ಆಹಾರ ಸರಬರಾಜು ಆಯೋಗದಿಂದ ದೂರು ಸ್ವೀಕಾರ

 ಚಿತ್ರದುರ್ಗದಲ್ಲಿ ಮಂಗಳವಾರ ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ.ಎಚ್.ಕೃಷ್ಣ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸದಸ್ಯ ಲಿಂಗಾರಾಜು ಕೋಟೆ ಇದ್ದರು.
ಚಿತ್ರದುರ್ಗದಲ್ಲಿ ಮಂಗಳವಾರ ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ.ಎಚ್.ಕೃಷ್ಣ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸದಸ್ಯ ಲಿಂಗಾರಾಜು ಕೋಟೆ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಬಿಸಿಯೂಟದ ಜತೆ ಮೊಟ್ಟೆ ವಿತರಣೆ ಕಡ್ಡಾಯ
  • ಬಿಪಿಎಲ್ ಕಾರ್ಡ್ ರದ್ದತಿ,
  • ನಿಯಮ ಬದಲಾವಣೆಗೆ ಶಿಫಾರಸು
ಚಿತ್ರದುರ್ಗ: ಜಿಲ್ಲೆಯಲ್ಲಿ ಮೂರು ದಿನಗಳ ಪ್ರವಾಸದಲ್ಲಿರುವ ರಾಜ್ಯ ಆಹಾರ ಆಯೋಗ ಡಿ.೩೧ರಂದು ಜಿಲ್ಲಾ ಕೇಂದ್ರದಲ್ಲಿ ವಾ ಸ್ತವ್ಯ ಇರಲಿದ್ದು, ಪಡಿತರ ವಿತರಣೆ, ಅಂಗನವಾಡಿ ಹಾಗೂ ವಿದ್ಯಾರ್ಥಿ ನಿಲಯಗಳಲ್ಲಿನ ಆಹಾರ ಸರಬರಾಜು ಕುರಿತು ಸಂಘ,
ಸಂಸ್ಥೆಗಳು ಮತ್ತು ಸಾರ್ವಜನಿಕರು ದೂರು ಸಲ್ಲಿಸಬಹುದು ಎಂದು ಆಯೋಗದ ಅಧ್ಯಕ್ಷ ಡಾ.ಎಚ್.ಕೃಷ್ಣ ಹೇಳಿದರು.
ನಗರದ ಡಿಸಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ೧೪ ಇಲಾಖೆಗಳ ವ್ಯಾಪ್ತಿಗೆ ಬರುವಂತಹ ಆಹಾರ ವಿತರಣೆ ಹಾಗೂ ಗುಣಮಟ್ಟಕ್ಕೆ ಸಂಬAಽಸಿದAತೆ ಆಯೋಗ ಮೇಲ್ವಿಚಾರಣೆ ನಡೆಸುತ್ತಿದೆ. ದುರ್ಬಲ ವರ್ಗದ ಜನರಿಗೆ ದೊರಕಬೇಕಾದ ಆಹಾರದ ಹಕ್ಕನ್ನು ಸಂರಕ್ಷಿಸಲಾಗುತ್ತಿದೆ ಎಂದರು.
ಸಾರ್ವಜನಿಕರ ದೂರು ಆಧರಿಸಿ ಆಯೋಗ ರಾಜ್ಯದ ೩೧ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡಿದೆ. ಆಯೋಗದ ಭೇಟಿ ಬಗ್ಗೆ ಮೊದಲೇ ಮಾಹಿತಿ ನೀಡಿದರೆ, ಅಽಕಾರಿಗಳು ತಾತ್ಕಾಲಿಕವಾಗಿ ಸಮಸ್ಯೆಗಳನ್ನು ಮುಚ್ಚಿಡುವ ಸಂಭವವಿರುತ್ತದೆ. ಈ ಹಿನ್ನೆಲೆಯಲ್ಲಿ ಹಠಾತ್ ಭೇಟಿ ನೀಡಿ, ಲೋಪ, ಭ್ರಷ್ಟಾಚಾರ ಕಂಡುಬAದರೆ ಸಂಬAಽಸಿದ ಅಽಕಾರಿಗಳ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ತಿಳಿಸಿದರು.
ಡಿ.೨೯ರಿಂದ ಚಿತ್ರದುರ್ಗ ಜಿಲ್ಲೆಯಲ್ಲಿ ಪ್ರವಾಸ ಆರಂಭಿಸಿದೆ. ಆಹಾರ ಗೋದಾಮು, ಅಂಗನವಾಡಿ, ಇಂದಿರಾ ಗಾಂಽ ವಸತಿ ಶಾಲೆ, ಸಮಾಜ ಕಲ್ಯಾಣ, ಪರಿಶಿಷ್ಟ ವರ್ಗ, ಹಿಂದುಳಿದ ವರ್ಗಗಳು ಹಾಗೂ ಅಲ್ಪಸಂಖ್ಯಾತರ ವಿದ್ಯಾರ್ಥಿನಿಲಯಗಳು, ಹಲವು ಪಡಿತರ ವಿತರಣೆ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ಈ ವೇಳೆ ಹಲವು ಸಮಸ್ಯೆಗಳನ್ನು ಗಮನಿಸಲಾಗಿದ್ದು, ಅಽಕಾರಿಗಳಿಂದ ಸ್ಪಷ್ಟನೆ ಕೋರಲಾಗಿದೆ ಎಂದರು.
ಆಹಾರ ಸರಬರಾಜು, ವಿತರಣೆಯಲ್ಲಿ ಲೋಪದೋಷಗಳ ಕುರಿತು ಸಾರ್ವಜನಿಕರು ಅಹವಾಲು ಸಲ್ಲಿಸಲು ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಕುಂದು ಕೊರತೆ ನಿವಾರಣಾಽಕಾರಿಯನ್ನು ಪ್ರತ್ಯೇಕವಾಗಿ ನೇಮಿಸುವಂತೆ ಡಿಸಿಗೆ ನಿರ್ದೇಶಿಸಲಾಗಿದೆ. ಭ್ರಷ್ಟಾಚಾರ ತಡೆಗೆ ಹಾ ಗೂ ಆಹಾರ ಧಾನ್ಯಗಳ ಸುಗಮ ವಿತರಣೆಗಾಗಿ ರಾಜ್ಯದ ಎಲ್ಲ ನ್ಯಾಯಬೆಲೆ ಅಂಗಡಿಗಳಲ್ಲಿ ಆಯೋಗದ ಅಧ್ಯಕ್ಷರು, ಸದಸ್ಯರು ಸೇರಿ ಆಹಾರ ಇಲಾಖೆ ಅಽಕಾರಿಗಳ ಹೆಸರು ಹಾಗೂ ಮೊಬೈಲ್ ನಂಬರ್‌ಗಳಿರುವ -Àಲಕಗಳನ್ನು ಅಳವಡಿಸುವಂತೆ ಸೂಚಿ ಸಲಾಗಿದೆ ಎಂದರು.
ಮAಗಳವಾರ ಹೊರತುಪಡಿಸಿ ಪ್ರತಿ ನ್ಯಾಯಬೆಲೆ ಅಂಗಡಿಗಳು ಪ್ರತಿದಿನ ಬಾಗಿಲು ತೆರೆಯಬೇಕು. ಒಂದು ದೇಶ-ಒಂದು ಪಡಿ ತರ ಚೀಟಿ ವ್ಯವಸ್ಥೆ ಜಾರಿಯಲ್ಲಿದೆ. ವಲಸಿಗ ಕಾರ್ಮಿಕರು ಹತ್ತಿರದ ಪಡಿತರ ಅಂಗಡಿಯಲ್ಲಿ ಆಹಾರ ಧಾನ್ಯಗಳನ್ನು ಪಡೆಯ ಬಹುದು. ಉಚಿತ ಆಹಾರ ಧಾನ್ಯಗಳೊಂದಿಗೆ ಸೋಪು, ಎಣ್ಣೆ ಸೇರಿ ಇತರ ವಸ್ತುಗಳ ಖರೀದಿಸುವಂತೆ ನ್ಯಾಯಬೆಲೆ
ಅಂಗಡಿಗಳಲ್ಲಿ ಒತ್ತಾಯ ಮಾಡುವಂತಿಲ್ಲ ಎಂದರು.
ಕೇAದ್ರದ ಮಾರ್ಗಸೂಚಿ ಅನುಸಾರ ವರ್ಷಕ್ಕೆ ೮ ಲಕ್ಷ ರೂ.ಅಽಕ ವಹಿವಾಟು ನಡೆಸುವವರ ಬಿಪಿಎಲ್ ಕಾರ್ಡ್ಗಳನ್ನು ರದ್ದು ಮಾಡ ಲಾಗುತ್ತಿದೆ. ಇದರಿಂದ ಸಣ್ಣಪುಟ್ಟ ವ್ಯಾಪಾರಸ್ಥರಿಗೆ ತೊಂದರೆಯಾಗುತ್ತಿದೆ. ಪೇಟಿಎಂ, -ೆÆÃನ್ ಪೇ ಮೂಲಕ ಸಣ್ಣಪುಟ್ಟ ವ್ಯಾಪಾ ರಸ್ಥರು ಸಹ ಹಣ ಪಡೆಯುವುದರಿಂದ ವರ್ಷಕ್ಕೆ ಅವರ ವಹಿವಾಟು ೮ ಲಕ್ಷ ರೂ. ಮೀರುತ್ತದೆ ಎಂದು ತಿಳಿಸಿದರು.
ಬಹಳ ಕಡಿಮೆ ಲಾಭದೊಂದಿಗೆ ವ್ಯವಹರಿಸುವ ಇವರಿಗೆ ಬಿಪಿಎಲ್ ಕಾರ್ಡ್ ರದ್ದತಿಯಿಂದ ತೊಂದರೆಯಾಗುತ್ತಿದೆ. ಆದ್ದರಿಂದ ನಿಯಮಗಳ ಮಾರ್ಪಾಡಿಗೆ ಆಯೋಗ ಶಿ-Áರಸು ಮಾಡಲಿದೆ ಎಂದರು. ಬಿಸಿಯೂಟದ ಜತೆ ಕಡ್ಡಾಯವಾಗಿ ಮೊಟ್ಟೆ ವಿತರಿಸಬೇಕು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಗರ್ಭಿಣಿಯರು ಹಾಗೂ ೩ ವರ್ಷದ ಒಳಗಿನ ಮಕ್ಕಳಿಗೆ ವಿತರಿಸುವ ಪೌಷ್ಟಿಕ ಆಹಾರದ ಗುಣಮಟ್ಟ ಕಾಪಾಡುವಂತೆ ನಿರ್ದೇಶನ ನೀಡಲಾಗಿದೆ ಎಂದು ಕÊಷ್ಣ ಹೇಳಿದರು.
ಆಯೋಗದ ಸದಸ್ಯರಾದ ಲಿಂಗರಾಜ ಕೋಟೆ, ಎಂ.ಮಾರುತಿ, ದೊಡ್ಡಲಿಂಗಣ್ಣನವರ, ಕೆ.ಎಸ್.ವಿಜಯಲಕ್ಷಿ÷್ಮ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ, ಮಹಿಳಾ ಮತ್ತು ಮಕ್ಕಳ ಅಭಿವÊದ್ಧಿ ಇಲಾಖೆ ಉಪನಿರ್ದೇಶಕ ವಿಜಯಕುಮಾರ್, ಕೆಎಸ್‌ಸಿಎಸ್‌ಇ ಜಿಲ್ಲಾ ವ್ಯವಸ್ಥಾಪಕ ಎಸ್.ಕೆ.ಮಲ್ಲಿಕಾರ್ಜುನ ಇದ್ದರು.
ವಸತಿ ಶಾಲೆ ಅವ್ಯವಸ್ಥೆಗೆ ಅಸಮಧಾನ
ಸೀಬಾರ ಸಮೀಪದ ಮೇದಾರ ಕೇತೇಶ್ವರ ಮಠದ ಬಾಡಿಗೆ ಕಟ್ಟಡದಲ್ಲಿರುವ ಇಂದಿರಾಗಾAಽ ವಸತಿ ಶಾಲೆಗೆ ಆಯೋಗ ಭೇಟಿ ನೀಡಿ ತ್ತು. ಅಲ್ಲಿ ಕನಿಷ್ಠ ಮೂಲ ಸೌಕರ್ಯಗಳಿಲ್ಲ. ೩೫೦ಕ್ಕೂ ಹೆಚ್ಚು ಮಕ್ಕಳು ನೆಲದ ಮೇಲೆ ಕುಳಿತು ಪಾಠ ಕೇಳುತ್ತಿದ್ದಾರೆ. ಅಡುಗೆ ಮನೆಯಲ್ಲಿ ಶುಚಿತ್ವ ಕಾಪಾಡಿಕೊಂಡಿಲ್ಲ. ಗ್ರಂಥಾಲಯ, ಕಂಪ್ಯೂಟರ್ ಸೌಲಭ್ಯಗಳಿಲ್ಲ. ಕಟ್ಟಡಕ್ಕೆ ಲಕ್ಷಾಂತರ ರೂ.ಬಾಡಿಗೆ ನೀಡಲಾಗುತ್ತಿದ್ದು, ಸೂಕ್ತ ಸೌಲಭ್ಯಗಳಿಲ್ಲ. ಇದಕ್ಕಾಗಿ ಕ್ರೆÊಸ್ ಕಾರ್ಯನಿರ್ವಾಹಕ ನಿರ್ದೇಶಕರಿಂದ ಸ್ಪಷ್ಟನೆ ಕೋರಿದ್ದು, ಅಽಕಾರಿಗಳಿಂದ ತಪ್ಪಾಗಿದ್ದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವುದಾಗಿ ಕೃಷ್ಣ ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net