ಶಿವ ಶರಣೆಯರ ಆದರ್ಶಗಳನ್ನು ಅನುಸರಿಸಿ

ಚಿತ್ರದುರ್ಗದಲ್ಲಿ ಮಂಗಳವಾರ ಆಯೋಜಿಸಿದ್ದ ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಮಹಿಳಾ ಘಟಕದ ಪ್ರಥಮ ವಾರ್ಷಿಕೋತ್ಸವದಲ್ಲಿ ಶರಣೆ ದಾನೇಶ್ವರಿ ಮಾತಾಜಿ, ಡಾ. ಮೀನಾಕ್ಷಿ ಖಂಡಿಮಠ, ಕೆಂಚವೀರಪ್ಪ, ಮಲ್ಲೇಶ್, ಆರ್.ಶೈಲಜಾಬಾಬು ಇತರರು ಇದ್ದರು.
ಚಿತ್ರದುರ್ಗದಲ್ಲಿ ಮಂಗಳವಾರ ಆಯೋಜಿಸಿದ್ದ ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಮಹಿಳಾ ಘಟಕದ ಪ್ರಥಮ ವಾರ್ಷಿಕೋತ್ಸವದಲ್ಲಿ ಶರಣೆ ದಾನೇಶ್ವರಿ ಮಾತಾಜಿ, ಡಾ. ಮೀನಾಕ್ಷಿ ಖಂಡಿಮಠ, ಕೆಂಚವೀರಪ್ಪ, ಮಲ್ಲೇಶ್, ಆರ್.ಶೈಲಜಾಬಾಬು ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮಹಿಳೆಯರಿಗೆ ಡಾ.ಮೀನಾಕ್ಷಿ ಖಂಡಿಮಠ ಸಲಹೆ
  • ಲಿಂಗಾಯತ ಮಹಾಸಭಾ ಜಿಲ್ಲಾ ಮಹಿಳಾ ಘಟಕದ ವಾರ್ಷಿಕೋತ್ಸವ
  • ಜಾಗತಿಕ ಲಿಂಗಾಯತ ಮಹಾಸಭಾ
ಚಿತ್ರದುರ್ಗ: ಹನ್ನೇರಡನೇ ಶತಮಾನದ ಶಿವ ಶರಣೆಯರ ಆದರ್ಶಗಳನ್ನು ಮಹಿಳೆಯರು ಅನುಸರಿಸಬೇಕು ಎಂದು ತುಮಕೂರು ವಿವಿ ನಿವೃತ್ತ ಪ್ರಾಧ್ಯಾಪಕಿ ಡಾ. ಮೀನಾಕ್ಷಿ ಖಂಡಿಮಠ ಹೇಳಿದರು.
ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಮಹಿಳಾ ಘಟಕ ನಗರದ ಶ್ರೀ ನೀಲಕಂಠೇಶ್ವರ ಸಮುದಾಯ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಘಟಕದ ಪ್ರಥಮ ವಾರ್ಷಿಕೋತ್ಸವದಲ್ಲಿ ಮಾತನಾಡಿದರು.
ಮಹಿಳೆ ಎಲ್ಲ ಕ್ಷೇತ್ರಗಳಲ್ಲೂ ಇಂದು ಸಾಧನೆ ಮಾಡುತ್ತಿದ್ದಾಳೆ. ಕುಟುಂಬದಲ್ಲಿ ಮಹಿಳೆ ಪಾತ್ರ ಅತಿ ಮುಖ್ಯವಾಗಿದೆ. ವಚನ ಸಾಹಿತ್ಯದಲ್ಲಿ ಗಂಡು, ಹೆಣ್ಣೆಂಬ ಬೇಧವಿಲ್ಲದೆ ಎಲ್ಲರನ್ನೂ ಸಮನಾಗಿ ಕಾಣಲಾಗಿದೆ. ಶಿವಶರಣರ ಸಾಹಿತ್ಯ ನಮ್ಮ ಬದುಕಿಗೆ ಪ್ರೇರಣೆಯಾಗಬೇಕಿದೆ.
ಸಂವಿಧಾನ ಕೊಟ್ಟಿರುವ ಅಭಿವ್ಯಕ್ತಿ ಸ್ವಾತಂತ್ರ‍್ಯವನ್ನು ಸದುಪಯೋಗ ಪಡಿಸಿಕೊಳ್ಳಬೇಕಿದೆ. ಮಾನವನಾಗಿ ಜನಿಸಿದ ಮೇಲೆ ಮೋಕ್ಷ ದಾರಿ ಕಂಡುಕೊಳ್ಳಬೇಕು. ಈ ಹಿನ್ನೆಲೆಯಲ್ಲಿ ವಚನಗಳು ನಮಗೆ ದಾರಿ ದೀಪವಾಗಿವೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ನಗರದ ಬಸವಮಂಟಪದ ಶರಣೆ ದಾನೇಶ್ವರಿ ಮಾತಾಜಿ ಮಾತನಾಡಿ, ಮಹಿಳೆಯರು ಕೂಡ ಪ್ರ ಗತಿ ಕಡೆಗೆ ಹೆಜ್ಜೆ ಇಟ್ಟಿದ್ದಾರೆ. ಮಹಿಳೆಯರಿಗಾಗಿ ಮಾತೆ ಮಹಾದೇವಿಯವರು ಸ್ಥಾಪಿಸಿದ್ದ ಪೀಠ ಇಂದು ಹೆಮ್ಮರವಾಗಿ ಬೆಳೆದಿದೆ ಎಂದರು.
ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಕೆಂಚವೀರಪ್ಪ, ಹೊಸದುರ್ಗ ತಾಲೂಕು ಅಧ್ಯಕ್ಷ ಮಲ್ಲೇಶ್ ಮಾತನಾಡಿದರು. ಘಟಕದ ಜಿಲ್ಲಾಧ್ಯಕ್ಷೆ ಆರ್. ಶೈಲಜಾಬಾಬು ಅಧ್ಯಕ್ಷತೆ ವಹಿಸಿದ್ದರು. ಶಾಮನೂರಿನ ಜ್ಞಾನಧಾರೆ ಪುನರುತ್ಥಾನ ವಿದ್ಯಾಸಂಸ್ಥೆ ಪ್ರಾಚಾರ್ಯೆ ಶಶಿಕಲಾ ಸುರೇಶ್ ಅವರನ್ನು ಸನ್ಮಾನಿಸಲಾಯಿತು.
ಕೆ.ಟಿ. ಶಾಂತಮ್ಮ ಪ್ರಾಸ್ತವಿಕವಾಗಿ ಮಾತನಾಡಿದರು. ಉಮಾ ರಮೇಶ್ ಸ್ವಾಗತಿಸಿ, ದೇವಕಿ ವಂದಿಸಿದರು. ಜಯಶೀಲಾ ವೀರಣ್ಣ ವಾರ್ಷಿಕ ವರದಿ ವಾಚಿಸಿದರು. ಗೀತಾ ರುದ್ರೇಶ್ ನಿರೂಪಿಸಿದರು. ನಿಖಿತಾ ಸ್ವಾಗತ ನÊತ್ಯ ನಡೆಸಿಕೊಟ್ಟರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net