ಚಿತ್ರದುರ್ಗದಲ್ಲಿ ಮಂಗಳವಾರ ನಡೆದ ಕಾರ್ಮಿಕ ದಿನಾಚರಣೆಯಲ್ಲಿ ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಕಾರ್ಮಿಕರ ಮಕ್ಕಳನ್ನು ಸನ್ಮಾನಿಸಲಾಯಿತು. ಟಿ.ಭೀಮೇಶ್, ವೈ.ಕುಮಾರ್, ಜೆ.ಮಂಜುನಾಥ್, ಕೆ.ಗೌಸ್‌ಪೀರ್, ನಾದಿ ಅಲಿ, ಎಂ.ಆರ್.ನರಸಿAಹಸ್ವಾಮಿ ಇತರರಿದ್ದರು.
ಚಿತ್ರದುರ್ಗ : ಇಲಾಖೆಯಲ್ಲಿ ನೋಂದಾಯಿತ ಅರ್ಹ ಕಟ್ಟಡ ಕಾರ್ಮಿಕರು ಮಾತ್ರ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆ ಯಲು ಸಾಧ್ಯ ಎಂದು ಕಾರ್ಮಿಕ ನಿರೀಕ್ಷಕ ಟಿ.ಭೀಮೇಶ್ ಹೇಳಿದರು.
ರಾಜ್ಯ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದಿAದ ಹೊಳಲ್ಕೆರೆ ರಸ್ತೆಯ ಸಂಘದ ಕಚೇರಿಯಲ್ಲಿ ಮಂಗಳವಾರ ನಡೆದ ಕಾರ್ಮಿಕ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಅರ್ಹರಿಗೆ ಹಲವು ಸವಲತ್ತುಗಳನ್ನು ನೀಡುವ ಕಲ್ಯಾಣ ಇಲಾಖೆಯಾಗಿ ಮಾರ್ಪಟ್ಟಿದ್ದು, ಕಾರ್ಮಿಕರ ಕಲ್ಯಾಣ ಮಂಡಳಿಯಿAದಲೂ ಶಕ್ತಿ ಬಂದAತಾಗಿದೆ. ಹೀಗಾಗಿ ಕಟ್ಟಡ ಕಾರ್ಮಿಕರು ಕಡ್ಡಾಯವಾಗಿ ಗುರುತಿನ ಚೀಟಿಗಳನ್ನು ಮಾಡಿಸಿಕೊಳ್ಳಬೇಕು. ನಿಗದಿತ ಸಮಯಕ್ಕೆ ನವೀಕರಣಕ್ಕೆ ಮುಂದಾಗಬೇಕು ಎಂದು ಸಲಹೆ ನೀಡಿದರು.
ಕಾರ್ಮಿಕರ ಇಬ್ಬರು ಮಕ್ಕಳಿಗೆ ಪ್ರತಿ ವರ್ಷವೂ ೧ನೇ ತರಗತಿಯಿಂದ ಸ್ನಾತಕೋತ್ತರ ಶಿಕ್ಷಣದವರೆಗೆ ವಿದ್ಯಾರ್ಥಿ ವೇತನ, ಮದು ವೆಗೆ ಸಹಾಯ ಧನ, ಸ್ವಾಭಾವಿಕ ಮರಣಕ್ಕೆ ಪರಿಹಾರ, ಅಪಘಾತದಲ್ಲಿ ಕಾರ್ಮಿಕ ಮೃತಪಟ್ಟರೆ ೮ ಲಕ್ಷ ರೂ., ವೈದ್ಯಕೀಯ ಸಹಾ ಯಧನ, ೬೦ ವರ್ಷ ತುಂಬಿದವರಿಗೆ ಪಿಂಚಣಿ, ಹೆರಿಗೆ ಭತ್ಯೆ, ತಾಯಿ ಮಗು ಸಹಾಯ ಹಸ್ತ ಆರೈಕೆಗೆ ವರ್ಷಕ್ಕೆ ೬ ಸಾವಿರ ರೂ. ನೀಡುವ ಯೋಜನೆಗಳಿವೆ. ಇಷ್ಟೆ¯್ಲÁ ಸೌಲಭ್ಯ ಪಡೆಯಲು ಇಲಾಖೆಯ ಗುರುತಿನ ಚೀಟಿ ಕಡ್ಡಾಯ. ಇಲ್ಲದಿದ್ದರೆ, ಸೌಲಭ್ಯಗಳಿಂದ ವಂಚಿತರಾಗುವಿರಿ ಎಂದು ಎಚ್ಚರಿಸಿದರು.
ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ವೈ.ಕುಮಾರ್ ಮಾತನಾಡಿ, ಗುರುತಿನ ಚೀಟಿ ಕುರಿತು ಅಸಡ್ಡೆ ಸರಿಯಲ್ಲ. ಕಲ್ಯಾಣ ಮಂ ಡಳಿ ಸ್ಥಾಪನೆಯಾಗಿ ೧೮ ವರ್ಷವಾದರೂ ಸರ್ಕಾರ ಕಣ್ಣೊರೆಸುವ ತಂತ್ರ ಅನುಸರಿಸುತ್ತಿದೆ. ಇಲಾಖೆ ಸಚಿವರಿಗೆ ಕಾರ್ಮಿಕರ ಕುರಿತು ಕಾಳಜಿ ಇಲ್ಲ. ಮಂಡಳಿಯ ಹಣ ಲೂಟಿ ಹೊಡೆಯಲಾಗುತ್ತಿದೆ ಎಂದು ಆರೋಪಿಸಿದರು.
ಮಂಡಳಿಯಲ್ಲಿ ೧೦ ಸಾವಿರ ಕೋಟಿ ರೂ. ಇದೆ. ಆದರೂ ಬಡವರಿಗೆ ಮನೆಗಳನ್ನು ಕಟ್ಟಿಸಿಕೊಡುತ್ತಿಲ್ಲ. ಭ್ರಷ್ಟಾಚಾರ ತಡೆಯಲು ಹೋರಾಡುವ ಸ್ಥಿತಿ ನಿರ್ಮಾಣವಾಗಿದೆ. ಕಾರ್ಮಿಕರ ಹೆಸರಿನಲ್ಲಿ ಅನುದಾನ ದುರ್ಬಳಕೆ ತಪ್ಪಿಸಬೇಕಿದೆ. ಮಕ್ಕಳು ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯಲು ಹಣಕಾಸಿನ ನೆರವು ಅಗತ್ಯವಿದೆ. ಗುರುತಿನ ಚೀಟಿ ನವೀಕರಣದ ಅವಽಯನ್ನು ೧ ವರ್ಷದ ಬದಲು ೩ ವರ್ಷಕ್ಕೊಮ್ಮೆ ನಿಗದಿ ಪಡಿಸಬೇಕಿದೆ ಎಂದು ಒತ್ತಾಯಿಸಿದರು.
ಸಂಘದ ರಾಜ್ಯಾಧ್ಯಕ್ಷ ಜೆ.ಮಂಜುನಾಥ್, ಕೆ.ಗೌಸ್‌ಪೀರ್, ನಾದಿ ಅಲಿ, ಎಂ.ಆರ್.ನರಸಿAಹಸ್ವಾಮಿ, ಡಿ.ಈಶ್ವರಪ್ಪ, ಚಾಂದ್ ಪೀರ್, ಇಮಾಮ್ ಮೊಹಿದ್ದೀನ್, ಮುಜಿಬು¯್ಲÁ, ವೈ.ಬಸವರಾಜ್, ಮಹಂತೇಶ್, ಸಲೀಂ, ರಾಜಣ್ಣ, ಮಾಯಣ್ಣ, ರಾಜಪ್ಪ ಸೇರಿ ಪದಾಽಕಾರಿಗಳು ಇದ್ದರು.