

ಪ್ರಮುಖ ಮುಖ್ಯಾಂಶಗಳು
ಜಿಲ್ಲೆಗೆ ಮತ್ತೊಮ್ಮೆ ಬರದ ಛಾಯೆ ಎದುರಾಗುತ್ತಿದೆ. ಹಿಂದೆAದಿಗಿAತಲೂ ಬಿಸಿಲು ತೀವ್ರವಾಗಿದೆ. ನೀರಿನ ಕೊರತೆಯಿಂದ ಜಲಚರಗಳು ಸೇರಿ ಪ್ರಾಣಿ-ಪಕ್ಷಿಗಳು ಸಂಕಟಕ್ಕೆ ಸಿಲುಕಿವೆ. ಕೆರೆಗಳಲ್ಲಿ ಸಾಯುತ್ತಿರುವ ಮೀನುಗಳ ರಕ್ಷಣೆಗೆ ಜಿಲ್ಲಾಡಳಿತ, ಮೀನುಗಾರಿಕೆ ಇಲಾಖೆ ಮುಂದಾಗಬೇಕಿದೆ.
ಅತಿಯಾದ ಉಷ್ಣ, ಜೀವವಾಯು ಕೊರತೆಯಿಂದ ಮೃತಪಟ್ಟಿರಬಹುದು. ಸಾವಿನ ಅಂಚಿನಲ್ಲಿರುವ ಮೀನುಗಳನ್ನು ರಕ್ಷಿಸಲು ನೀರಿರುವ ಕೆರೆಗಳಿಗೆ ಸ್ಥಳಾಂತರಿಸಲು ಸೂಚಿಸಲಾಗಿದೆ. ಅಲ್ಲದೆ, ಕೆರೆ ಬಳಕೆದಾರರು ಪೊಟ್ಯಾಷಿಯಂ ಪರ್ಮಾಂಗನೇಟ್ ಔಷಧವನ್ನು ಕೆರೆಗಳಿಗೆ ಸಿಂಪಡಿಸಿದರೆ ಮೀನುಗಳನ್ನು ಸಂರಕ್ಷಿಸಬಹುದಾಗಿದೆ.