ಬೆಳಗೆರೆಯಲ್ಲಿ ಸಂಭ್ರಮದ ಏಕಾದಶಿ ಪೂಜೆ ಸಂಪನ್ನ Ekadashi

ಬೆಳೆಗೆರೆಯಲ್ಲಿ ಆಚರಿಸಿದ ಏಕಾದಶಿ ಹಬ್ಬಕ್ಕೆ ಕರೆತಲಾಗಿದ್ದ ಶ್ರೀಯಲ್ಲಮ್ಮ ದೇವಿಯನ್ನು ಮರಳಿ ಮೂಲ ಸ್ಥಾನ ನಾರಾಯಣಪುರಕ್ಕೆ ಮೆರವಣಿಗೆ ಮೂಲಕ ಕರೆದೊಯ್ಯುತ್ತಿರುವ ಭಕ್ತರು. Ekadashi
ಬೆಳೆಗೆರೆಯಲ್ಲಿ ಆಚರಿಸಿದ ಏಕಾದಶಿ ಹಬ್ಬಕ್ಕೆ ಕರೆತಲಾಗಿದ್ದ ಶ್ರೀಯಲ್ಲಮ್ಮ ದೇವಿಯನ್ನು ಮರಳಿ ಮೂಲ ಸ್ಥಾನ ನಾರಾಯಣಪುರಕ್ಕೆ ಮೆರವಣಿಗೆ ಮೂಲಕ ಕರೆದೊಯ್ಯುತ್ತಿರುವ ಭಕ್ತರು. Ekadashi
Published on

ಪ್ರಮುಖ ಮುಖ್ಯಾಂಶಗಳು

  • ಗ್ರಾಮಕ್ಕೆ ಆಗಮಿಸಿದ್ದ ಕಟ್ಟೆಮನೆಯ ಅಣ್ಣತಮ್ಮಂದಿರು
  • ಗ್ರಾಮ ದೇವತೆಗಳ ಮೆರವಣಿಗೆ
ಚಳ್ಳಕೆರೆ: ತಾಲೂಕಿನ ಬೆಳಗೆರೆಯಲ್ಲಿ 2 ದಿನಗಳ ಕಾಲ ಜರುಗಿದ ಚಲವಾದಿ ಕಟ್ಟೆಮನೆ ಮಂದ್ಲರ ಆಷಾಢ ಮಾಸದ ಪ್ರಥಮ ಏಕಾದಶಿ ಹಬ್ಬ ಭಾನುವಾರ ಸಂಪನ್ನಗೊಂಡಿತು. Ekadashi
ವಿವಿಧ ಕಡೆಗಳಲ್ಲಿ ನೆಲೆಸಿರುವ ಕಟ್ಟೆಮನೆಯ ಅಣ್ಣತಮ್ಮಂದಿರರು ಏಕಾದಶಿ ಹಬ್ಬದ ಪ್ರಯುಕ್ತ ಗ್ರಾಮಕ್ಕೆ ಆಗಮಿಸಿದ್ದರು. ಹಬ್ಬದ ಮೊದಲ ದಿನದ ಪೂಜಾ ಕಾರ್ಯಗಳನ್ನು ಹಿರಿಯ ಸಂಪ್ರದಾಯದಂತೆ ಆರಂಭಿಸಿದರು.
ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ, ಶ್ರೀ ಲಕ್ಷ್ಮಿ ದೇವರು ಮತ್ತು ಶ್ರೀ ಯಲ್ಲಮ್ಮದೇವಿಗೆ ಗಂಗಾ ಪೂಜೆಯೊಂದಿಗೆ ಮೆರವಣಿಗೆ ನಡೆಸಲಾಯಿತು. ಎರಡನೇ ದಿನ ಎಲೆ ಪೂಜೆ ನೆರವೇರಿಸಿ, ಗರುಡಗಂಬದ ಹತ್ತಿರ ಮೇಲುದೀವಿಗೆ ಹೊತ್ತಿಸಿ ದೊಡ್ಡಮಣೇವು ಹಾಕಿ ನಂತರ ಭಕ್ತರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.
ಹಬ್ಬದ ಆರಂಭದಲ್ಲಿ ಗೊಂದಲ ಉಂಟಾಗಿತ್ತು. ಹಿರಿಯ ಆಚರಣೆಗೆ ಧಕ್ಕೆ ತರದಂತೆ ಹೊಂದಾಣಿಕೆಯಿಂದ ಹಬ್ಬ ಆಚರಿಸುವುದಾಗಿ ತಹಸೀಲ್ದಾರ್ ಸಮ್ಮುಖದಲ್ಲಿ ಜರುಗಿದ ಸಭೆಯಲ್ಲಿ ತಿಳಿಸಿದ್ದರು. ಅದರಂತೆ ಯಾವುದೇ ಅಹಿತಕರ ಘಟನೆಗೆ ಅವಕಾಶವಿಲ್ಲದಂತೆ ಹಬ್ಬ ಆಚರಿಸಲಾಯಿತು. ದೂರದ ಊರುಗಳಿಂದ ಆಗಮಿಸಿದ್ದ ಅಣ್ಣತಮ್ಮಂದಿರಿಗೆ ಊಟ, ವಸತಿ ಅನುಕೂಲ ಕಲ್ಪಿಸಿದ್ದರು.
ತಾಪಂ ಮಾಜಿ ಸದಸ್ಯ ಕೆ. ಜಯರಾಮಪ್ಪ, ಮುಖಂಡ ಚೊಕ್ಕಣ್ಣ, ತಾಪಂ ಮಾಜಿ ಸದಸ್ಯ ಟಿ. ನಿಜಲಿಂಗಪ್ಪ, ಕೆಪಿಸಿಸಿ ಕಾರ್ಯಕಾರಿ ಸಮಿತಿ ಸದಸ್ಯ ಕೆ. ದೇವರಾಜ್, ಗುಡಿಬಂಡೆ ಮೂರ್ತಪ್ಪ, ಎನ್.ಆರ್. ಶಿವಣ್ಣ, ನಿವೃತ್ತ ಶಿಕ್ಷಕ ವೈ. ತಿಪ್ಪೇಸ್ವಾಮಿ, ನಿವೃತ್ತ ಇಂಜಿನಿಯರ್ ಬಿ.ಎ. ಪರಮೇಶ್ವರಪ್ಪ, ಪ್ರೊ. ರಂಗಸ್ವಾಮಿ, ವಿನಯ್, ವಿಶ್ವೇಶ್ವರಯ್ಯ, ಶಿವಪುರ ತಿಪ್ಪೇಸ್ವಾಮಿ, ಮೆದನಹಳ್ಳಿ ರಮೇಶ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net