ಒಳಮೀಸಲಾತಿಯಲ್ಲಿ ಮಾದಿಗರಿಗೆ ನ್ಯಾಯ ಕೊಡಿಸುವಲ್ಲಿ ವಿಫಲ

ಪರಶುರಾಮಪುರದಲ್ಲಿ ಆಯೋಜಿಸಿದ್ದ ಡಾ.ಬಿ.ಆರ್. ಅಂಬೇಡ್ಕರ್, ಬಾಬೂ ಜಗಜೀವನರಾಂ ಜಯಂತ್ಯುತ್ಸವದಲ್ಲಿ ಹಿರಿಯೂರಿನ ಶ್ರೀ ಷಡಕ್ಷರ ಮುನಿ ಸ್ವಾಮೀಜಿ ಮಾತನಾಡಿದರು. ಎಚ್. ಆಂಜನೇಯ, ಗೋವಿಂದ ಕಾರಜೋಳ, ಜಿ.ಎಸ್. ಮಂಜುನಾಥ್ ಇತರರು ಇದ್ದರು.
ಪರಶುರಾಮಪುರದಲ್ಲಿ ಆಯೋಜಿಸಿದ್ದ ಡಾ.ಬಿ.ಆರ್. ಅಂಬೇಡ್ಕರ್, ಬಾಬೂ ಜಗಜೀವನರಾಂ ಜಯಂತ್ಯುತ್ಸವದಲ್ಲಿ ಹಿರಿಯೂರಿನ ಶ್ರೀ ಷಡಕ್ಷರ ಮುನಿ ಸ್ವಾಮೀಜಿ ಮಾತನಾಡಿದರು. ಎಚ್. ಆಂಜನೇಯ, ಗೋವಿಂದ ಕಾರಜೋಳ, ಜಿ.ಎಸ್. ಮಂಜುನಾಥ್ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಷಡಾಕ್ಷರಿಮುನಿ ದೇಶಿಕೇಂದ್ರ ಸ್ವಾಮೀಜಿ ಆರೋಪ
  • ಅಂಬೇಡ್ಕರ್, ಜಗಜೀವನರಾಂ ಜಯಂತ್ಯುತ್ಸವ
ಪರಶುರಾಮಪುರ: ಒಳಮೀಸಲಾತಿಯಲ್ಲಿ ಮಾದಿಗರಿಗೆ ನ್ಯಾಯ ಕೊಡಿಸುವಲ್ಲಿ ಸಚಿವರು ವಿಫಲರಾಗಿದ್ದಾರೆ ಎಂದು ಕೋಡಿಹಳ್ಳಿ ಬೃಹನ್ಮಠದ ಶ್ರೀ ಷಡಕ್ಷರಿಮುನಿ ದೇಶಿಕೇಂದ್ರ ಸ್ವಾಮೀಜಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಚಳ್ಳಕೆರೆ ತಾಲೂಕು ಪರಶುರಾಮಪುರದಲ್ಲಿ ಭಾನುವಾರ ಡಾ. ಬಿ.ಆರ್. ಅಂಬೇಡ್ಕರ್ ವಿಚಾರ ವೇದಿಕೆ, ಮಾದಿಗ ನೌಕರರ ಸಂಘದ ವತಿಯಿಂದ ಆಯೋಜಿಸಿದ್ದ ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಬಾಬು ಜಗಜೀವನರಾಂ ಜಯಂತ್ಯುತ್ಸವದಲ್ಲಿ ಮಾತನಾಡಿದರು.
ಜನರ ನಾಡಿಮಿಡಿತ ಅರ್ಥಮಾಡಿಕೊಂಡು ಜನರ ಸಮಸ್ಯೆಗಳಿಗೆ ಸ್ಪಂದಿಸುವವನೇ ನಿಜವಾದ ರಾಜಕಾರಣಿ. ಮಾದಿಗರು ಮೊದಲು ಶಿಕ್ಷಿತರಾಗಬೇಕು. ಅಂಬೇಡ್ಕರ್ ಮತ್ತು ಜಗಜೀವನರಾಂ ಅವರ ತತ್ವ ಸಿದ್ದಾಂತ, ಆದರ್ಶಗಳನ್ನು ಜೀವಿನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಮಾಜಿ ಸಚಿವ ಎಚ್. ಆಂಜನೇಯ ಮಾತನಾಡಿ, ಒಳ ಮೀಸಲು ಹಂಚಿಕೆಯಲ್ಲಿ ಆಗಿರುವ ವ್ಯತ್ಯಾಸದ ಬಗೆ ರಾಜ್ಯ ಸರ್ಕಾರದ ಗಮನಕ್ಕೆ ತಂದು ಸರಿಪಡಿಸುವ ಕಡೆ ಗಮನ ಕೊಡಬೇಕಾಗಿದೆ ಎಂದರು.
ಅಂಬೇಡ್ಕರ್ ಅಶಯದಂತೆ ಸದಾ ಅಧ್ಯಯನಶೀಲರಾಗಿ, ಮೂಢನಂಬಿಕೆ ತ್ಯಜಿಸಿ, ಶಿಕ್ಷಣ ಸಂಘಟನೆ ಮತ್ತು ಹೋರಾಟದ ಮೂಲಕ ಮುಖ್ಯವಾಹಿನಿಗೆ ಬರಬೇಕು ಎಂದು ತಿಳಿಸಿದರು.
ಸಂಸದ ಎಂ. ಗೋವಿಂದ ಕಾರಜೋಳ ಮಾತನಾಡಿ, ನಮ್ಮ ಸಮುದಾಯದವರು ಬುದ್ಧ, ಬಸವ, ಅಂಬೇಡ್ಕರ್ ಅವರ ತತ್ವಾದರ್ಶಗಳನ್ನು ಪಾಲಿಸಬೇಕು ಎಂದರು.
ಆದಿಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್. ಮಂಜುನಾಥ ಮಾತನಾಡಿ, ಈವರೆಗೂ ದೇಶದಲ್ಲಿ ಆಡಳಿತ ನಡೆಸಿದ ಎಲ್ಲ ರಾಷ್ಟ್ರೀಯ ಪಕ್ಷಗಳೂ ಮಾದಿಗರ ಮೇಲೆ ತಾರತಮ್ಯ ಧೋರಣೆ ತಾಳಿವೆ. ಇಂದು ದೇಶಾದ್ಯಂತ ಒಳಮೀಸಲಾತಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈಗಲೂ ಮಾದಿಗರಿಗೆ ಒಳಮೀಸಲಾತಿಯಲ್ಲಿ ಅನ್ಯಾಯವಾಗಿದೆ. ರಾಜ್ಯದ ಕಾಂಗ್ರೆಸ್ ಸರ್ಕಾರ ಅಷ್ಟೋ ಇಷ್ಟೋ ಒಳಮೀಸಲಾತಿ ನೀಡಿದೆ. ಇತರ ಪಕ್ಷಗಳು ಏನು ನೀಡಿವೆ ಎಂದು ಪ್ರಶ್ನಿಸಿದರು.
ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ, ಜೆಜೆ ಕಾಲನಿ ಕಾಂಗ್ರೆಸ್ ಮುಖಂಡ ಪ್ರಕಾಶ ಮಾತನಾಡಿದರು. ಲೋಕೋಪಯೋಗಿ ಇಲಾಖೆ ನಿವೃತ್ತ ಎಇಇ ಚನ್ನಮಲ್ಲಪ್ಪ ಅಧ್ಯಕ್ಷತೆ ವಹಿಸಿದ್ದರು. ಸಪಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಪಿ.ರಘು, ಡಾ. ತಿಪ್ಪೇಸ್ವಾಮಿ, ದಸಂಸ ರಾಜ್ಯ ಸಂಚಾಲಕ ಟಿ.ಡಿ. ರಾಜಗಿರಿ, ಡಾ. ಲಿಂಗಣ್ಣ ಜಂಗಮರಹಳ್ಳಿ, ಲಿಡ್ಕರ್ ಮಾಜಿ ಅಧ್ಯಕ್ಷ ಓ. ಶಂಕರ್, ಆರ್. ನಾಗರಾಜು, ಅಂಬೇಡ್ಕರ್ ವಿಚಾರ ವೇದಿಕೆ ಅಧ್ಯಕ್ಷ ಜಯಕುಮಾರ, ಚಿಕ್ಕಣ್ಣ, ಸಮರ್ಥರಾಯ್, ರಾಮದಾಸ್, ನರಸಿಂಹಯ್ಯ, ಆಂಜನೇಯ, ಪ್ರಕಾಶ, ಓಬಳೇಶ, ಹನುಮಂತರಾಯ, ಜಯಣ್ಣ, ಗುಜ್ಜಾರಪ್ಪ, ಚನ್ನಕೇಶವ, ಕೊರ‌್ಲಕುಂಟೆ ತಿಪ್ಪೇಸ್ವಾಮಿ, ಎಸ್. ವೆಂಕಟೇಶ ಇತರರು ಇದ್ದರು.
ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ಹೋಬಳಿ ವ್ಯಾಪ್ತಿಯ ಮಾದಿಗ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.
ವಾದ ಪ್ರತಿವಾದ: ಒಳಮೀಸಲಾತಿ ಹಂಚಿಕೆ, ಶೆಡ್ಯೂಲ್ 9ರಲ್ಲಿ ಸೇರಿಸುವ ವಿಚಾರ ಕುರಿತಂತೆ ಸಮಾರಂಭದಲ್ಲಿ ಸಂಸದ ಗೋವಿಂದ ಕಾರಜೋಳ, ಹಾಗೂ ಆದಿಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್. ಮಂಜುನಾಥ್ ನಡುವೆ ನಡೆದ ವಾದ ವಿವಾದ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿಗೆ ಕಾರಣವಾಯಿತು. ಶಾಸಕ ಟಿ. ರಘುಮೂರ್ತಿ ಮಧ್ಯೆ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.
ಮೆರವಣಿಗೆ: ಸಾರೋಟಿನಲ್ಲಿ ಡಾ. ಅಂಬೇಡ್ಕರ್, ಜಗಜೀವನರಾಂ ಅವರ ಭಾವಚಿತ್ರದ ಮೆರವಣಿಗೆ ಗ್ರಾಮದ ಲಕ್ಷ್ಮೀಕೊಲ್ಲಾಪುರದಮ್ಮ ದೇಗುಲದಿಂದ ಆರಂಭವಾಯಿತು. ನಿಕಟ ಪೂರ್ವ ಬಿಜೆಪಿ ಮಂಡಲ ಅಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ ಮೆರವಣಿಗೆಗೆ ಚಾಲನೆ ನೀಡಿದರು . ಗ್ರಾಮದ ಮುಖ್ಯ ವೃತ್ತದ ಮೂಲಕ ಕೆಪಿಎಸ್ ಶಾಲಾ ಆವರಣದ ವೇದಿಕೆ ವರೆಗೆ ಮೆರವಣಿಗೆ ನಡೆಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net