ಗಾಂಧೀಜಿ ಚಿಂತನೆ ಸಮಾಜಕ್ಕೆ ಅಗತ್ಯ Gandhiji

Gandhiji ಹಿರಿಯೂರು ತಾಲೂಕಿನ ಹರಿಯಬ್ಬೆ ಗ್ರಾಮದ ದಾವಣಗೆರೆ ವಿವಿ ಘಟಕ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ 'ಸತ್ಯ ಶೋಧನೆ ಪುಸ್ತಕ ಬಿಡುಗಡೆ- ಗಾಂಧೀಜಿ ಬಹು ಶಿಸ್ತೀಯ ನೋಟಗಳು' ವಿಚಾರ ಸಂಕಿರಣವನ್ನು ಕುಲಪತಿ ಬಿ.ಡಿ. ಕುಂಬಾರ್ ಉದ್ಘಾಟಿಸಿದರು. ಡಾ. ಎಂ.ಜಿ. ಗೋವಿಂದಯ್ಯ, ಕುಮಾರಯ್ಯ, ಬಿ.ಎಸ್. ರಘುನಾಥ್ ಇದ್ದರು.
Gandhiji ಹಿರಿಯೂರು ತಾಲೂಕಿನ ಹರಿಯಬ್ಬೆ ಗ್ರಾಮದ ದಾವಣಗೆರೆ ವಿವಿ ಘಟಕ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ 'ಸತ್ಯ ಶೋಧನೆ ಪುಸ್ತಕ ಬಿಡುಗಡೆ- ಗಾಂಧೀಜಿ ಬಹು ಶಿಸ್ತೀಯ ನೋಟಗಳು' ವಿಚಾರ ಸಂಕಿರಣವನ್ನು ಕುಲಪತಿ ಬಿ.ಡಿ. ಕುಂಬಾರ್ ಉದ್ಘಾಟಿಸಿದರು. ಡಾ. ಎಂ.ಜಿ. ಗೋವಿಂದಯ್ಯ, ಕುಮಾರಯ್ಯ, ಬಿ.ಎಸ್. ರಘುನಾಥ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ.ಡಿ. ಕುಂಬಾರ್ ಪ್ರತಿಪಾದನೆ
  • ರಾಷ್ಟ್ರೀಯ ವಿಚಾರ ಸಂಕಿರಣ

ಹಿರಿಯೂರು: "ಸತ್ಯ ಮತ್ತು ಅಹಿಂಸೆ ಗಾಂಧೀಜಿ ಅವರ ರಾಜಕೀಯ ಹೋರಾಟದ ಮೂಲಮಂತ್ರಗಳಾಗಿದ್ದವು. ಇವುಗಳನ್ನು ಕೇವಲ ತಂತ್ರಗಳಾಗಿ ಬಳಸದೆ ಜೀವನದ ಮೌಲ್ಯಗಳಾಗಿ ಅಳವಡಿಸಿಕೊಂಡಿದ್ದರು" ಎಂದು ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ.ಡಿ. ಕುಂಬಾರ್ ಹೇಳಿದರು.Gandhiji

ತಾಲೂಕಿನ ಹರಿಯಬ್ಬೆ ಗ್ರಾಮದ ದಾವಣಗೆರೆ ವಿವಿ ಘಟಕ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ 'ಸತ್ಯ ಶೋಧನೆ ಪುಸ್ತಕ ಬಿಡುಗಡೆ- ಗಾಂಧೀಜಿ ಬಹು ಶಿಸ್ತೀಯ ನೋಟಗಳು' ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

"ಗಾಂಧೀಜಿ ಚಿಂತನೆಗಳು ಸಮಾಜಕ್ಕೆ ಅಗತ್ಯವಾಗಿದ್ದು, ಬಹು ಶಿಸ್ತೀಯ ನೋಟವು ಕೇವಲ ರಾಜಕೀಯಕ್ಕೆ ಸೀಮಿತವಾಗಿರಲಿಲ್ಲ. ಅವರ ಆಲೋಚನೆಗಳು ಸಮಾಜಶಾಸ್ತ್ರ, ಅರ್ಥಶಾಸ್ತ್ರ, ಪರಿಸರ ವಿಜ್ಞಾನ ಮತ್ತು ಶಿಕ್ಷಣದಂತಹ ಬಹುಮುಖ ಕ್ಷೇತ್ರಗಳನ್ನು ಒಳಗೊಂಡಿದ್ದು. ಸ್ವರಾಜ್ ಪರಿಕಲ್ಪನೆಯ ಮೂಲಕ ಪ್ರತಿಯೊಂದು ಹಳ್ಳಿಯೂ ತನ್ನ ಅಗತ್ಯಗಳನ್ನು ತಾನೇ ಪೂರೈಸಿಕೊಳ್ಳುವ ಆರ್ಥಿಕ ಮಾದರಿಯನ್ನು ಬೆಂಬಲಿಸಿದ್ದರು" ಎಂದರು.

"ಜಾತಿ ವ್ಯವಸ್ಥೆ-ಅಸ್ಪೃಶ್ಯತೆಯಂತಹ ಸಾಮಾಜಿಕ ಪಿಡುಗುಗಳನ್ನು ವಿರೋಧಿಸಿ, ಸರ್ವೋದಯ ಮತ್ತು ಸಮಾಜದಲ್ಲಿ ಎಲ್ಲರಿಗೂ ಸಮಾನ ಸ್ಥಾನಮಾನಕ್ಕಾಗಿ ಶ್ರಮಿಸಿದರು. ಮಹಾತ್ಮ ಗಾಂಧೀಜಿ ಅವರ ಚಿಂತನೆ, ಆದರ್ಶ, ಸಂದೇಶ, ತತ್ವಗಳು ಸರ್ವ ಕಾಲಕ್ಕೂ ಪ್ರಸ್ತುತ" ಎಂದು ತಿಳಿಸಿದರು.

ವಿಚಾರ ಸಂಕಿರಣದ ಸಂಚಾಲಕ ಡಾ. ಎಚ್.ವಿ. ಶಾಂತರಾಜು ಮಾತನಾಡಿ, "ಗಾಂಧೀಜಿ ಅವರ ವಿಚಾರಗಳು ಕೇವಲ ಸ್ವಾತಂತ್ರ್ಯ ಹೋರಾಟಕ್ಕೆ ಸೀಮಿತವಾಗದೆ, ಶಿಕ್ಷಣ, ಸಾಮಾಜಿಕ ನ್ಯಾಯ, ಗ್ರಾಮೀಣಾಭಿವೃದ್ಧಿ, ನೈತಿಕತೆ ಮತ್ತು ಮಾನವೀಯ ಮೌಲ್ಯಗಳ ವಿವಿಧ ಆಯಾಮಗಳಲ್ಲಿ ಇಂದಿಗೂ ಪ್ರಸ್ತುತವಾಗಿವೆ" ಎಂದರು.

ದಾವಣಗೆರೆ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯೆ ಶಾರದಾ ಪಾಟೀಲ್ ಮಾತನಾಡಿ, "ಗಾಂಧೀಜಿ ಜೀವನದ ವಿಚಾರಧಾರೆಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸತ್ಯ, ಅಹಿಂಸೆ, ಸರ್ವೋದಯ, ಗ್ರಾಮ ಸ್ವರಾಜ್ಯದ ಕಲ್ಪನೆಗಳ ಒಳಾರ್ಥ ಅರಿತು ಆದರ್ಶಗಳನ್ನು ಪಾಲಿಸಬೇಕು" ಎಂದು ತಿಳಿಸಿದರು.

ವಿಚಾರಗೋಷ್ಠಿಯ ಸಂಪನ್ಮೂಲ ವ್ಯಕ್ತಿಗಳಾದ ಪ್ರೊ. ಎಂ.ಜಿ. ರಂಗಸ್ವಾಮಿ, ಡಾ. ಸತ್ಯಮಂಗಲ ಮಹಾದೇವ, ಪ್ರೊ. ಹಾ.ಮಾ. ನಾಗಾರ್ಜುನ, ಡಾ. ಎಚ್.ಜಿ. ವಿಜಯಕುಮಾರ್ ಅವರು ಮಹಾತ್ಮ ಗಾಂಧೀಜಿಯವರ ಆತ್ಮ ಚರಿತ್ರೆ 'ನನ್ನ ಸತ್ಯಾನ್ವೇಷಣೆ' ಒಂದು ಅವಲೋಕನ, ಗಾಂಧೀಜಿ ಚಿಂತನೆಗಳ ಪ್ರಸ್ತುತತೆ ಕುರಿತು ಮಾತನಾಡಿದರು.

ಜಿ.ಪಂ. ಮಾಜಿ ಅಧ್ಯಕ್ಷ ಬಿ.ಎಸ್. ರಘುನಾಥ್, ಪ್ರಾಚಾರ್ಯ ಕುಮಾರಯ್ಯ, ಶಾರದಮ್ಮ, ಬಿ.ಆರ್. ಗೋವಿಂದರಾಜು, ಡಾ. ಶಿವಪ್ರಸಾದ್ ಪಟ್ಟಣಗೆರೆ, ಎಂ.ಸಿ. ನರೇಂದ್ರ, ತಿಪ್ಪೇಸ್ವಾಮಿ, ವೆಂಕಟೇಶ್ ಗೌಡ, ಕೆ. ದೇವರಾಜ್, ಗುರುಮೂರ್ತಿ, ಉಪನ್ಯಾಸಕಿ ಗೀತಾ ಇತರರಿದ್ದರು.

"

ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರು ಪುಸ್ತಕದ ಜ್ಞಾನದ ಜೊತೆಗೆ ಕರಕುಶಲತೆ ಮತ್ತು ದೈಹಿಕ ಶ್ರಮಕ್ಕೆ ಮಹತ್ವ ನೀಡುವ ಶಿಕ್ಷಣ ಪದ್ಧತಿಯನ್ನು ಪರಿಚಯಿಸಿ, ವ್ಯಕ್ತಿಯ ಸರ್ವತೋಮುಖ ಬೆಳವಣಿಗೆಗೆ ಶಿಕ್ಷಣವೇ ಮೂಲಾಧಾರ, ಪ್ರಕೃತಿಯೊಂದಿಗೆ ಮನುಷ್ಯನ ಸಾಮರಸ್ಯದ ಬದುಕನ್ನು ಬಲವಾಗಿ ನಂಬಿದ್ದರು.

— ಡಾ. ಎಂ.ಜಿ. ಗೋವಿಂದಯ್ಯ, ನಿವೃತ್ತ ಡೀನ್
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net