ಆರೋಗ್ಯ, ಶಿಕ್ಷಣ, ಕೃಷಿ, ತಂತ್ರಜ್ಞಾನ, ಬ್ಯಾಂಕಿಂಗ್, ಕ್ರೀಡೆ, ರಕ್ಷಣಾ ಕ್ಷೇತ್ರ ಸೇರಿ ಎಲ್ಲ ಸಾರ್ವಜನಿಕ ವಲಯಗಳಲ್ಲಿ ಕಂಪ್ಯೂಟರ್, ಮೊಬೈಲ್, ಪಿಸಿಗಳ ಬಳಕೆ ಮಾಡಲಾಗುತ್ತಿದೆ. ಕೆಲ ಕಿಡಿಗೇಡಿಗಳು ಕಂಪ್ಯೂಟರ್, ಮೊಬೈಲ್‌ಗಳಲ್ಲಿ ಸಂಗ್ರಹವಾಗಿರುವ ಮಾಹಿತಿಯನ್ನು (ಡಾಟಾ) ಹ್ಯಾಕಿಂಗ್ ಮಾಡಿ ಮಾಹಿತಿ ಕದಿಯುವುದು ಅಥವಾ ನಾಶಮಾಡುವ ಕಾರ್ಯಕ್ಕೆ ಮುಂದಾಗಿದ್ದಾರೆ. ಇದರಿಂದ ವ್ಯಕ್ತಿ ಸೇರಿ ದೇಶದ ಭದ್ರತೆಗೂ ಕಂಟಕ ಎದುರಾಗುತ್ತದೆ. ಇದಕ್ಕೆ ಪರಿಹಾರವೇ ಸೈಬರ್ ಸೇವೆಗಳು ಎಂದರು.