ಚಿತ್ರದುರ್ಗದಲ್ಲಿ ಪ್ರತ್ಯೇಕ ಹಾಲು ಒಕ್ಕೂಟಕ್ಕೆ ಕೃಷಿಕ ಸಮಾಜ ಒತ್ತಾಯ

ಚಿತ್ರದುರ್ಗದಲ್ಲಿ ಬುಧವಾರ ಆಯೋಜಿಸಿದ್ದ ಜಿಲ್ಲಾ ಕೃಷಿಕ ಸಮಾಜದಲ್ಲಿ ಎನ್.ಆರ್. ಮಹೇಶ್ವರಪ್ಪ, ರಾಗಿ ಶಿವಮೂರ್ತಪ್ಪ, ಭಕ್ತ ಪ್ರಹ್ಲಾ ದ್, ಮಿಥುನ್‌ಕುಮಾರ್, ಚಂದ್ರಶೇಖರಪ್ಪ, ಶಿವಲಿಂಗಪ್ಪ ಇತರರು ಇದ್ದರು.
ಚಿತ್ರದುರ್ಗದಲ್ಲಿ ಬುಧವಾರ ಆಯೋಜಿಸಿದ್ದ ಜಿಲ್ಲಾ ಕೃಷಿಕ ಸಮಾಜದಲ್ಲಿ ಎನ್.ಆರ್. ಮಹೇಶ್ವರಪ್ಪ, ರಾಗಿ ಶಿವಮೂರ್ತಪ್ಪ, ಭಕ್ತ ಪ್ರಹ್ಲಾ ದ್, ಮಿಥುನ್‌ಕುಮಾರ್, ಚಂದ್ರಶೇಖರಪ್ಪ, ಶಿವಲಿಂಗಪ್ಪ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಅನಽಕೃತ ಶಾಲೆಗಳ ವಿರುದ್ಧ ಕ್ರಮ ಜರುಗಿಸಿ
  • ರೇಷ್ಮೆ ಕೃಷಿ ಉತ್ತೇಜಿಸಲು ನಿರ್ದೇಶನ
  • ಜೂನ್‌ನಿಂದ ಕುರಿ,ಮೇಕೆಗಳಿಗೆ ಲಸಿಕೆ
ಚಿತ್ರದುರ್ಗ: ಶಿವಮೊಗ್ಗ ಹಾಲು ಒಕ್ಕೂಟದಿಂದ ಪ್ರತ್ಯೇಕಿಸಿ ಚಿತ್ರದುರ್ಗ ಜಿಲ್ಲೆಗೆ ಹೊಸದಾಗಿ ಹಾಲು ಒಕ್ಕೂಟ ಸ್ಥಾಪಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಪ್ರಸ್ತಾವನೆ ಸಲ್ಲಿಸಲು ಜಿಲ್ಲಾ ಕೃಷಿಕ ಸಮಾಜದ ಸಭೆ ನಿರ್ಧರಿಸಿದೆ.
ಕೃಷಿ ಇಲಾಖೆ ಜಂಟಿ ನಿರ್ದೇಶಕರ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ಸಭೆಯಲ್ಲಿ ಕೆಎಂಇಆರ್‌ಸಿ ಅನುದಾನದಡಿ ಚಿತ್ರದುರ್ಗ ಹಾಲು ಒಕ್ಕೂಟ ಸ್ಥಾಪಿಸುವಂತೆ ಸಭೆ ಸರ್ಕಾರವನ್ನು ಒತ್ತಾಯಿಸಿತು.
ರೇಷ್ಮೆ ಕೃಷಿ ಕುರಿತು ರೈತರನ್ನು ಉತ್ತೇಜಿಸುವಂತೆ ರಾಗಿ ಶಿವಮೂರ್ತಪ್ಪ ಸಲಹೆ ನೀಡಿದರು. ಜಿಲ್ಲೆಯಲ್ಲಿ ೩,೨೩೮ ಹೆಕ್ಟೇರ್‌ನಲ್ಲಿ ರೇಷ್ಮೆ ಬೆಳೆಯಲಾಗುತ್ತಿದೆ. ೩,೮೩೦ ಬೆಳೆಗಾರರು ಜಿಲ್ಲೆಯಲ್ಲಿದ್ದಾರೆ. ಕಳೆದ ಮಾರ್ಚ್ ಒಂದರಲ್ಲೇ ೧೮ ಲಕ್ಷ ಚಾಕಿ ವಿತರಿಸಿ ೧, ೫೦೦ ಮೆಟ್ರಿಕ್ ಟನ್ ರೇಷ್ಮೆ ಉತ್ಪಾದನೆ ಗುರಿ ಇದೆ. ರೇಷ್ಮೆ ಕೃಷಿಗೆ ಇಲಾಖೆ ಕಳೆದ ವರ್ಷದಿಂದ ವಿವಿಧ ಯೋಜನೆಗಳಡಿ ನೆರವು ನೀಡಲಾಗಿದೆ ಎಂದು ರೇಷ್ಮೆ ಇಲಾಖೆ ಅಽಕಾರಿ ತಿಳಿಸಿದರು.
ಜಿಲ್ಲೆಯಲ್ಲಿ ಏಪ್ರಿಲ್ ೨೭ರಿಂದ ಕಾಲುಬಾಯಿ ರೋಗದ ಲಸಿಕಾ ಅಭಿಯಾನ ಆರಂಭವಾಗಿದ್ದು, ಈವರೆಗೆ ೯೦ ಸಾವಿರ ಜಾನುವಾ ರುಗಳಿಗೆ ಲಸಿಕೆ ಹಾಕಲಾಗಿದೆ ಎಂದು ಪಶುವೈದ್ಯಕೀಯ ಸೇವಾ ಇಲಾಖೆ ಉಪ ನಿರ್ದೇಶಕ ಡಾ. ಕುಮಾರ್ ಹೇಳಿದರು.
ಈ ಬಾರಿ ಲಸಿಕೆ ಹಾಕಿದ ತಕ್ಷಣ ಜಾನುವಾರುಗಳಿಗೆ ಇನಾ-ï ತಂತ್ರಾAಶದಡಿ ೧೨ ಅಂಕಿಯ ಟ್ಯಾಗ್ ಅಳವಡಿಸಿ ನೋಂದಾಯಿಸ ಲಾಗುತ್ತಿದೆ. ಇದರಿಂದ ಲಸಿಕೆ ಪಡೆದ ಜಾನುವಾರುಗಳ ನಿಖರ ಮಾಹಿತಿ ಲಭ್ಯವಾಗಲಿದೆ. ಜೂನ್‌ನಿಂದ ಕುರಿ, ಮೇಕೆಗಳಿಗೆ ಬರುವಂಥ ಗಳಲೆ ರೋಗ ತಡೆಗೆ ಲಸಿಕೆ ಹಾಕಲಾಗುವುದು ಎಂದರು.
ಅನಿವಾರ್ಯ ಕಾರಣಗಳಿಂದ ಜಾನುವಾರು ಮೃತಪಟ್ಟರೆ ನೀಡಲಾಗುತ್ತಿದ್ದ ವಿಮಾ ಪರಿಹಾರದ ಮೊತ್ತ ಹೆಚ್ಚಿಸಲಾಗಿದೆ ಎಂದರು.
ನಿಯಮಗಳನ್ನು ಗಾಳಿಗೆ ತೂರಿ ಜಿಲ್ಲೆಯಲ್ಲಿ ಕಾರ್ಯನಿರತವಾಗಿರುವ ಅನಽಕÊತ ಶಾಲೆಗಳ ವಿರುದ್ಧ ಕಾನೂನು ಕ್ರಮ ಜರುಗಿಸ ಬೇಕು ಎಂದು ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಎನ್.ಆರ್. ಮಹೇಶ್ವರಪ್ಪ ಶಿಕ್ಷಣ ಇಲಾಖೆ ಅಽಕಾರಿಗೆ ಸೂಚಿಸಿದರು.
ಅನೇಕ ಶಾಲೆಗಳು ರಾಜ್ಯ ಪಠ್ಯಕ್ರಮದ ಅನುಮತಿ ಪಡೆದು, ಸಿಬಿಎಸ್‌ಇ, ಐಸಿಎಸ್‌ಇ ಎಂದು ಪ್ರಚಾರ ಮಾಡುತ್ತಿವೆ. ಇದು ಪಾಲ ಕರಿಗೆ ಮಾಡುವ ವಂಚನೆಯಾಗಿದೆ. ಶೈಕ್ಷಣಿಕ ವರ್ಷದ ಪ್ರವೇಶಾತಿ ಆರಂಭವಾಗುವ ಮುನ್ನವೇ ಬಿಇಒಗಳು ಅನಽಕೃತ ಶಾಲೆ ಗಳ ಪಟ್ಟಿ ಬಹಿರಂಗಪಡಿಸಬೇಕು ಎಂದು ತಿಳಿಸಿದರು.
ಶಾಲೆಗೆ ಇರಬೇಕಾದ ಕನಿಷ್ಠ ಸ್ಥಳಾವಕಾಶ, ಕಟ್ಟಡದ ಸುರಕ್ಷತೆ ಮತ್ತು ಇತರ ನಿಯಮಗಳನ್ನು ಪಾಲಿಸದ ಶಾಲೆಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು. ಕೆಲ ಶಾಲೆಗಳು ಒಂದೇ ಆವರಣದಲ್ಲಿ ವಿವಿಧ ಪಠ್ಯಕ್ರಮಗಳೊಂದಿಗೆ ಬೋಽಸುತ್ತಾ ನಿಯಮಗಳನ್ನು ಉಲ್ಲಂಘಿಸುತ್ತಿವೆ.

ಪಾಲಕರು, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಶಿಕ್ಷಣ ಇಲಾಖೆ ಎಚ್ಚೆತ್ತುಕೊಳ್ಳಬೇಕು ಎಂದು ಮಹೇಶ್ವರಪ್ಪ ಹೇಳಿದರು. ಶಾಲೆ ಜಾಗ ಒತ್ತುವರಿ ತೆರವಿಗೂ ಕ್ರಮ ವಹಿಸಬೇಕೆಂದು ಭಕ್ತ ಪ್ರಹ್ಲಾದ್ ಸಲಹೆ ನೀಡಿದರು.
ಗ್ರಾಮೀಣ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಕರ್ನಾಟಕ ಪಬ್ಲಿಕ್ ಶಾಲೆಗಳ (ಕೆಪಿಎಸ್)ಸಂಖ್ಯೆ ಹೆಚ್ಚಿಸಬೇಕಿದೆ ಎಂದರು.
ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಿಥುನ್ ಕುಮಾರ್, ಚಂದ್ರಶೇಖರಪ್ಪ, ಶಿವಲಿಂಗಪ್ಪ, ಪರಮೇಶ್ವರಪ್ಪ, ಧರಣೆÃಶ್, ಕಾಂತರಾಜು, ರಮೇಶಪ್ಪ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net