ್ಳಲಿದೆ ಎಂದರು.
ದೆಹಲಿ, ಚಂಡಿಗಡ, ಸೂರತ್ ಜಿಲ್ಲೆಗಳು ಶಾಲೆಗಳ ಚಾವಣಿಯಲ್ಲಿ ಸೋಲಾರ್ ಅಳವಡಿಸುವಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿವೆ. ಸೋಲಾರ್ -Àಲಕಗಳ ಉತ್ಪಾದನೆ ಸೂರತ್ ನಗರದಲ್ಲಿ ಹೆಚ್ಚಾಗಿದೆ. ಜಿಲ್ಲೆಯ ನಿಯೋಗ ಸೂರತ್ ನಗರಕ್ಕೆ ಭೇಟಿ ನೀಡಿ ಯೋ ಜನೆ ನೀಲನಕ್ಷೆ ರೂಪಿಸಲಿ. ಶಾಲೆ ಹಾಗೂ ಅಂಗನವಾಡಿಗಳ ಮೈದಾನದಲ್ಲಿ ನುಗ್ಗೆ, ಕರಿಬೇವು ಸಹಿತ ತರಕಾರಿ ಗಿಡಗಳು ಹಾಗೂ ಹೊಂಗೆ ಸಸಿ ನೆಡಲು ಯೋಜನೆ ರೂಪಿಸಿದರೆ ಅನುಮೋದನೆ ನೀಡುವುದಾಗಿ ಬಿಜ್ಜೂರ್ ಹೇಳಿದರು.
ಪ್ರಾಥಮಿಕ ಹಂತದ ೩೦೦ ಶಾಲೆಗಳಲ್ಲಿ ಸೋಲಾರ್ ಪ್ಯಾನಲ್ ಅಳವಡಿಸಿ ಕೆಪಿಟಿಸಿಎಲ್ ವಿದ್ಯುತ್ ಗ್ರಿಡ್‌ಗೆ ಹರಿಸಲಾಗುವುದು. ಇದೇ ಶಾಲೆಗಳಲ್ಲಿ ಜಲ ಮರುಪೂರಣ ವ್ಯವಸ್ಥೆ ಅಳವಡಿಸಲಾಗುವುದು. ಜಿಲ್ಲೆಯಲ್ಲಿ ೩೫ ಸಾವಿರ ಮಕ್ಕಳು ಅಂಗನವಾಡಿ ಮಕ್ಕಳಿಗೆ ಪ್ರಾಯೋಗಿಕ ಜ್ಞಾನವುಳ್ಳ ಶಿಕ್ಷಣದ ಯೋಜನೆ ರೂಪಿಸುವುದಾಗಿ ಆಕಾಶ್ ಹೇಳಿದರು.
ಡಿಸಿ ಟಿ. ವೆಂಕಟೇಶ್, ಜಿಪಂ ಸಿ.ಎಸ್. ಗಾಯತ್ರಿ, ಡಿಸಿಎಫ್ ಜಿ. ಗೋಪ್ಯಾನಾಯ್ಕ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಡಿಡಿ ಎಂ.ಜೆ. ಮಹೇಶ್, ಪಂಚಾಯತ್ ರಾಜ್ ಇಂಜಿನಿಯರಿAಗ್ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಹನುಮಂತಪ್ಪ, ಡಿಎಚ್‌ಒ ಡಾ.ಜಿ.ಪಿ. ರೇಣುಪ್ರಸಾದ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಡಿಡಿ ವಿಜಯ್‌ಕುಮಾರ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net