ಚಿತ್ರದುರ್ಗ ತಾಲೂಕು ತಣಿಗೆಹಳ್ಳಿಯಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ವೇದಾಂತ್ ಐಒಕೆ ಹೊಲಿಗೆ ತರಬೇತಿ ಕೇಂದ್ರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಗ್ರಾಪಂ ಸದಸ್ಯ ಗೋವಿಂದ ನಾಯಕ್, ವೇದಾಂತ ಐಒಕೆ ಸಿಇಒ ಶ್ರೀ ಶೈಲಗೌಡ ಇತರರು ಇದ್ದರು.
ಚಿತ್ರದುರ್ಗ: ವೇದಾಂತ ಸೇಸಾ ಗೋವಾ ಐರನ್ ಒರ್ ಕರ್ನಾಟಕ(ಐಒಕೆ)ಸಂಸ್ಥೆ ವೇದಾಂತ -Ëಂಡೇಶನ್ ಅಡಿಯಲ್ಲಿ ಚಿತ್ರದುರ್ಗ ತಾಲೂಕು ತಣಿಗೆಹಳ್ಳಿಯಲ್ಲಿ`ವೇದಾಂತ ಹೊಲಿಗೆ ತರಬೇತಿ ಕೇಂದ್ರ'ಕ್ಕೆ ಗ್ರಾಪಂ ಸದಸ್ಯ ಗೋವಿಂದ್‌ನಾಯಕ್ ಇತ್ತೀಚೆಗೆ ಚಾಲನೆ ನೀಡಿದರು.
ಕೇಂದ್ರದಲ್ಲಿ ರಾಷ್ಟಿçÃಯ ಕೌಶಲ ಅಭಿವÊದ್ಧಿ ನಿಗಮದ ಮಾನ್ಯತೆ ಪಡೆದ ೩ ತಿಂಗಳ ಹೊಲಿಗೆ ತರಬೇತಿಯನ್ನು ತಣಿಗೆಹಳ್ಳಿ ಮತ್ತು ಸುತ್ತಮುತ್ತಲಿನ ಗ್ರಾಮಗಳ ಮಹಿಳೆಯರಿಗೆ ನೀಡಲಾಗುತ್ತದೆಎಂದರು.
ಐಒಕೆ ಸಿಇಒ ಶ್ರೀಶೈಲಗೌ ಡ ಅವರು, ವೇದಾಂತ ಐಒಕೆಯಿಂದ ತಣಿಗೆಹಳ್ಳಿ ಸೇರಿ ಚಿತ್ರದುರ್ಗ ಜಿಲ್ಲೆಯಲ್ಲಿ ೪ನೇ ಹೊಲಿಗೆ ತರಬೇತಿ ಕೇಂದ್ರವನ್ನು ಪ್ರಾರಂಭಿಸಲಾಗಿದೆ. ಈ ತರಬೇತಿ ಕೇಂದ್ರಗಳು ಮಹಿಳೆಯರ ಕೌಶಲಾಭಿವÊದ್ಧಿ ಮತ್ತು ಆರ್ಥಿಕ ಬೆಳವಣಿಗೆಗೆ ಹೆಚ್ಚಿನ ಕೊಡುಗೆ ನೀಡಲಿವೆ ಎಂದರು.
ಗೋವಿAದ ನಾಯಕ್ ಮಾತನಾಡಿ, ವೇದಾಂತ ಐಓಕೆಯಿಂದ ಗ್ರಾಮದಲ್ಲಿ ಏರ್ಪಡಿಸಿರುವ ಹೊಲಿಗೆ ತರಬೇತಿ ಕಾರ್ಯ ಕ್ರಮ ಮಹಿಳೆಯರಿಗೆ ಪ್ರಯೋಜಕಾರಿಯಾಗಿದೆ ಎಂದರು. ತಣಿಗೆಹಳ್ಳಿ ನಿವಾಸಿ ಎಚ್. ಸಂಗೀತಾ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.