ಇನ್ನೂ ಪ್ರವಾಸಿಗರ ಸೇವೆಗೆ ದೊರಕದ ಯಾತ್ರಿನಿವಾಸ

ಚಿತ್ರದುರ್ಗ ಹೊರ ವಲಯದಲ್ಲಿ ನಿರ್ಮಿಸಿರುವ ಯಾತ್ರಿ ನಿವಾಸ.
ಚಿತ್ರದುರ್ಗ ಹೊರ ವಲಯದಲ್ಲಿ ನಿರ್ಮಿಸಿರುವ ಯಾತ್ರಿ ನಿವಾಸ.
Published on

ಪ್ರಮುಖ ಮುಖ್ಯಾಂಶಗಳು

  • ಕೋಟ್ಯಂತರ ರೂ.ವೆಚ್ಚದಲ್ಲಿ ನಿರ್ಮಿಸಿರುವ ಹೋಟೆಲ್
  • ಕೆಎಸ್‌ಟಿಡಿಸಿ ಅಽಕಾರಿಗಳ ನಿರ್ಲಕ್ಷ ್ಯ?
  • ನಿಗಮದದಿಂದ ಹಿಂಪಡೆಯಲು ಡಿಸಿ ನಿರ್ದೇಶನ
ವಿಶೇಷ ವರದಿ ಚಿತ್ರದುರ್ಗ
ನಗರದ ಹೊರವಲಯ ಸೀಬಾರ ಸಮೀಪ ಕುಟೀರ ಯೋಜನೆಯಡಿ ನಿರ್ಮಿಸಿರುವ ಯಾತ್ರಿ ನಿವಾಸ ಪ್ರವಾಸಿಗರ ಸೇವೆಗೆ ಇನ್ನೂ ಲಭ್ಯವಾಗಿಲ್ಲ.
ಚಿತ್ರದುರ್ಗ ತಾಲೂಕು ರಾ.ಹೆ.೪೮ರ ಮಾರಘಟ್ಟ ಗ್ರಾಮದ ಸರ್ವೆ ನಂ.೫೫ರ ೨ ಎಕರೆ ಜಾಗದಲ್ಲಿ ೮.೩೩ ಕೋಟಿ ರೂ. ವೆಚ್ಚ ದೊಂದಿಗೆ ೧೮೦೧ ಚದರಡಿ ವಿಸ್ತೀರ್ಣದ ಈ ಸುಸಜ್ಜಿತ ನಿವಾಸವನ್ನು ಲೋಕೋಪಯೋಗಿ ಇಲಾಖೆ ನಿರ್ಮಿಸಿದೆ.
ನಿವಾಸದ ಕಾಮಗಾರಿಯನ್ನು ಇಲಾಖೆ ಪೂರ್ಣಗೊಳಿಸಿದ ಹಲವು ತಿಂಗಳ ನಂತರದಲ್ಲಿ ಹಸ್ತಾಂತರ ಮಾಡಿಕೊಂಡಿದ್ದ ಪ್ರವಾ ಸೋದ್ಯಮ ಇಲಾಖೆ ಬಳಿಕ ಕರ್ನಾಟಕ ರಾಜ್ಯಪ್ರವಾಸೋದ್ಯಮ ಅಭಿವೃದ್ಧಿ ನಿಗಮಕ್ಕೆ(ಕೆಎಸ್‌ಟಿಡಿಸಿ)ಒಪ್ಪಿಸಿತ್ತು. ಆದರೆ, ಈ ನಿ ವಾಸ ಈವರೆಗೂ ಕಾರ್ಯಾರಂಭವಾಗಿಲ್ಲ. ಲೋಕೋಪಯೋಗಿ ಇಲಾಖೆ ಕಾಮಗಾರಿ ಪೂರ್ಣಗೊಳಿಸಿದ್ದ ಬಳಿಕವೂ ಅದನ್ನು ತನ್ನ ವಶಕ್ಕೆ ಪಡೆಯಲು ಪ್ರವಾಸೋದ್ಯಮ ಇಲಾಖೆ ಮೀನಮೇಷ ಎಣಿಸಿತ್ತು.
ನಿವಾಸದ ಕಾರ್ಯಾರಂಭಕ್ಕೆ ಸಂಬAಽಸಿದAತೆ ಕೆಎಸ್‌ಟಿಡಿಸಿ ಹಲವು ಬಾರಿ ಟೆಂಡರ್ ಕರೆದಿದ್ದರೂ ಪ್ರಯೋಜನವಾಗಿಲ್ಲ ಎಂದು ಹೇಳಲಾಗಿದೆ. ಸಂಬAಽಸಿದ ಅಽಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ಕೋಟ್ಯಂತರ ರೂ. ವೆಚ್ಚದಲ್ಲಿ ನಿರ್ಮಿಸಿರುವ ಯಾತ್ರಿ ನಿ ವಾಸ ನಿರುಪಯುಕ್ತವಾಗುತ್ತಿದೆ.
ಎಂಟು ಸುಸಜ್ಜಿತ ಕೊಠಡಿಗಳು, ಎರಡು ವಾಣಿಜ್ಯಮಳಿಗೆಗಳು, ವೆಜ್ ಮತ್ತು ನಾಜ್‌ವೆಜ್ ಕಿಚನ್‌ಗಳು, -ÀÅಡ್‌ಕೌಂಟರ್‌ಗಳು, ತಾಯಿ ಮಗು ಆರೈಕೆ ಕೊಠಡಿ, ಡೈನಿಂಗ್‌ಹಾಲ್, ಸಾರ್ವಜನಿಕ ಶೌಚಗೃಹ ಇತ್ಯಾದಿ ಅಗತ್ಯ ಮೂಲಸೌಕರ್ಯಗಳೊಂದಿಗೆ ೧೫ಕ್ಕೂ ಹೆಚ್ಚು ಕಾರುಗಳು, ಆರೇಳು ಬಸ್ಸುಗಳ ನಿಲುಗಡೆಗೆ ಇಲ್ಲಿ ವ್ಯವಸ್ಥೆ ಇದೆ.
ಕುಡಿವ ನೀರಿಗಾಗಿ ಕೊಳವೆ ಬಾವಿಯೊಂದನ್ನು ಕೊರೆಸಲಾಗಿದೆ. ಆರ್‌ಒ ಘಟಕವಿದೆ. ಮೂರು ರಾಷ್ಟಿçÃಯ ಹೆದ್ದಾರಿಗಳನ್ನು ಹೊಂ ದಿರುವ ಚಿತ್ರದುರ್ಗ ಜಿಲ್ಲೆಯಲ್ಲಿ ಪ್ರಯಾಣಿಕರು ಹಾಗೂ ಹೆಚ್ಚಿನ ಸಂಖ್ಯೆಯ ಪ್ರವಾಸಿ ತಾಣಗಳೂ ಇರುವ ಈ ಜಿಲ್ಲೆಗೆ ಪ್ರವಾಸಿಗರ ಸಂಖ್ಯೆ ಕೂಡ ಅಽಕವಿದೆ. ಹೀಗಿದ್ದರೂ ನಿರ್ಮಾಣಗೊಂಡಿರುವ ಕಟ್ಟಡವನ್ನು ಸಾರ್ವಜನಿಕರ ಸೇವೆಗೆ ಒದಗಿಸುವ ವಿಚಾರವನ್ನು ಅಽಕಾರಿಗಳು ಕಡೆಗಣಿಸಿದ್ದಾರೆ.
ಹಸ್ತಾಂತರ ಮಾಡಿಕೊಂಡ ಬಳಿಕ ಪ್ರಯಾಣಿಕರಿಗೆ ಸೇವೆ ಒದಗಿಸುವಲ್ಲಿ ವಿಫಲವಾಗಿರುವ ಕೆಎಸ್‌ಡಿಟಿಸಿ ನಡೆ ವಿರುದ್ಧ ಅಸಮಾ ಧಾನ ವ್ಯಕ್ತಪಡಿಸಿದ್ದ ಜಿಲ್ಲಾಽಕಾರಿ ಟಿ.ವೆಂಕಟೇಶ್ ಅವರು, ನಿವಾಸವನ್ನು ನಿಗಮದಿಂದ ವಾಪಾಸು ಪಡೆಯುವಂತೆ ಪ್ರವಾಸೋ ದ್ಯಮ ಇಲಾಖೆಗೆ ಸೂಚಿಸಿದ್ದರು.
ಕಳೆದ ಸೆಪ್ಟೆಂಬರ್ ೧೨ರಂದು ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಭೆಯಲ್ಲಿ ಈ ಕುರಿತು ಚರ್ಚಿಸಿ, ನಿಗಮದಿಂದ ನಿ ವಾಸವನ್ನು ಮರಳಿ ಪಡೆದು, ಸಮಿತಿಯಿಂದಲೇ ಟೆಂಡರ್ ಕರೆಯುವಂತೆ ಡಿಸಿ ಸೂಚಿಸಿದ್ದರು. ಅವರ ನಿರ್ದೇಶನದಂತೆ ಪ್ರವಾ ಸೋದ್ಯಮ ಇಲಾಖೆ ಅಽಕಾರಿಗಳು ನಿಗಮಕ್ಕೆ ಪತ್ರ ಬರೆದಿದ್ದಾರೆ. ಆದರೆ, ಪತ್ರಕ್ಕೆ ಹಲವು ತಿಂಗಳಿAದ ಯಾವುದೇ ಉತ್ತರವನ್ನು ಇಲಾಖೆಗೆ ನಿಗಮದ ಅಽಕಾರಿಗಳು ಕೊಟ್ಟಿಲ್ಲ.
"

ಈಚೆಗೆ ಕೆಎಸ್‌ಟಿಡಿಸಿ ಹಿರಿಯ ಅಽಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಬಹುತೇಕ ನಿಗಮದಿಂದಲೇ ಯಾತ್ರಿ ನಿವಾಸ ಕಾರ್ಯಾರಂಭವಾಗುವ ಸಾಧ್ಯತೆ ಇದೆ. ಜಿಲ್ಲಾಽಕಾರಿ ಅವರ ನಿರ್ದೇಶನದಂತೆ ನಿವಾಸವನ್ನು ಇಲಾಖೆಗೆ ಮರಳಿಸುವಂತೆ ಈಗಾಗಲೇ ಪತ್ರ ಬರೆಯಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net