ಸ್ಪರ್ಧಾತ್ಮಕ ಯುಗಕ್ಕೆ ತಕ್ಕಂತೆ ಸಿದ್ಧರಾಗಿ

ಚಿತ್ರದುರ್ಗದ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಪಿಯು ಡಿಡಿ ಕೆ.ತಿಮ್ಮಯ್ಯ, ಮಾರನಾಯಕ, ಎನ್.ದೊಡ್ಡಪ್ಪ, ಎನ್.ನರಸಿಂಹಮೂರ್ತಿ, ಇ.ಮಹೇಶ್‌ಬಾಬು, ಪುಟ್ಟಮ್ಮ, ಉಪನ್ಯಾಸಕರಾದ ಮೋಹನ್, ಲೋಕೇಶ್, ರಮೇಶ್, ಶ್ರೀನಿವಾಸ್ ಇದ್ದರು.
ಚಿತ್ರದುರ್ಗದ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಪಿಯು ಡಿಡಿ ಕೆ.ತಿಮ್ಮಯ್ಯ, ಮಾರನಾಯಕ, ಎನ್.ದೊಡ್ಡಪ್ಪ, ಎನ್.ನರಸಿಂಹಮೂರ್ತಿ, ಇ.ಮಹೇಶ್‌ಬಾಬು, ಪುಟ್ಟಮ್ಮ, ಉಪನ್ಯಾಸಕರಾದ ಮೋಹನ್, ಲೋಕೇಶ್, ರಮೇಶ್, ಶ್ರೀನಿವಾಸ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ವಿದ್ಯಾರ್ಥಿಗಳಿಗೆ ಪಿಯು ಡಿಡಿ ಸಲಹೆ
  • ಸಾಂಸ್ಕೃತಿಕ ಚಟುವಟಿಕೆಗಳ ಸಮಾರೋಪ
  • ಹೆಚ್ಚಿನ ವಿದ್ಯಾಭ್ಯಾಸ
ಚಿತ್ರದುರ್ಗ: ಹಿಂದೆ ಬಂಗಾರವೆAದು ಕರೆಸಿಕೊಂಡಿದ್ದ ವಿದ್ಯಾರ್ಥಿ ಜೀವನ ಇವತ್ತು ಸ್ಪರ್ಧಾತ್ಮಕ ಯುಗದಲ್ಲಿದೆ ಎಂದು ಪಿಯು ಡಿಡಿ ಕೆ.ತಿಮ್ಮಯ್ಯ ಹೇಳಿದರು.

ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ಪಿಯು ಶಿಕ್ಷಣ ಇಲಾಖೆಯಿಂದ ಹಮ್ಮಿಕೊಂಡಿದ್ದ ಕ್ರೀಡೆ, ಸಾಂಸ್ಕೃತಿಕ ಹಾಗೂ ಎನ್.ಎಸ್.ಎಸ್ ರೋವರ್ಸ್ ಘಟಕ ಚಟುವಟಿಕೆಗಳ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿ, ಪ್ರಸ್ತುತ ಸ್ಪರ್ಧಾತ್ಮಕ ಯುಗದಲ್ಲಿ ಸಣ್ಣಪುಟ್ಟ ಹುದ್ದೆಗಳಿಗೆ ಹೆಚ್ಚಿನ ವಿದ್ಯಾಭ್ಯಾಸ ಮಾಡಿದವರು ಅರ್ಜಿ ಹಾಕುತ್ತಿದ್ದಾರೆ ಎಂದರು.
ನಮ್ಮಲ್ಲಿ ಅದಕ್ಕೆ ತಕ್ಕಂತಹ ಅರ್ಹತೆ ಇರಬೇಕಿದೆ. ಈ ಹಿನ್ನೆಲೆಯಲ್ಲಿ ತಮ್ಮ ಅಭ್ಯಾಸದ ಜತೆಗೆ ಪೈಪೋಟಿಗೆ ತಕ್ಕಂತೆ ನಾವು ಸಿದ್ಧವಾಗಿರಬೇಕಿದೆ. ಕೌಶಲದ ಅಗತ್ಯವೂ ಇದೆ. ಕಾಲೇಜಿನಲ್ಲಿ ಶೇ.೭೫ ಹಾಜರಾತಿ ಇಲ್ಲದಿದ್ದರೆ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ಇರುವುದಿಲ್ಲವೆಂದು ಎಚ್ಚರಿಸಿದರು.
ಕರ್ನಾಟಕ ಬಯಲಾಟ ಅಕಾಡೆಮಿ ಸದಸ್ಯ ಮಾರನಾಯಕ ಮಾತನಾಡಿ, ಮೊಬೈಲ್ ಹಾವಳಿಯಿಂದಾಗಿ ಆಟೋಟ, ಕಲೆ, ಸಾಹಿ ತ್ಯದಂತಹ ಕ್ರಿಯಾಶೀಲ ಚಟುವಟಿಕೆಗಳು ಕಡಿಮೆ ಆಗಿವೆ ಎಂದು ಆತಂಕ ವ್ಯಕ್ತಪಡಿಸಿದರು. ಪ್ರಾಚಾರ್ಯ ಎನ್.ದೊಡ್ಡಪ್ಪ ಮಾತನಾಡಿ, ಕಾಲೇಜಿನಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕೆ ಬೇಕಾದ ಎಲ್ಲ ರೀತಿಯ ಅನುಕೂಲ ಮಾಡಲಾಗಿದೆ. ಆದರೆ ವಿದ್ಯಾರ್ಥಿಗಳು ಸರಿಯಾದ ಸಹಕಾರ ನೀಡುತ್ತಿಲ್ಲ. ಕಾಲೇಜಿನಲ್ಲಿ ೮೫೩ ವಿದ್ಯಾರ್ಥಿಗಳಿದ್ದಾರೆ. ಇವರಲ್ಲಿರುವ ೪೫೩ ದ್ವಿತೀಯ ಪಿಯು ವಿದ್ಯಾರ್ಥಿ ಗಳ ಪೈಕಿ ಹಲವರು ಕಾಲೇಜಿಗೆ ಸರಿಯಾಗಿ ಬರುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಎನ್.ನರಸಿಂಹಮೂರ್ತಿ, ಪತ್ರಕರ್ತ ಇ.ಮಹೇಶ್‌ಬಾಬು, ಪುಟ್ಟಮ್ಮ, ಉಪನ್ಯಾಸಕರಾದ ಮೋಹನ್, ಲೋಕೇಶ್, ರಮೇಶ್, ಶ್ರೀನಿವಾಸ್, ವಿದ್ಯಾರ್ಥಿ ಪ್ರತಿನಿಽಗಳಾದ ರಕ್ಷಿತಾ, ಅಭಿಷೇಕ್ ಇದ್ದರು. ೨೦೨೩-೨೪ನೇ ಸಾಲಿನ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿದ ಕಾರ್ತಿಕ್, ಗಿರೀಶ್, ಕಿಶೋರ್ ಹಾಗೂ ಕಾಲೇಜಿನ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳ ವಿಜೇತರನ್ನು ಗೌರವಿಸಲಾಯಿತು.
ರಾಹುಲ್‌ಚಿನ್ನ ಪ್ರಾರ್ಥಿಸಿದರು. ಉಪನ್ಯಾಸಕ ಸುರೇಶ್ ಸ್ವಾಗತಿಸಿ, ಶ್ರೀನಿವಾಸ್ ವಂದಿಸಿದರು, ಚನ್ನಬಸಪ್ಪ ನಿರೂಪಿಸಿದರು. ಸುರಭಿ ಮೆಲೋಡಿಸ್ ತಂಡದ ಕಲಾವಿದರು ಸಾಂಸ್ಕೃತಿಕ ಕರ‍್ಯಕ್ರಮ ನಡೆಸಿಕೊಟ್ಟರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net