ಚಿತ್ರದುರ್ಗದ ಎಸ್‌ಜೆಎಂಐಟಿ ಕಾಲೇಜಿನಲ್ಲಿ ಎರಡು ದಿನಗಳ ಕಾಲ ಆಯೋಜಿಸಿರುವ ಸೂರ್ತಿ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಮಂಗಳವಾರ ಮುರುಘಾಮಠದ ಆಡಳಿತ ಮಂಡಳಿ ಸದಸ್ಯ ಡಾ. ಬಸವಕುಮಾರ ಸ್ವಾಮೀಜಿ ಚಾಲನೆ ನೀಡಿದರು. ಡಾ.ಪಿ.ಬಿ. ಭರತ್ ಡಾ.ಕೆ.ಆರ್. ಕೃಷ್ಣಾರೆಡ್ಡಿ, ಡಾ.ಟಿ.ವಿ. ಅರವಿಂದ, ಡಾ.ಕೆ. ಕುಮಾರಸ್ವಾಮಿ, ಪ್ರೊ. ಸುಷ್ಮಿತಾದೇಬ್, ಪ್ರೊ. ಆರ್.ಎಸ್. ಜಯದೇವಪ್ಪ, ಪ್ರೊ.ಎಸ್. ಧನುಷ್ ಇತರರು ಇದ್ದರು.
ಚಿತ್ರದುರ್ಗ: ಜೀವನದಲ್ಲಿ ಎದುರಾಗುವ ಸಮಸ್ಯೆ, ಸವಾಲುಗಳನ್ನು ದಿಟ್ಟತನದಿಂದ ಎದುರಿಸಿ ನಿವಾರಿಸಿಕೊಳ್ಳಬೇಕು ಎಂದು ಮುರುಘಾಮಠದ ಆಡಳಿತ ಮಂಡಳಿ ಸದಸ್ಯ ಡಾ.ಬಸವಕುಮಾರ ಸ್ವಾಮೀಜಿ ಹೇಳಿದರು.
ನಗರದ ಎಸ್‌ಜೆಎಂಐಟಿ ಕಾಲೇಜಿನಲ್ಲಿ ಎರಡು ದಿನಗಳ ಕಾಲ ಆಯೋಜಿಸಿರುವ ಸೂರ್ತಿ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಮಂಗಳವಾರ ಚಾಲನೆ ನೀಡಿ ಮಾತನಾಡಿದರು.
ನಾವು ಉತ್ಸಾಹಿಗಳಾಗಿದ್ದರೆ ಜೀವನದ ಸವಾಲುಗಳನ್ನು ಸುಲಭವಾಗಿ ನಿಭಾಯಿಸಬಹುದು. ಎಂದಿಗೂ ಜೀವನೋತ್ಸಾಹ ಕಡಿಮೆ ಯಾಗಬಾರದು. ಶಾಲಾ, ಕಾಲೇಜು ಪಠ್ಯ ಕಲಿಕೆ ನಂತರವೂ ಜೀವನದಲ್ಲಿ ಅಧ್ಯಯನ ಎಂಬುದು ಇರುತ್ತದೆ ಎಂದರು.
ಪ್ರಾಚಾರ್ಯ ಡಾ.ಪಿ.ಬಿ. ಭರತ್ ಮಾತನಾಡಿ,ದಾರ್ಶನಿಕರ, ಮಹನೀಯರ ಸಾಧನೆ ನಮಗೆ ಸೂರ್ತಿಯಾಗಬೇಕು. ನಾಯಕತ್ವ ಗುಣ, ಸಂಘಟನಾ ಶಕ್ತಿ ವೃದ್ಧಿಗೆ ಇಂತಹ ಕಾರ್ಯಕ್ರಮಗಳು ನೆರವಾಗುತ್ತವೆ ಎಂದರು.
ಕಾರ್ಯಕ್ರಮ ಸಂಚಾಲಕ ಡಾ.ಕೆ.ಆರ್. ಕೃಷ್ಣಾರೆಡ್ಡಿ, ಸಹ ಸಂಚಾಲಕ ಡಾ.ಟಿ.ವಿ. ಅರವಿಂದ, ಡಾ.ಕೆ. ಕುಮಾರಸ್ವಾಮಿ, ಪ್ರೊ. ಸುಷ್ಮಿತಾದೇಬ್ ಇತರರು ಇದ್ದರು. ಪಿ.ಕೆ. ಪ್ರಣತಿ ಪ್ರಾರ್ಥಿಸಿದರು. ಪ್ರೊ.ಆರ್. ಎಸ್. ಜಯದೇವಪ್ಪ ಸ್ವಾಗತಿಸಿದರು.
ಚಿನ್ಮಯ್, ಬಿಬಿ ಹಾಜಿರಾ ನಿರೂಪಿಸಿ,ಪ್ರೊ.ಎಸ್. ಧನುಷ್ ವಂದಿಸಿದರು. ಈ ಸಂದರ್ಭದಲ್ಲಿ ಆಯೋಜಿಸಿದ್ದ ಸಾಂಪ್ರದಾಯಕÀ ದಿನಾಚರಣೆಯಲ್ಲಿ ವಿದ್ಯಾರ್ಥಿಗಳು ನಾನಾ ದೇಸಿ ಉಡುಗೆ-ತೊಡುಗೆಗಳನ್ನು ಧರಿಸಿ ಸಂಗೀತಕ್ಕೆ ಹೆಜ್ಜೆ ಹಾಕಿ ಸಂಭ್ರಮಿಸಿದರು.