ಪಂಚ ಗ್ಯಾರಂಟಿಗಳು ಜನರಿಗೆ ಶ್ರೀರಕ್ಷೆ guarantee

 ಹಿರಿಯೂರಿನ 31ನೇ ವಾರ್ಡ್‌ನಲ್ಲಿ ಶುಕ್ರವಾರ ಕಾಂಗ್ರೆಸ್ ಕಾರ್ಯಕರ್ತರ ಸಭೆ ನಡೆಸಲಾಯಿತು. ಯುವಮುಖಂಡ ಸುಹಾಸ್ ಸುಧಾಕರ್, ಈ. ಮಂಜುನಾಥ್, ಜಿ. ಪ್ರೇಮ್‌ಕುವಾರ್, ಗುರು ಇತರರಿದ್ದರು. guarantee
ಹಿರಿಯೂರಿನ 31ನೇ ವಾರ್ಡ್‌ನಲ್ಲಿ ಶುಕ್ರವಾರ ಕಾಂಗ್ರೆಸ್ ಕಾರ್ಯಕರ್ತರ ಸಭೆ ನಡೆಸಲಾಯಿತು. ಯುವಮುಖಂಡ ಸುಹಾಸ್ ಸುಧಾಕರ್, ಈ. ಮಂಜುನಾಥ್, ಜಿ. ಪ್ರೇಮ್‌ಕುವಾರ್, ಗುರು ಇತರರಿದ್ದರು. guarantee
Published on

ಪ್ರಮುಖ ಮುಖ್ಯಾಂಶಗಳು

  • ಯುವ ಮುಖಂಡ ಸುಹಾಸ್ ಸುಧಾಕರ್ ಹೇಳಿಕೆ
  • ಹಿರಿಯೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ
ಹಿರಿಯೂರು: ರಾಜ್ಯ ಸರ್ಕಾರ ಬಡವರ ಶ್ರೇಯೋಭಿವೃದ್ಧಿಗಾಗಿ ಜಾರಿ ಮಾಡಿದ ಪಂಚ ಗ್ಯಾರಂಟಿಗಳು ಜನ ಸಾವಾನ್ಯರಿಗೆ ಶ್ರೀರಕ್ಷೆಯಾಗಿದೆ ಎಂದು ಕಾಂಗ್ರೆಸ್ ಯುವ ಮುಖಂಡ ಸುಹಾಸ್ ಸುಧಾಕರ್ ಹೇಳಿದರು. ನಗರದ 31ನೇ ವಾರ್ಡ್‌ನಲ್ಲಿ ಶುಕ್ರವಾರ ಆಯೋಜಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ವಾತನಾಡಿದರು. guarantee
ಕ್ಷೇತ್ರದಲ್ಲಿ ದಿ.ಸುಧಾಕರ್ ಅವರು ಕೈಗೊಂಡ ಅಭಿವೃದ್ಧಿ ಕಾರ್ಯ, ಸವಾಜಮುಖಿ ಚಿಂತನೆ ಜನರ ಪ್ರೀತಿ ವಿಶ್ವಾಸಗಳಿಸಿದ್ದು ನಮಗೆ ಸ್ಫೂರ್ತಿಯಾಗಿದೆ. ಕುಟುಂಬಕ್ಕಿಂತ ಜನ ಸೇವೆ, ಪಕ್ಷ, ಕಾರ್ಯಕರ್ತರ ಹಿತ ಕಾಯಲು ಹೆಚ್ಚಿನ ಸಮಯ ಮೀಸಲಿಟ್ಟಿದ್ದರು. ನವ ಹಿರಿಯೂರು ನಿರ್ವಾಣಕ್ಕೆ ಅವಿರತ ಪರಿಶ್ರಮ ಪಟ್ಟರು. ತಾಲೂಕಿನ ಜನರ ಪ್ರೀತಿ, ವಿಶ್ವಾಸಕ್ಕೆ ನಮ್ಮ ಕುಟುಂಬ ಋಣಿಯಾಗಿರಲಿದೆ. ತಾಲೂಕಿನ ಅಭಿವೃದ್ಧಿಗಾಗಿ ಶ್ರಮಿಸಲಾಗುವುದು ಎಂದರು.
ನಗರಸಭೆ ವಾಜಿ ಸದಸ್ಯ ಜಿ. ಪ್ರೇಮ್‌ಕುವಾರ್ ವಾತನಾಡಿ, ದಿ. ಸುಧಾಕರ್ ಅವರಿಗೆ ತಾಲೂಕಿನಲ್ಲಿ ಜಾತಿ ಬಲ ಇಲ್ಲವಾದರೂ, ಜನರ ಬೆಂಬಲ ದೊರೆಯಿತು. ಇದರಿಂದಾಗಿ ರಾಜಕೀಯದಲ್ಲಿ ಹಂತ ಹಂತವಾಗಿ ಬೆಳೆದು ಛಾಪು ಮೂಡಿಸಿದ್ದಾರೆ. ಸುಹಾಸ್ ತಂದೆಯಂತೆ ಚಾಣಾಕ್ಷತೆ, ಜಾತ್ಯತೀತ ಮನೋಭಾವದಿಂದ ಜನರ ವಿಶ್ವಾಸಗಳಿಸಬೇಕು ಎಂದರು. ಈ. ಮಂಜುನಾಥ್, ಮಂಜುಳಾ, ಎಂ.ಎಸ್. ಈರಲಿಂಗೇಗೌಡ, ನಾಗೇಂದ್ರ ನಾಯ್ಕ, ಗುರುಪ್ರಸಾದ್, ಘಾಟ್ ರವಿ, ಶಿವಕುವಾರ್, ಜ್ಞಾನೇಶ್, ದಾದಾಪೀರ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net