ಶರಣ ಪರಂಪರೆಯ ಬಳುವಳಿ ಅಕ್ಕಮಹಾದೇವಿ

ಚಿತ್ರದುರ್ಗದ ಮುರುಘಾಮಠದಲ್ಲಿ ಗುರುವಾರ ಆಯೋಜಿಸಿದ್ದ ಅಕ್ಕಮಹಾದೇವಿ ಜಯಂತ್ಯುತ್ಸವದಲ್ಲಿ ಡಾ. ಬಸವಕುಮಾರ ಸ್ವಾಮೀಜಿ, ಬಸವ ಮುರುಘೇಂದ್ರ ಸ್ವಾಮೀಜಿ, ಶ್ರೀ ಮೋಕ್ಷಪತಿ ಸ್ವಾಮೀಜಿ, ಡಾ.ಟಿ. ಗಾಯತ್ರಿ ಇತರರು ಇದ್ದರು.
ಚಿತ್ರದುರ್ಗದ ಮುರುಘಾಮಠದಲ್ಲಿ ಗುರುವಾರ ಆಯೋಜಿಸಿದ್ದ ಅಕ್ಕಮಹಾದೇವಿ ಜಯಂತ್ಯುತ್ಸವದಲ್ಲಿ ಡಾ. ಬಸವಕುಮಾರ ಸ್ವಾಮೀಜಿ, ಬಸವ ಮುರುಘೇಂದ್ರ ಸ್ವಾಮೀಜಿ, ಶ್ರೀ ಮೋಕ್ಷಪತಿ ಸ್ವಾಮೀಜಿ, ಡಾ.ಟಿ. ಗಾಯತ್ರಿ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಡಾ.ಟಿ. ಗಾಯತ್ರಿ ಅಭಿಪ್ರಾಯ
  • ಮುರುಘಾಮಠದಲ್ಲಿ ಜಯಂತ್ಯುತ್ಸವ ಆಚರಣೆ
  • ಹನ್ನೇರಡನೇ ಶತಮಾನ
ಚಿತ್ರದುರ್ಗ: ಹನ್ನೇರಡನೇ ಶತಮಾನದ ವಚನ ಪ್ರಕಾರ ವಿಶ್ವ ಸಾಹಿತ್ಯಕ್ಕೆ ಕೊಟ್ಟ ದೊಡ್ಡ ಕೊಡುಗೆಯಾಗಿದೆ ಎಂದು ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ಟಿ. ಗಾಯತ್ರಿ ಹೇಳಿದರು.
ಮುರುಘಾಮಠದಲ್ಲಿ ಗುರುವಾರ ಆಯೋಜಿಸಿದ್ದ ವೈರಾಗ್ಯನಿಽ ಅಕ್ಕಮಹಾದೇವಿ ಅವರ ಜಯಂತಿ ಆಚರಣೆಯಲ್ಲಿ ವಿಷಯಾವಲೋಕನ ಮಾಡಿದ ಅವರು, ಬಸವಣ್ಣನವರ ನೇತÊತ್ವದಲ್ಲಿ ಅಂದಿನ ಶರಣರೆಲ್ಲರು ಸೇರಿ ಉಜ್ವಲ ಪರಂಪರೆಗೆ ನಾಂದಿಹಾಡಿದ್ದಾರೆ. ಈ ಪರಂಪರೆಯ ಬಳುವಳಿ ಅಕ್ಕಮಹಾದೇವಿ ಎಂದು ತಿಳಿಸಿದರು.
ಸಮ್ಮುಖ ವಹಿಸಿದ್ದ ಶ್ರೀಮಠದ ಬಸವ ಮುರುಘೇಂದ್ರ ಸ್ವಾಮೀಜಿ ಮಾತನಾಡಿ, ಜಗತ್ತಿನ ಮೊಟ್ಟಮೊದಲ ಸಂಸತ್ ಅಥವಾ ಮೊದಲ ಪಾರ್ಲಿಮೆಂಟ್ ಅಂದರೆ ಅನುಭವ ಮಂಟಪ. ಅಲ್ಲಿಗೆ ಅತ್ಯಂತ ಚಿಕ್ಕವಯಸ್ಸಿನ ಅಕ್ಕಮಹಾದೇವಿ ಬರಲು ಕಾರಣ ಆಕೆಗೆ ದಿವ್ಯಜ್ಞಾನ ಪ್ರಾಪ್ತವಾಗಿತ್ತು ಎಂದರು.
ಸಾನ್ನಿಧ್ಯ ವಹಿಸಿದ್ದ ಶ್ರೀಮಠದ ಆಡಳಿತ ಮಂಡಳಿ ಸದಸ್ಯ ಡಾ. ಬಸವಕುಮಾರ ಸ್ವಾಮೀಜಿ ಮಾತನಾಡಿದರು. ರಾವಂದೂರು ಮುರುಘಾಮಠದ ಶ್ರೀ ಮೋಕ್ಷಪತಿ ಸ್ವಾಮೀಜಿ, ಕಲ್ಕೆರೆಯ ಪೂರ್ಣಾನಂದರು, ಹೊಳಲ್ಕೆರೆಯ ತಿಪ್ಪೇರುದ್ರಸ್ವಾಮಿ,
ನಾಗೇನಹಳ್ಳಿಯ ಗೋವಿಂದ ಸ್ವಾಮೀಜಿ, ಡಿಎಸ್‌ಹಳ್ಳಿ ಕವಿತಾ ಹನುಮಂತರೆಡ್ಡಿ, ಶಾಂತಮ್ಮ, ಅನ್ನಪೂರ್ಣ ಸಜ್ಜನ್, ಡಾ. ದೊಡ್ಡಮಲ್ಲಯ್ಯ, ಜಿ.ಟಿ. ನಂದೀಶ್, ಟಿ.ಪಿ. ಜ್ಞಾನಮೂರ್ತಿ, ಬಸವರಾಜಕಟ್ಟಿ, ನೀಲಮ್ಮ, ಕವಿ ಗಂಗಾಧರಪ್ಪ, ಕಣಿವೆಮಾರಮ್ಮ ಸಂಘದ ತಿಪ್ಪೇಸ್ವಾಮಿ, ಪೈಲ್ವಾನ್ ತಿಪ್ಪೇಸ್ವಾಮಿ ಇತರರು ಇದ್ದರು.
ಜಮುರಾ ಕಲಾವಿದ ಉಮೇಶ್ ಪತ್ತಾರ್ ಅಕ್ಕಮಹಾದೇವಿಯವರ ವಚನ ಪ್ರಾರ್ಥಿಸಿದರು. ಅಧ್ಯಾಪಕರಾದ ಡಾ. ಸ್ನೇಹಲತಾ ಸ್ವಾಗತಿಸಿ, ಪೂಜಾ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net