ಕೆರೆ ಏರಿ ದುರಸ್ತಿಗೆ ಆಗ್ರಹ: ಹೊಸದುರ್ಗ- ದಾವಣಗೆರೆ ರಸ್ತೆ ಕೆರೆ ಏರಿ ಮೇಲೆ ಹಾದು ಹೋಗಿದೆ. ಅಂದನೂರು ಗೇಟ್‌ನಿಂದ, ಲಿಂಗದಹಳ್ಳಿವರೆಗೆ ಒಂದುವರೆ ಕಿ.ಮೀ. ದೂರದವರೆಗೆ ಕೆರೆ ಏರಿ ಮೇಲಿನ ಡಾಂಬರ್ ರಸ್ತೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ವಾಹನಗಳು ಸಂಚರಿಸುತ್ತವೆ. ಆದರೆ ಕೆರೆ ಏರಿ ಮೇಲೆ ರಸ್ತೆಯಲ್ಲಿ ಗುಂಡಿಗಳಳು ಬಿದ್ದಿವೆ. ಕೆಲವೆಡೆ ರಸ್ತೆ ಕುಸಿದಿದೆ. ಕೆರೆಯಲ್ಲಿ ನೀರು ಸಂಗ್ರಹವಾದಲ್ಲಿ ಏರಿಯ ಬಿರುಕುಗಳಲ್ಲಿ ನೀರು ಸೋರಿಕೆಯಾಗುವ ಸಂಭವವಿದೆ. ಕೆರೆ ಏರಿ ದುರಸ್ಥಿ ಮಾಡಿಸಬೇಕು ಎಂದು ಅಂದನೂರು, ಬಂಡೆಬೊಮ್ಮನಹಳ್ಳಿ, ಲಿಂಗದಹಳ್ಳಿ, ಗ್ಯಾರೆಹಳ್ಳಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ.