ವಿಪ ಆಗ್ನೇಯ ಪದವೀಧರರ ಕ್ಷೇತ್ರ ಮತದಾರರ ಅಂತಿಮ ಪಟ್ಟಿ

ಚಿತ್ರದುರ್ಗದಲ್ಲಿ ಮಂಗಳವಾರ ಎಡಿಸಿ ಬಿ.ಟಿ.ಕುಮಾರಸ್ವಾಮಿ ಅವರು ವಿಧಾನ ಪರಿಷತ್ ಆಗ್ನೇಯ ಪದವೀಧರ ಕ್ಷೇತ್ರದ ಮತದಾರರ ಅಂತಿಮ ಪಟ್ಟಿ ಬಿಡುಗಡೆ ಮಾಡಿದರು. ಬೀಬಿ -Áತಿಮಾ, ಮಲ್ಲಿಕಾರ್ಜುನ್ ನಾಯಕ, ಗೋಪಾಲಸ್ವಾಮಿ ನಾಯಕ, ಡಿ.ಎನ್.ಮೈಲಾರಪ್ಪ, ಪ್ರಕಾಶ್‌ರಾಮಾನಾಯ್ಕ್, ನಾಸಿರುದ್ದೀನ್, ಕಿರಣ್‌ಕುಮಾರ್ ಇದ್ದರು.
ಚಿತ್ರದುರ್ಗದಲ್ಲಿ ಮಂಗಳವಾರ ಎಡಿಸಿ ಬಿ.ಟಿ.ಕುಮಾರಸ್ವಾಮಿ ಅವರು ವಿಧಾನ ಪರಿಷತ್ ಆಗ್ನೇಯ ಪದವೀಧರ ಕ್ಷೇತ್ರದ ಮತದಾರರ ಅಂತಿಮ ಪಟ್ಟಿ ಬಿಡುಗಡೆ ಮಾಡಿದರು. ಬೀಬಿ -Áತಿಮಾ, ಮಲ್ಲಿಕಾರ್ಜುನ್ ನಾಯಕ, ಗೋಪಾಲಸ್ವಾಮಿ ನಾಯಕ, ಡಿ.ಎನ್.ಮೈಲಾರಪ್ಪ, ಪ್ರಕಾಶ್‌ರಾಮಾನಾಯ್ಕ್, ನಾಸಿರುದ್ದೀನ್, ಕಿರಣ್‌ಕುಮಾರ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲೆಯಲ್ಲಿ ೪೧,೩೫೮ ಮತದಾರರು
  • ಎಡಿಸಿ ಬಿ.ಟಿ.ಕುಮಾರ ಸ್ವಾಮಿ ಮಾಹಿತಿ
  • ರಾಜಕೀಯ ಪಕ್ಷಗಳ ಪ್ರತಿನಿಽಗಳೊಂದಿಗೆ ಸಭೆ
ಚಿತ್ರದುರ್ಗ :ಕರ್ನಾಟಕ ವಿಧಾನ ಪರಿಷತ್ ಆಗ್ನೇಯ ಪದವೀಧರರ ಕ್ಷೇತ್ರದ ಮತದಾರರ ಅಂತಿಮ ಪಟ್ಟಿಯನ್ನು ವಿವಿಧ ರಾಜ ಕೀಯ ಪಕ್ಷಗಳ ಪ್ರತಿನಿಽಗಳ ಸಮ್ಮುಖದಲ್ಲಿ ಎಡಿಸಿ ಬಿ.ಟಿ.ಕುಮಾರಸ್ವಾಮಿ ಅವರ ಕಚೇರಿಯಲ್ಲಿ ಮಂಗಳವಾರ ಪ್ರಕಟಿಸಿದರು.
ಮತದಾರರ ಅಂತಿಮ ಪಟ್ಟಿ ಪ್ರಕಟಣೆ ಕುರಿತಂತೆ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಽಗಳೊಂದಿಗೆ ಸಭೆ ನಡೆಸಿದ ಅವರು, ಮ ತದಾರರ ನೋಂದಣಿ ನಿಯಮಗಳಿಗೆ ಅನುಸಾರವಾಗಿ ಸಿದ್ಧಪಡಿಸಿರುವ ಕರ್ನಾಟಕ ಆಗ್ನೇಯ ಪದವೀಧರರ ಕ್ಷೇತ್ರದ ಅಂತಿಮ ಮತದಾರರ ಪಟ್ಟಿಯನ್ನು ಸಾರ್ವಜನಿಕರ ಮಾಹಿತಿಗಾಗಿ ಜಿಲ್ಲಾಽಕಾರಿ, ಉಪವಿಭಾಗಾಽಕಾರಿ ಹಾಗೂ ಜಿಲ್ಲೆಯ ಎಲ್ಲ ತಹಸೀಲ್ದಾ ರ್‌ಗಳ ಕಚೇರಿಗಳಲ್ಲಿ ಪ್ರಕಟಿಸಲಾಗಿದೆ. ಈ ಕ್ಷೇತ್ರದ ಮತದಾರರ ಕರಡು ಪಟ್ಟಿಯಲ್ಲಿ ೩೭,೧೯೮ ಮತದಾರರು ಇದ್ದಾರೆ.
ಪ್ರಕಟಿತ ಮತದಾರರ ಅಂತಿಮ ಪಟ್ಟಿ ಅನ್ವಯ ೨೪,೦೩೧ ಪುರುಷರು, ೧೭,೩೨೭ ಮಹಿಳಾ ಮತದಾರರು ಸೇರಿ ೪೧,೩೫೮ ಮತದಾರರು ಇದ್ದಾರೆ ಎಂದರು.
ಚುನಾವಣಾ ತಹಸೀಲ್ದಾರ್ ಬೀಬಿ -Áತಿಮಾ, ಶಿರಸ್ತೇದಾರ್ ಮಲ್ಲಿಕಾರ್ಜುನ್ ನಾಯಕ, ಜೆಡಿಎಸ್ ಜಿಲ್ಲಾ ಮಹಾ ಪ್ರಧಾನ ಕರ‍್ಯ ದರ್ಶಿ ಗೋಪಾಲಸ್ವಾಮಿ ನಾಯಕ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕರ‍್ಯದರ್ಶಿ ಡಿ.ಎನ್.ಮೈಲಾರಪ್ಪ, ಪದವೀಧರರ ವಿಭಾಗದ ಜಿಲ್ಲಾ ಧ್ಯಕ್ಷ ಪ್ರಕಾಶ್‌ರಾಮಾನಾಯ್ಕ್, ಕಾರ್ಯದರ್ಶಿ ನಾಸಿರುದ್ದೀನ್, ಬಿಜೆಪಿಯ ಕಿರಣ್‌ಕುಮಾರ್ ಇದ್ದರು.
----
ತಾಲೂಕುವಾರು ಮತದಾರರ ವಿವರ
ತಾಲೂಕು-ಪುರುಷ- ಮಹಿಳೆ-ಒಟ್ಟು
ಮೊಳಕಾಲ್ಮೂರು-೨,೨೨೬-೧,೦೮೦ ೩,೩೦೬
ಚಳ್ಳಕೆರೆ-೪,೬೮೮-೩,೧೨೬-೭,೮೧೪.
ಚಿತ್ರದುರ್ಗ-೭,೧೪೪-೬೨೭೩-೧೩,೪೧೭
ಹಿರಿಯೂರು-೪,೧೮೫-೩,೦೭೫-೭೨೬೦
ಹೊಸದುರ್ಗ-೩,೧೯೬-೨,೦೨೨-೫,೨೧೮
ಹೊಳಲ್ಕೆರೆ-೨,೫೯೨-೧,೭೫೧-೪,೩೪೩
---
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net