ಹಿರಿಯರಿಗೆ ಅಡುಗೆ ಮನೆಯೇ ಔಷಧಾಲಯವಾಗಿತ್ತು

ಚಿತ್ರದುರ್ಗದ ಎಸ್‌ಜೆಎಂ ಫಾರ್ಮಸಿ ಕಾಲೇಜಿನಲ್ಲಿ ಶುಕ್ರವಾರ ಆರಂಭವಾದ ಎರಡು ದಿನಗಳ ಐ ಕ್ಲಾಪ್ ಅಂತಾರಾಷ್ಟಿçÃಯ ಸಮ್ಮೇಳನಕ್ಕೆ ಮುರುಘಾಮಠದ ಡಾ. ಬಸವಕುಮಾರ ಸ್ವಾಮೀಜಿ ಚಾಲನೆ ನೀಡಿದರು. ಡಾ.ಬಿ.ವೈ. ಯುವರಾಜ್, ಡಾ. ಕೆ.ಬಿ. ಗುಡಸಿ, ಡಾ. ಗಣಾಚಾರಿ, ಸಿ.ಎಚ್. ಗಿರೀಶ್, ಡಾ. ಯೋಗೇಂದ್ರ ಇತರರು ಇದ್ದರು.
ಚಿತ್ರದುರ್ಗದ ಎಸ್‌ಜೆಎಂ ಫಾರ್ಮಸಿ ಕಾಲೇಜಿನಲ್ಲಿ ಶುಕ್ರವಾರ ಆರಂಭವಾದ ಎರಡು ದಿನಗಳ ಐ ಕ್ಲಾಪ್ ಅಂತಾರಾಷ್ಟಿçÃಯ ಸಮ್ಮೇಳನಕ್ಕೆ ಮುರುಘಾಮಠದ ಡಾ. ಬಸವಕುಮಾರ ಸ್ವಾಮೀಜಿ ಚಾಲನೆ ನೀಡಿದರು. ಡಾ.ಬಿ.ವೈ. ಯುವರಾಜ್, ಡಾ. ಕೆ.ಬಿ. ಗುಡಸಿ, ಡಾ. ಗಣಾಚಾರಿ, ಸಿ.ಎಚ್. ಗಿರೀಶ್, ಡಾ. ಯೋಗೇಂದ್ರ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಡಾ.ಶ್ರೀ ಬಸವಕುಮಾರ ಸ್ವಾಮೀಜಿ ಅನಿಸಿಕೆ
  • `ಐ-ಕ್ಲಾಪ್'ಅಂತಾರಾಷ್ಟಿçÃಯ ಸಮ್ಮೇಳನ ಆರಂಭ
  • ಎಸ್‌ಜೆಎಂ ಔಷಧ ಮಹಾವಿದ್ಯಾಲಯ
ಚಿತ್ರದುರ್ಗ : ಹಿಂದಿನ ಕಾಲದಲ್ಲಿ ಹಿರಿಯರು ಅಡುಗೆ ಮನೆಯನ್ನೆ ಔಷಧಾಲಯವನ್ನಾಗಿ ಮಾಡಿಕೊಂಡಿದ್ದರು ಎಂದು ಮುರುಘಾ ಮಠದ ಆಡಳಿತ ಮಂಡಳಿ ಸದಸ್ಯ ಡಾ.ಶ್ರೀ ಬಸವಕುಮಾರ ಸ್ವಾಮೀಜಿ ಹೇಳಿದರು.
ನಗರದ ಎಸ್‌ಜೆಎಂ ಔಷಧ ಮಹಾವಿದ್ಯಾಲಯದಲ್ಲಿ ಶುಕ್ರವಾರ ಆರಂಭವಾದ ೨ ದಿನಗಳ -Áರ್ಮಸಿ ಅಭ್ಯಾಸದಲ್ಲಿನ ಇತ್ತೀಚಿನ ಪ್ರಗತಿಗಳ ಕುರಿತ `ಐ-ಕ್ಲಾಪ್'ಅಂತಾರಾಷ್ಟಿçÃಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಹಿಂದಿನವರು ಆರೋಗ್ಯದ ಹಲವು ತೊಂದರೆಗಳಿಗೆ ಮನೆ ಮದ್ದನ್ನು ಅವಲಂಬಿಸಿದ್ದರು ಎಂದು ಅದರ ಮಹತ್ವ ವಿವರಿಸಿದರು.
ಚಿತ್ರದುರ್ಗ ಸರ್ಕಾರಿ ಮೆಡಿಕಲï ಕಾಲೇಜಿನ ಡೀನ್ ಡಾ.ಬಿ.ವೈ. ಯುವರಾಜ್ ಮಾತನಾಡಿ, ನ್ಯಾನೊ ಪ್ಲಾಸ್ಟಿಕ್ ಮತ್ತು ಮಾದಕ ದ್ರವ್ಯಗಳು ಜನರನ್ನು ಅನಾರೋಗ್ಯಕ್ಕೆ ಈಡು ಮಾಡುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.
ಮೊಬೈಲï‌ನೊಂದಿಗೆ ಏಕಾಂತದಲ್ಲಿ ಸಮಯ ಕಳೆಯುವುದನ್ನು ನಿಲ್ಲಿಸಿ ಕ್ರೀಡೆ ಹಾಗೂ ಸಾಮಾಜಿಕ ಸೇವಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕೆಂದು ಯುವ ಜನರಿಗೆ ಸಲಹೆ ನೀಡಿದರು.
ಎಸ್‌ಜೆಎಂ ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ಬಿ. ಗುಡಸಿ ಮಾತನಾಡಿ, ಹಿಂದಿನ ಕಾಲದಲ್ಲಿ ಔಷಧ ಸಂಶೋಧನೆಗೆ ವರ್ಷ ಗಳೇ ಕಳೆಯುತ್ತಿದ್ದವು. ಈಗ ಎಐ ತಂತ್ರe್ಞÁನದಿAದ ಔಷಧ ಸಂಶೋಧನೆಗೆ ವೇಗ ದೊರಕಿದೆ. ವಿದ್ಯಾರ್ಥಿಗಳು ಇಂತಹ ವಿಚಾರ ಸಂಕಿರಣಗಳ ಸದುಪಯೋಗ ಪಡೆದುಕೊಳ್ಳಬೇಕು. ಔಷಧ ಬಳಕೆ ಕುರಿತಂತೆ ಜಾಗೃತಿ ಹೊಂದಿರಬೇಕು ಎಂದರು.
ಕುಲಸಚಿವ ಡಾ. ಗಣಾಚಾರಿ ಮಾತನಾಡಿ, ವಿದ್ಯಾರ್ಥಿಗಳಿಗೆ ಓದಿನೊಂದಿಗೆ ಕೌಶಲ, ತಂತ್ರe್ಞÁನದ ಅಗತ್ಯವಿದೆ ಎಂದರು.
ಸಹಾಯಕ ಔಷಧ ನಿಯಂತ್ರಕ ಸಿ.ಎಚ್. ಗಿರೀಶ್ ಮಾತನಾಡಿ, ಔಷಧ ತಂತ್ರe್ಞÁನ ಮತ್ತು ತಯಾರಿಕೆ ಅತ್ಯವಶ್ಯಕ ಮತ್ತು ಅತಿ ವೇಗದಲ್ಲಿ ಬೆಳೆಯುತ್ತಿರುವ ಕ್ಷೇತ್ರವಾಗಿದೆ. ವಿಶ್ವಕ್ಕೆ ಬೇಕಾಗುವ ಔಷಧಗಳ ಪೂರೈಕೆಯಲ್ಲಿ ಭಾರತ ಮುಂದಿನ ದಿನಗಳಲ್ಲಿ ದೊಡ್ಡ ಪಾತ್ರ ವಹಿಸಲಿದೆ ಎಂದರು.
ಬಸವೇಶ್ವರ ಆಸ್ಪತ್ರೆ ಮತ್ತು ಕಾಲೇಜಿನ ಡಾ.ಯೋಗೇಂದ್ರ ಮಾತನಾಡಿದರು. ಪ್ರಾಚಾರ್ಯ ಡಾ.ಟಿ.ಎಸ್.ನಾಗರಾಜ್ ಸ್ವಾಗತಿಸಿ, ಡಾ. ಸ್ನೇಹಲತಾ ವಂದಿಸಿದರು. ಬಿ.ಸಿ. ಪೂಜಾ, ಡಾ ಯಶೋದಾ ನಿರೂಪಿಸಿದರು. ಸಮ್ಮೇಳನದಲ್ಲಿ ದೇಶ, ವಿದೇಶ ಸಹಿತ ೪೫೦ಕ್ಕೂ ಹೆಚ್ಚು ಔಷಧ ತಜ್ಞರು ಭಾಗವಹಿಸಿದ್ದಾರೆ. ಹಲವು ತಜ್ಞರು ವಿಷಯ ಮಂಡಿಸಲಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net