೪ರಿಂದ ಚಿತ್ರದುರ್ಗದಲ್ಲಿ ಹರಿದಾಸ ಹಬ್ಬ

ಉಡುಪಿ ಶ್ರೀ ಪೇಜಾವರ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದಂಗಳವರು
ಉಡುಪಿ ಶ್ರೀ ಪೇಜಾವರ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದಂಗಳವರು
Published on

ಪ್ರಮುಖ ಮುಖ್ಯಾಂಶಗಳು

  • ಉಡುಪಿ ಪೇಜಾವರ ಶ್ರೀಗಳಿಂದ ಚಾಲನೆ
  • ಪ್ರವಚನ, ಸಾಮೂಹಿಕ ಸ್ತೋತ್ರ ಪಾರಾಯಣ
  • ಸಾಂಸ್ಕೃತಿಕ ಕಾರ್ಯಕ್ರಮ, ಶೋಭಾಯಾತ್ರೆ
ಚಿತ್ರದುರ್ಗ: ನಗರದ ಶ್ರೀ ಹರಿವಾಯು ಗುರು ಸೇವಾ ಟ್ರಸ್ಟ್ನಿಂದ ನಗರದ ವಾಸವಿ ವಿದ್ಯಾಸಂಸ್ಥೆ ಆವರಣದಲ್ಲಿ ಜ.೪ರಿಂದ ೧೧ರವರೆಗೆ ಶ್ರಿ ಹರಿವಾಯುಸ್ತುತಿ ಪಾರಾಯಣದ ೨೫ನೇ ವಾರ್ಷಿಕೋತ್ಸವ, ಶ್ರೀ ಕನಕ-ಪುರಂದರಾದಿ ಹರಿದಾಸರ ಸ್ಮರಣಾರ್ಥ `ಹರಿದಾಸ ಹಬ್ಬ-ಬೆಳ್ಳಿ ಹಬ್ಬ-೨೦೨೬' ಹಮ್ಮಿಕೊಳ್ಳಲಾಗಿದೆ.
ನಿತ್ಯ ಸಂಜೆ ೫.೩೦ರಿಂದ ರಾತ್ರಿ ೯.೩೦ರವರೆಗೆ ಭಜನೆ, ಸಾಮೂಹಿಕ ಶ್ರೀ ವಿಷ್ಣು ಸಹಸ್ರ ನಾಮ ಸ್ತೋತ್ರ ಪಾರಾಯಣ, ಪ್ರವ ಚನ, ದಾಸವಾಣಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿರುತ್ತವೆ. ವಿವಿಧ ಸಂಗೀತ ಹಾಗೂ ನೃತ್ಯ ಕಲಾವಿದರು ಭಾಗವಹಿಸಲಿದ್ದಾರೆ.
೪ ರಂದು ಸಂಜೆ ೬.೩೦ಕ್ಕೆ ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠದ ಪೀಠಾಽಪತಿ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗ ಳವರು ಉದ್ಘಾಟಿಸುವರು. ಪ್ರವಚನಕಾರ, ಭಾಗ್ಯನಗರದ ಪಂ.ಪ್ರಹ್ಲಾದಾಚಾರ್ಯ ತುಪ್ಪಸಕ್ರಿ, ಬೆಂಗಳೂರು ಉತ್ತರಾದಿಮಠ ಶ್ರೀ ಜಯತೀರ್ಥ ವಿದ್ಯಾಪೀಠದ ಪ್ರಾಚಾರ್ಯ ಪಂಡಿತ ಡಾ. ಸತ್ಯಧ್ಯಾನಾಚಾರ್ಯ ಕಟ್ಟಿ, ಸಂಸದ ಗೋವಿಂದ ಎಂ. ಕಾರಜೋಳ ಹಾಗೂ ಎಂಎಲ್‌ಸಿ ಕೆ.ಎಸ್. ನವೀನ್ ಭಾಗವಹಿಸುವರು.
ಚಿತ್ರದುರ್ಗ ಶ್ರೀ ರಾಘವೇಂದ್ರ ಮಠದ ವ್ಯವಸ್ಥಾಪಕ ಪ್ರಾಣೇಶಾಚಾರ್ಯ ಕೊಪ್ಪರ, ಬ್ರಾಹ್ಮಣ ಸಂಘದ ಅಧ್ಯಕ್ಷ ಪಿ.ಎಸ್. ಮಂಜುನಾಥ್ ಇನ್ನಿತರ ಗಣ್ಯರು ಉಪಸ್ಥಿತರಿರುವರು.
ಜ.೧೦ ರಂದು ಮುಳಬಾಗಿಲು ಶ್ರೀಪಾದರಾಜ ಮಠದ ಪೀಠಾಽಪತಿ ಶ್ರೀ ಸುಜಯನಿಽ ತೀರ್ಥ ಶ್ರೀಪಾದಂಗಳವರು ಹಾಗೂ ಬಾಳ ಗಾರು ಶ್ರೀಮದಾರ್ಯ ಆಕ್ಷೆÆÃಭ್ಯತೀರ್ಥ ಮಠದ ಕಿರಿಯ ಪೀಠಾಽಪತಿ ಶ್ರೀ ಅಕ್ಷೆÆÃಭ್ಯರಾಮಪ್ರಿಯ ತೀರ್ಥ ಶ್ರೀಪಾದಂಗಳ ವರ ಶೋಭಾ ಯಾತ್ರೆ ನಗರದಲ್ಲಿ ನಡೆಯಲಿದೆ.
ದಾಸವರೇಣ್ಯರ ಭಾವಚಿತ್ರಗಳೊಂದಿಗೆ ಉಭಯ ಶ್ರೀಗಳ ಶೋಭಾಯಾತ್ರೆ ನಗರದ ಆನೆಬಾಗಿಲು ಶ್ರೀ ಸುವೃಷ್ಠಿ ಪ್ರಾಣದೇವರ ಸನ್ನಿಧಾನದಿಂದ ಸಂಜೆ ೫.೩೦ಕ್ಕೆ ಆರಂಭವಾಗಿ ಚಿಕ್ಕಪೇಟೆ,ದೊಡ್ಡಪೇಟೆ, ರಂಗಯ್ಯನಬಾಗಿಲು, ಬಸವಮಂಟಪ ರಸ್ತೆ ಮೂಲಕ ಶ್ರೀ ವಾಸವಿ ವಿದ್ಯಾಸಂಸ್ಥೆ ತಲುಪಲಿದೆ.

ಅಂದಿನ ಸಮಾರಂಭಕ್ಕೆ ವಿಶೇಷ ಆಹ್ವಾನಿತರಾಗಿ ಬೆಂಗಳೂರು ಶ್ರೀ ರಾಘವೇಂದ್ರ ಮಠದ ಗೌರವ ವಿಚಾರಣಾಕರ್ತ ಡಾ.ಎಸ್. ಎನ್. ವೆಂಕಟೇಶಾಚಾರ್ಯ, ಮುಖ್ಯಅತಿಥಿಗಳಾಗಿ ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ಅಖಿಲ ಕರ್ನಾಟಕ ತ್ರಿಮತಸ್ಥ ಬ್ರಾಹ್ಮಣ ಅರ್ಚಕ, ಪುರೋಹಿತ ಪರಿಷತ್ ಜಿಲ್ಲಾಧ್ಯಕ್ಷ ಎಂ.ಜಿ. ರಾಘವೇಂದ್ರ ಪ್ರಸಾದ ಶರ್ಮ, ಸಂಸ್ಕಾರ ಭಾರತೀ ಜಿಲ್ಲಾ ಸಮಿತಿ ಅಧ್ಯಕ್ಷ ಉಮೇಶ್ ವಿ. ತುಪ್ಪದ ಆಗಮಿಸಲಿದ್ದಾರೆ.

ಚಿತ್ರದುರ್ಗದ ಜಿ. ಮಧ್ವರಾಜ್, ವಿ. ರಾಮಮೂರ್ತಿ ಅವರನ್ನು ಸನ್ಮಾನಿಸಲಾಗುತ್ತದೆ. ೧೧ರಂದು ನಗರದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಬೆಳಗ್ಗೆ ೫.೩೦ಕ್ಕೆ ಶ್ರೀ ಹರಿವಾಯುಸ್ತುತಿ ಪುನಃಶ್ಚರಣ ಹೋಮ ಹಾಗೂ ಸಂಜೆ ವಿ ದ್ಯಾಸಂಸ್ಥೆ ಆವರಣದಲ್ಲಿ ನಡೆ ಯುವ ಸಮಾರೋಪ ಸಮಾರಂಭದಲ್ಲಿ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಸಗೋಡು ಜಯಸಿಂಹ ಭಾಗವಹಿಸಲಿ ದ್ದಾರೆ. ಬೆಂಗಳೂರಿನ ಮೈಸೂರು ರಾಮಚಂದ್ರಾಚಾರ್ಯ ಅವರು ದೇವತಾ ಚಿತ್ರಪಟಗಳ ಪ್ರದರ್ಶನದೊಂದಿಗೆ ದಾಸ ನಮನ ಸಲ್ಲಿಸಲಿದ್ದಾರೆ.
೪ರಂದು ಬೆಳಗ್ಗೆ ೮ರಿಂದ ೯ರವರೆಗೆ ಶ್ರೀ ರಾಘವೇಂದ್ರ ಮಠದಲ್ಲಿ ವಾಲ್ಮೀಕಿ ರಾಮಾಯಣ- ಸುಂದರ ಕಾಂಡ ಕುರಿತು ಪ್ರವಚನವಿರುತ್ತದೆ ಎಂದು ಪ್ರಕಟಣೆ ತಿಳಿಸಿದೆ.
----
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net