ಗ್ಯಾರಂಟಿ ಯೋಜನೆಗಳ ಪ್ರಚಾರದ ವಿಶೇಷ ವಾಹನಕ್ಕೆ ಚಿತ್ರದುರ್ಗದಲ್ಲಿ ಬುಧವಾರ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಽಕಾರದ ಅಧ್ಯಕ್ಷ ಆರ್. ಶಿವಣ್ಣ ಚಾಲನೆ ನೀಡಿದರು. ಎಡಿಸಿ ಬಿ.ಟಿ. ಕುಮಾರಸ್ವಾಮಿ, ಡಿ.ಎನ್. ಮೈಲಾರಪ್ಪ, ಬಿ.ವಿ. ತುಕರಾಂರಾವ್, ಪ್ರಕಾಶ್ ಇತರರು ಇದ್ದರು.
ಚಿತ್ರದುರ್ಗ: ಪಂಚ ಗ್ಯಾರಂಟಿ ಯೋಜನೆಗಳು ಬಡವರ ಸ್ವಾವಲಂಬಿ ಬದುಕಿಗೆ ಆಸರೆಯಾಗಿವೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಽಕಾರದ ಜಿಲ್ಲಾಧ್ಯಕ್ಷ ಆರ್. ಶಿವಣ್ಣ ಅಭಿಪ್ರಾಯಪಟ್ಟರು. ವಾರ್ತಾ ಇಲಾಖೆಯಿಂದ ಗ್ಯಾರಂಟಿಗಳ ಪ್ರಚಾರಕ್ಕಾಗಿ ಜಿ ಲ್ಲೆಯಲ್ಲಿ ಹಮ್ಮಿಕೊಂಡಿರುವ `ಕಲಾ ಜಾಥಾ'ದ ವಿಶೇಷ ವಾಹನಕ್ಕೆ ಬುಧವಾರ ಡಿಸಿ ಕಚೇರಿ ಆವರಣದಲ್ಲಿ ಚಾಲನೆ ನೀಡಿ ಮಾತ ನಾಡಿದರು.
ಗ್ಯಾರಂಟಿಗಳು ಬಡವರ ಆರ್ಥಿಕ ಬಲವರ್ಧನೆಗೆ ಕಾರಣವಾಗಿವೆ. ಸಮಾಜದ ಕಟ್ಟ ಕಡೆ ವ್ಯಕ್ತಿಯೂ ಘನತೆಯಿಂದ ಜೀವನ ಸಾಗಿಸ ಬೇಕೆಂಬ ಆಶಯದೊಂದಿಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ನೇತÊತ್ವದ ರಾಜ್ಯ ಸರ್ಕಾರ ಅನ್ನಭಾಗ್ಯ, ಶಕ್ತಿ, ಗÊಹಲಕ್ಷಿ÷್ಮÃ, ಗೃಹಜ್ಯೋತಿ ಹಾಗೂ ಯುವನಿಽ ಸೇರಿ ಪಂಚ ಗ್ಯಾರಂಟಿಗಳನ್ನು ಜಾರಿ ಮಾಡಿದೆ ಎಂದರು.
ಎಡಿಸಿ ಬಿ.ಟಿ. ಕುಮಾರಸ್ವಾಮಿ ಮಾತನಾಡಿ, ಕಲಾ ಜಾಥಾದ ಮೂಲಕ ಗ್ಯಾರಂಟಿಗಳ ಬಗ್ಗೆ ಜಿಲ್ಲೆಯಲ್ಲಿ ಹೆಚ್ಚಿನ ಪ್ರಚಾರ ನೀಡಬೇಕು. ಜನರಲ್ಲಿ ವ್ಯಾಪಕ ಜಾಗೃತಿ ಮೂಡಿಸಬೇಕು ಎಂದರು.
ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಽಕಾರದ ಉಪಾಧ್ಯಕ್ಷ ಡಿ.ಎನ್.ಮೈಲಾರಪ್ಪ ಮಾತನಾಡಿ, ಗ್ಯಾರಂಟಿಗಳು ಜಿಲ್ಲೆಯಲ್ಲಿ ಉತ್ತಮವಾಗಿ ಅನುಷ್ಠಾನಗೊಳ್ಳುತ್ತಿವೆ ಎಂದರು.
ಜಿಲ್ಲಾ ವಾರ್ತಾಽಕಾರಿ ಬಿ.ವಿ. ತುಕಾರಾಂರಾವ್ ಮಾತನಾಡಿದರು. ಕಲಾವಿದೆ ಚಂದ್ರಕಲಾ ನೇತÊತ್ವದ ಬೀದಿನಾಟಕ ಕಲಾ ತಂಡದ ಕಲಾವಿದರು ಗ್ಯಾರಂಟಿಗಳ ಕುರಿತು ಜಾಗÊತಿ ಗೀತೆಗಳನ್ನು ಪ್ರಸ್ತುತಪಡಿಸಿದರು. ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಽಕಾರದ ತಾಲೂಕು ಅಧ್ಯಕ್ಷ ಪ್ರಕಾಶ್, ಸದಸ್ಯರಾದ ನಜಾತಾಜ್, ಮುದಾಸಿರ್ ನವಾಜ್, ಶಶಿಕಿರಣ್, ನಿತೀಶ್‌ಮುಲ್ಕಾ ಇತರರು ಇದ್ದರು.
"
ಎಲ್‌ಇಡಿ ಪರದೆ ಹೊಂದಿರುವ ಕಲಾ ಜಾಥಾದ ವಿಶೇಷ ವಾಹನವು ಜಿಲ್ಲೆಯ ಆಯ್ದ ೨೦ ಗ್ರಾಮಗಳಲ್ಲಿ ಸಂಚರಿಸಲಿದೆ. ವಿಡಿಯೋ ಪ್ರದರ್ಶನ ಹಾಗೂ ಯೋಜನೆಗಳ ಬಗ್ಗೆ ಕಲಾವಿದರು ಬೀದಿನಾಟಕ ಪ್ರದರ್ಶನದ ಮೂಲಕ ಗ್ಯಾರಂಟಿಗಳ ಕುರಿತು ಪ್ರಚಾರ ನಡೆಸುವರು.