ದುರ್ಗಾ ಮಾತೆಯಾಗಿ ಕಂಗೊಳಿಸಿದ ಉಚ್ಚಂಗೆಮ್ಮ

ಚಿಟ್ಟೆ ಆಕಾರದ ಅಲಂಕಾರದೊAದಿಗೆ ಆಕರ್ಷಿಸಿದ ದೇವಿಯ ಉತ್ಸವಮೂರ್ತಿ.
ಚಿಟ್ಟೆ ಆಕಾರದ ಅಲಂಕಾರದೊAದಿಗೆ ಆಕರ್ಷಿಸಿದ ದೇವಿಯ ಉತ್ಸವಮೂರ್ತಿ.
Published on

ಪ್ರಮುಖ ಮುಖ್ಯಾಂಶಗಳು

  • ದೇವಿಗೆ ವಿಶೇಷ ಅಲಂಕಾರ
  • ರಾಜಬೀದಿಗಳಲ್ಲಿ ಅದ್ದೂರಿ ಮೆರವಣಿಗೆ
  • ಎಲ್ಲೆಡೆ ಭವ್ಯ ಸ್ವಾಗತ
ಚಿತ್ರದುರ್ಗ: ನಗರದ ಶಕ್ತಿದೇವತೆ ಶ್ರೀ ಉಚ್ಚಂಗಿಯಲ್ಲಮ್ಮ ದೇವಿ ಜಾತ್ರಾ ಮಹೋತ್ಸವ ಅಂಗವಾಗಿ ಶುಕ್ರವಾರ ರಾಜಬೀದಿಗಳಲ್ಲಿ ಜೋಡೆತ್ತಿನ ಗಾಡಿಯ ಮೆರವಣಿಗೆ ವೈಭವದಿಂದ ಜರುಗಿತು.
ಕೋಟೆನಾಡಿನ ಪಾಳೆಗಾರರ ಕುಲದೇವತೆ, ರಾಜಮಾತೆ ಉತ್ಸವಾಂಬೆ ದೇವಿ ಉತ್ಸವ ಮೂರ್ತಿಗೆ ಕಮಲ, ದುಂಡು ಮಲ್ಲಿಗೆ,ಗು ಲಾಬಿ, ಸೇವಂತಿ, ಸಂಪಿಗೆ, ಕನಕಾಂಬರ, ಕಾಕಡ, ಪತ್ರೆ, ಸುಗಂದರಾಜ ಮತ್ತಿತರ ಹೂಗಳಿಂದ ಅಲಂಕರಿಸಿದ ನಂತರ ಸುಸಜ್ಜಿ ತ ಉಚ್ಛಾಯದಲ್ಲಿ ಪ್ರತಿಷ್ಠಾಪಿಸಲಾಯಿತು. ಈ ವೇಳೆ ಭಕ್ತರಿಂದ ಹರ್ಷೋದ್ಗಾರ ಮೊಳಗಿತು.
ದೇವಿ ಅಲಂಕಾರ ಹಿಂದಿನ ವರ್ಷಗಳಿಗಿಂತಲೂ ಅತ್ಯಂತ ಆಕರ್ಷಣೀಯವಾಗಿತ್ತು. ಕೋಟೆ ರಸ್ತೆ ದೇವಿಯ ಸನ್ನಿಧಾನದ ಮುಂದೆ ಮಹಾಮಂಗಳಾರತಿ ನೆರವೇರಿದ ನಂತರ ಮೆರವಣಿಗೆಗೆ ಚಾಲನೆ ದೊರೆಯಿತು. ಅಲ್ಲಿಂದ ಚಿಕ್ಕಪೇಟೆ, ಆನೆ ಬಾಗಿಲು, ಬುರುಜನ ಹಟ್ಟಿ, ಸಿಹಿನೀರು ಹೊಂಡದ ರಸ್ತೆ, ಕ್ರಾಂತಿವೀರ ಸಂಗೊಳ್ಳಿರಾಯಣ್ಣ, ಮಹಾತ್ಮಗಾಂಽ, ಎಸ್‌ಬಿಐ ವೃತ್ತ, ಧರ್ಮಶಾಲೆ ರಸ್ತೆ, ದೊ ಡ್ಡಪೇಟೆ, ಜೋಗಿಮಟ್ಟಿ ರಸ್ತೆ, ಸುಣ್ಣದಗುಮ್ಮಿ, ಕರುವಿನಕಟ್ಟೆ ವೃತ್ತ, ಫಿಲ್ಟರ್ ಹೌಸ್ ಮಾರ್ಗವಾಗಿ ಸಂಚರಿಸಿ ರಾತ್ರಿ ದೇಗುಲ ತಲು ಪಿತು.
ಕಹಳೆ, ಉರುಮೆ, ತಮಟೆ, ಕರಡಿ ಚಮ್ಮಾಳ, ಡೊಳ್ಳು, ಕೀಲುಕುದುರೆ, ಬೊಂಬೆ ಕುಣಿತ, ಗೊಂಬೆ ಮತ್ತು ಸಿಂಹ, ಗೊರಿಲ್ಲಾ ಇನ್ನಿ ತರ ಪ್ರಾಣಿಗಳ ಪೋಷಾಕು ತೊಟ್ಟವರು, ವಿವಿಧ ಜನಪದ ಕಲಾತಂಡಗಳು ಮೆರವಣಿಗೆಗೆ ಮೆರುಗು ನೀಡಿದವು. ಯುವಕರು ಕುಣಿ ದು ಸಂಭ್ರಮಿಸಿದರು. ಮಹಿಳೆಯರು ಅಲ್ಲಲ್ಲಿ ತುಪ್ಪದಾರತಿ ಮಾಡಿದರು.
ಮೆರವಣಿಗೆ ಮಾರ್ಗದುದ್ದಕ್ಕೂ ರಸ್ತೆಗೆ ನೀರು ಹಾಕಿ, ರಂಗೋಲಿ ಬಿಡಿಸಿ ದೇವಿಯನ್ನು ಭವ್ಯವಾಗಿ ಸ್ವಾಗತಿಸಿದರು. ಅಲ್ಲಲ್ಲಿ ಮಜ್ಜಿಗೆ, ಪಾನಕ, ಕೋಸಂಬರಿ ವಿತರಿಸಲಾಯಿತು.
ಆಕರ್ಷಿಸಿದ ಚಿಟ್ಟೆ ಮಾದರಿ
ಉತ್ಸವಾಂಬೆಗೆ ಚಿಟ್ಟೆ ಅಲಂಕಾರ ಮಾಡಲಾಗಿದ್ದು, ಭಕ್ತರ ಕಣ್ಮನ ಸೆಳೆಯಿತು. ಷಡ್ಭುಜಗಳುಳ್ಳ ಉತ್ಸವ ಮೂರ್ತಿ ದುರ್ಗಾ ಮಾತೆಯಂತೆ ಕಂಗೊಳಿಸಿತು. ತ್ರಿಶೂಲ ಸಮೇತ ಅಶ್ವವಾಹನರೂಢ ದೇವಿ ಭಕ್ತರನ್ನು ಆಶೀರ್ವದಿಸುತ್ತಿರುವಂತೆ ಭಾಸವಾಯಿತು.
ದೇವಿಗೆ ಮೀಸಲು ಸಮರ್ಪಣೆ
ಕುಟುಂಬದ ಆರೋಗ್ಯಕ್ಕೆ ಪ್ರಾರ್ಥಿಸಿ ಸಂಪ್ರದಾಯದAತೆ ದೇವಿಗೆ ಸೀರೆ, ರವಿಕೆ, ಬಳೆ, ಅಕ್ಕಿ, ಬೇಳೆ, ಬೆಲ್ಲ, ಅರಿಷಿನ, ಕುಂಕುಮ,
ಕೊಬ್ಬರಿ, ಎಲೆ, ಅಡಕೆ, ಹಣ್ಣು, ಕಾಯಿ ಒಳಗೊಂಡ ಮಡ್ಲಕ್ಕಿಯನ್ನು ಮೀಸಲು ರೂಪದಲ್ಲಿ ನೀಡಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net