ನೀರಾ ಉತ್ಪಾದನೆಗೆ ಕೊಡಿ ಪರವಾನಗಿ ರಹಿತ ಅನುಮತಿ

 ಪರವಾನಗಿ ರಹಿತ ನೀರಾ ಉತ್ಪಾದಿಸಲು ಅನುಮತಿ ಕೊಡುವಂತೆ ಆಗ್ರಹಿಸಿ ಬಿಜೆಪಿ ರೈತ ಮೋರ್ಚಾದಿಂದ ಚಿತ್ರದುರ್ಗದಲ್ಲಿ ಗುರು ವಾರ ಎಡಿಸಿ ಬಿ.ಟಿ.ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಲಾಯಿತು. ವೆಂಕಟೇಶ ಯಾದವ್, ಲೋಕೇಶ , ಶ್ರೀರಾಮರೆಡ್ಡಿ ಇದ್ದರು.
ಪರವಾನಗಿ ರಹಿತ ನೀರಾ ಉತ್ಪಾದಿಸಲು ಅನುಮತಿ ಕೊಡುವಂತೆ ಆಗ್ರಹಿಸಿ ಬಿಜೆಪಿ ರೈತ ಮೋರ್ಚಾದಿಂದ ಚಿತ್ರದುರ್ಗದಲ್ಲಿ ಗುರು ವಾರ ಎಡಿಸಿ ಬಿ.ಟಿ.ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಲಾಯಿತು. ವೆಂಕಟೇಶ ಯಾದವ್, ಲೋಕೇಶ , ಶ್ರೀರಾಮರೆಡ್ಡಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ರೈತರ ಪರ ಜಿಲ್ಲಾಡಳಿತಕ್ಕೆ ಮನವಿ
  • ಬಿ.ಜಿ.ಕೆರೆ
  • ಬಿಜೆಪಿ ರೈತ ಮೋರ್ಚಾ
ಚಿತ್ರದುರ್ಗ: ಪರವಾನಗಿ ಇಲ್ಲದೆ ತೋಟಗಳಲ್ಲಿ ನೀರಾ ಉತ್ಪಾದಿಸಲು ರೈತರಿಗೆ ಅವಕಾಶ ಕೊಡಲು ಆಗ್ರಹಿಸಿ ಬಿಜೆಪಿ ರೈತ ಮೋರ್ಚಾ ಗುರುವಾರ ಎಡಿಸಿ ಬಿ.ಟಿ.ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿತು.
ಮೊಳಕಾಲ್ಮೂರು ತಾಲೂಕು ಬಿ.ಜಿ.ಕೆರೆಯಲ್ಲಿ ನೀರಾ ಉತ್ಪಾದಿಸುತ್ತಿದ್ದ ವಸುಂದರ -Áರಂ ಮಾಲೀಕ ಎಸ್.ಸಿ.ವೀರಭದ್ರಪ್ಪ ಅವರ ತೋಟಕ್ಕೆ ಅಬಕಾರಿ ಅಽಕಾರಿಗಳು ಏಕಾ ಏಕಿ ನುಗ್ಗಿ ಅಲ್ಲಿದ್ದ ನೀರಾ ನಾಮ-Àಲಕ ಹಾಗೂ ನೀರಾ ಉತ್ಪಾದಿಸಲು ಬಳಸುತ್ತಿದ್ದ ಪರಿಕರ ಕಿತ್ತೆಸೆದು ಪ್ರಕರಣ ದಾಖಲಿಸುವುದಾಗಿ ಬೆದರಿಸಿದ್ದಾರೆ ಎಂದು ಆಕ್ಷೇಪಿಸಿದರು.
ತಪ್ಪಿತಸ್ಥ ಅಽಕಾರಿಗಳು ಕ್ಷಮೆಯಾಚಿಸಬೇಕು. ನೀರಾ ಆರೋಗ್ಯಕರ ಪೇಯವೆದು ಪರಂಪರೆ ಹೇಳುತ್ತದೆ. ನೀರಾದ ಬೆಲ್ಲಕ್ಕೆ ಉತ್ತಮ ಗುಣಮಟ್ಟವಿದೆ. ಆದ್ದರಿಂದ ನೀರಾ ಉತ್ಪಾದಿಸಲು ಸರ್ಕಾರ ಪ್ರೋತ್ಸಾಹಿಸಬೇಕು.ರೈತರ ರಕ್ಷಣೆಗೆ ಜಿಲ್ಲಾಡಳಿತ ಮುಂದಾಗ ಬೇಕು ಎಂದು ಮನವಿ ಮಾಡಿದರು.
ಮೋರ್ಚಾ ಅಧ್ಯಕ್ಷ ವೆಂಕಟೇಶ ಯಾದವ್, ಲೋಕೇಶ, ಶ್ರೀರಾಮರೆಡ್ಡಿ, ರಾಮದಾಸ್, ನಾಗರಾಜ್‌ಬೇದ್ರೆ, ಮಲ್ಲೇಶ್, ಶಾಂತಮ್ಮ ನಾ ಗರಾಜ, ಪ್ರಭಾಕರ, ಸಿದ್ದಾರ್ಥ, ಬಸವರಾಜ, ಹರೀಶ, ಪಲ್ಲವಿ, ಪ್ರಸನ್ನ, ಮಲ್ಲೇಶಪ್ಪ, ರೇಖಾ,ಶಾಂತಮ್ಮ,ನಾಗರಾಜಪ್ಪ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net