ಹೆಸರಿಗೆ ಖಾಸಗಿ ಬಸ್ ನಿಲ್ದಾಣವಾದರೂ ಹೆಚ್ಚಾಗಿ ಬೈಕುಗಳು, ಕಾರುಗಳು, ಆಟೋಗಳು, ವಾಣಿಜ್ಯ ವಾಹನಗಳು ಸೇರಿ ಎಲ್ಲ ರೀತಿಯ ವಾಹನಗಳನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸುವುದು ಸಾಮಾನ್ಯವಾಗಿದೆ. ಇದರಿಂದ ಬಸ್‌ಗಳು ಹಾಗೂ ಪ್ರಯಾಣಿಕರಿಗೆ ಸಂಚರಿಸುವುದೇ ಸವಾಲಾಗಿದೆ. ಕಾರುಗಳು ಹಾಗೂ ವಾಣಿಜ್ಯ ವಾಹನಗಳನ್ನು ನಿಲ್ದಾಣದ ಒಳಗೆ ಪಾರ್ಕಿಂಗ್ ಮಾಡಲಾಗುತ್ತದೆ. ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಕಡೆಯಿಂದ ಬರುವ ಹಾಗೂ ಹೋಗುವ ಎಲ್ಲ ವಾಹನಗಳಿಗೂ ಖಾಸಗಿ ಬಸ್ ನಿಲ್ದಾಣ ರಸ್ತೆಯಂತಾಗಿದೆ.