ಕಾಮಗಾರಿ ವಿಳಂಬ ದಂಡಕ್ಕೆ ವಿನಾಯಿತಿ

 ಚಿತ್ರದುರ್ಗದಲ್ಲಿ ಬುಧವಾರ ಜರುಗಿದ ಜಿ¯್ಲÁ ನೀರು ಮತ್ತು ನೈರ್ಮಲ್ಯ ಮಿಷನ್ ಸಮಿತಿ ಸಭೆಯಲ್ಲಿ ಡಾ.ಎಸ್.ಆಕಾಶ್ ಮಾತನಾಡಿದರು. ಬಾಬು, ಜಯಲಕ್ಷಿ÷್ಮÃ, ಗೋಪ್ಯಾನಾಯ್ಕï, ಅಮರನಾಥ್ ಜೈನ್ ಇತರರು ಇದ್ದರು.
ಚಿತ್ರದುರ್ಗದಲ್ಲಿ ಬುಧವಾರ ಜರುಗಿದ ಜಿ¯್ಲÁ ನೀರು ಮತ್ತು ನೈರ್ಮಲ್ಯ ಮಿಷನ್ ಸಮಿತಿ ಸಭೆಯಲ್ಲಿ ಡಾ.ಎಸ್.ಆಕಾಶ್ ಮಾತನಾಡಿದರು. ಬಾಬು, ಜಯಲಕ್ಷಿ÷್ಮÃ, ಗೋಪ್ಯಾನಾಯ್ಕï, ಅಮರನಾಥ್ ಜೈನ್ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಗುತ್ತಿಗೆದಾರರು ಪೂರ್ಣಗೊಳಿಸಿದ ನಂತರ ಹಣ ಪಾವತಿ
  • ಜಿಪಂ ಸಿಇಒ ಡಾ.ಎಸ್. ಆಕಾಶ್ ಘೋಷಣೆ
  • ಶುದ್ಧ ನೀರು ಪೂರೈ ಸುವ ಗುರಿ
ಚಿತ್ರದುರ್ಗ: ಜಲಜೀವನ್ ಮಿಷನ್ ಕಾಮಗಾರಿ ವಿಳಂಬಕ್ಕೆ ವಿಽಸಲಾದ ಶೇ. ೧೦ರ ದಂಡಕ್ಕೆ ವಿನಾಯಿತಿ ನೀಡಲಾಗುವುದು ಎಂ ದು ಜಿಪಂ ಸಿಇಒ ಡಾ.ಎಸ್. ಆಕಾಶ್ ತಿಳಿಸಿದರು.
ಜಿಪಂ ಸಭಾಂಗಣದಲ್ಲಿ ಬುಧವಾರ ಜರುಗಿದ ಜಿ¯್ಲÁ ನೀರು ಮತ್ತು ನೈರ್ಮಲ್ಯ ಮಿಷನ್ ಸಮಿತಿ ಸಭೆಯಲ್ಲಿ ಮಾತನಾಡಿ, ಪ್ರಾ ಮಾಣಿಕವಾಗಿ ಕೆಲಸ ಮಾಡುವ ಗುತ್ತಿಗೆದಾರರು ಮುಂದೆ ಬಂದು ಕಾಮಗಾರಿ ಪೂರ್ಣಗೊಳಿಸಿದರೆ, ನಿಗದಿತ ಹಣ ಪಾವತಿಸುವು ದಾಗಿ ಹೇಳಿದರು.
ದಂಡ ವಿನಾಯಿತಿ ನೀಡಿದರೆ ಶೇ. ೮೦ರಷ್ಟು ಗುತ್ತಿಗೆದಾರರು ಜಲಜೀವನ್ ಮಿಷನ್ ಕಾಮಗಾರಿ ಪೂರ್ಣಗೊಳಿಸಲು ಮುಂದೆ ಬ ರುವುದಾಗಿ ಸಂಬAಽಸಿದ ಅಽಕಾರಿಗಳು ಸಲಹೆ ನೀಡಿz್ದÁರೆ. ಇದರ ಆಧಾರದಲ್ಲಿ ಕಳಪೆ ಕಾಮಗಾರಿ ಕೈಗೊಂಡ ಗುತ್ತಿಗೆದಾರ ರನ್ನು ಹೊರತುಪಡಿಸಿ ಉಳಿದವರಿಗೆ ವಿನಾಯಿತಿ ನೀಡಲಾಗುವುದು ಎಂದರು.
ಜು.೮ರೊಳಗೆ ಸಂಬAಧಪಟ್ಟ ಗುತ್ತಿಗೆದಾರರಿಗೆ ನೋಟಿಸ್ ನೀಡಿ, ಕಾಮಗಾರಿ ಪೂರ್ಣಗೊಳಿಸಲು ಮನ ಒಲಿಸಬೇಕು. ಇದಕ್ಕೆ ಸ ಮ್ಮತಿಸುವವರೊಂದಿಗೆ ತಾಲೂಕುವಾರು ಗುತ್ತಿಗೆದಾರರನ್ನು ಖುದ್ದು ಭೇಟಿಯಾಗಿ ನಿರ್ದೇಶನ ನೀಡುವುದಾಗಿ ತಿಳಿಸಿದರು.
ಈ ಯೋಜನೆಯಡಿ ಕೈಗೊಂಡಿರುವ ನಳ ನೀರು ಸಂಪರ್ಕ ಕಲ್ಪಿಸುವ ಕಾಮಗಾರಿಗಳ ಪ್ರಗತಿ ಪರಿಶೀಲಿಸಿದ ಸಿಇಒ, ಕಾಮ ಗಾರಿಗಳು ಪೂರ್ಣಗೊಂಡಿದ್ದರೂ ಹರ್ ಘರ್ ಜಲ್ ಘೋಷಿಸದಿರುವ ಕುರಿತು ಅಸಮಧಾನ ವ್ಯಕ್ತಪಡಿಸಿದರು.
ಪ್ರತಿ ಗ್ರಾಮವಾರು ನಿಖರವಾದ ಪಟ್ಟಿ ಸಿದ್ಧವಿಟ್ಟುಕೊಳ್ಳಿ. ಈ ಯೋಜನೆಯಡಿ ಎಷ್ಟು ಮನೆಗಳಿಗೆ ನೀರು ಪೂರೈಸಲು ಸಾಧ್ಯವಿದೆ ಎಂಬ ಮಾಹಿತಿ ವರದಿಯನ್ನು ಒಂದು ವಾರದೊಳಗೆ ಸಲ್ಲಿಸಬೇಕು. ಆರು ತಾಲೂಕುಗಳಲ್ಲಿ ವಾರಕ್ಕೆ ತಲಾ ೧೦ರಂತೆ ಕಾಮ ಗಾರಿಗಳ ಅಂತಿಮ ಹಂತಗಳನ್ನು ಪೂರ್ಣಗೊಳಿಸಿ ಪ್ರತಿ ತಿಂಗಳು ೨೪೦ ಗ್ರಾಮಗಳಲ್ಲಿ ಹರ್ ಘರ್ ಜಲï ಘೋಷಿಸುವಂತೆ ಅಽಕಾರಿಗಳಿಗೆ ಸೂಚಿಸಿದರು.
ಕೇಂದ್ರ ಸರ್ಕಾರದ ನಿಯಮಾವಳಿ ಪ್ರಕಾರ ಗ್ರಾಮೀಣ ಭಾಗದ ಪ್ರತಿ ವ್ಯಕ್ತಿಗೂ ನಿತ್ಯ ಕನಿಷ್ಠ ೫೫ ಲೀಟರ್ ಶುದ್ಧ ನೀರು ಪೂರೈಸು ವ ಗುರಿಯೊಂದಿಗೆ ೪ ಬ್ಯಾಚ್‌ಗಳಲ್ಲಿ ಜಲಜೀವನ್ ಮಿಷನ್ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ.
ಯೋಜನೆಯಡಿ ಪ್ರತಿ ಮನೆ ಮನೆಗೆ ನಳ ಸಂಪರ್ಕ ಕಲ್ಪಿಸಿ, ಪೈಪ್‌ಲೈನ್ ಮೂಲಕ ನಿಗದಿತ ಪ್ರಮಾಣದ ನೀರನ್ನು ತಲುಪಿಸುವು ದು ಯೋಜನೆಯ ಮೂಲ ಉದ್ದೇಶ ಎಂದು ಮಾಹಿತಿ ನೀಡಿದರು.
ನೀರಿನ ಬಳಕೆ ಆಡಿಟ್ ನಡೆಸುವ ಸಲುವಾಗಿ ಪ್ರತಿ ನಳಕ್ಕೂ ಮೀಟರ್ ಅಳವಡಿಸಲಾಗಿದೆ. ಆದರೆ, ಗ್ರಾಮೀಣ ಭಾಗದಲ್ಲಿ ಈ ಮೀ ಟರ್‌ಗಳು ಸುಸ್ಥಿತಿಯಲ್ಲಿ ಇಲ್ಲ. ಆದ್ದರಿಂದ ಗ್ರಾಮಗಳಲ್ಲಿ ನೀರಿನ ಪೂರೈಕೆ ಸಂಬAಧ ಸಮೀಕ್ಷೆ ಆರಂಭಿಸಲಾಗಿದೆ. ಒಂದು ವಾರದೊಳಗೆ ಮಾಹಿತಿ ದೊರೆಯಲಿದೆ ಎಂದರು.
೨೦೧೯ರಿAದ ಆರಂಭವಾದ ಈ ಕಾಮಗಾರಿಗಳು ೨೦೨೩ರ ಅಂತ್ಯಕ್ಕೆ ಪೂರ್ಣಗೊಳ್ಳಬೇಕಿತ್ತು. ಆದರೆ, ಅನುಷ್ಠಾನದಲ್ಲಿ ಸಾ ಕಷ್ಟು ವಿಳಂಬ ಉಂಟಾಗಿದೆ. ಎಲ್ಲ ತಾಲೂಕಿನ ಸಹಾಯಕ ಕಾರ್ಯಪಾಲಕ ಮತ್ತು ಕಿರಿಯ ಇಂಜಿನಿಯರ್‌ಗಳು ಒಟ್ಟಾಗಿ ಕೆಲಸ ಮಾಡಬೇಕು.
ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ ಪ್ರತಿ ಮನೆಗೂ ನೀರು ಪೂರೈಕೆ ಆಗುತ್ತಿರುವ ಕುರಿತು ಅಽಕಾರಿಗಳೇ ಖುz್ದÁಗಿ ಖಾತರಿ ಪಡಿಸಿಕೊಳ್ಳಬೇಕು ಎಂದು ಸೂಚಿಸಿದರು.
ಜಿಪಂ ಉಪ ಕಾರ್ಯದರ್ಶಿ ಬಾಬು, ಯೋಜನಾ ನಿರ್ದೇಶಕಿ ಜಯಲಕ್ಷಿ÷್ಮÃ, ಉಪ ಅರಣ್ಯ ಸಂರಕ್ಷಣಾಽಕಾರಿ ಗೋಪ್ಯಾನಾಯ್ಕï, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಅಮರನಾಥ್ ಜೈನ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಬಿ. ಮಂಜುನಾಥ್, ಡಿಡಿಪಿಐ ಎಂ.ಆರ್. ಮಂಜುನಾಥ್, ಜಿ¯್ಲÁ ಪರಿಶಿಷ್ಟ ವರ್ಗಗಳ ಕಲ್ಯಾಣಾಽಕಾರಿ ದಿವಾಕರ್, ಜಿ¯್ಲÁ ಆರ್‌ಸಿಎಚ್ ಅಽಕಾರಿ ಡಾ. ಅಭಿನವ್, ಜಲತಜ್ಞ ದೇವರಾಜ ರೆಡ್ಡಿ ಇತರರು ಇದ್ದರು.
* ಯೋಜನೆಯಡಿ ಜಿಲ್ಲಾದ್ಯಂತ ೧,೫೫೯ ಕಾಮಗಾರಿ
* ೧೦೧೧ ಕಾಮಗಾರಿ ಪೂರ್ಣ
* ೮೦೧ ಗ್ರಾಮಗಳಲ್ಲಿ ಹರ್ ಘರ್ ಜಲ್ ಘೋಷಣೆ
* ಪೈಪ್‌ಲೈನ್ ಮೂಲಕ ೬೧೫ ಕಡೆ ನೀರು ಸರಬಾರಜು
ಕಳಪೆ ಕಾಮಗಾರಿಗೆ ದಂಡ ವಸೂಲಿ
ಕಳಪೆ ಎಂದು ಗುರುತಿಸಲ್ಪಟ್ಟ ಕಾಮಗಾರಿಗಳ ಗುಣಮಟ್ಟ ಪರಿಶೀಲನೆಗೆ ತಹಸೀಲ್ದಾರ್, ಇಒ ಹಾಗೂ ಇಂಜಿನಿಯರ್ ಒಳಗೊಂಡ ತಂಡ ರಚಿಸಲಾಗಿತ್ತು. ವರದಿ ಕೈಸೇರಿದ್ದು, ಕಾಮಗಾರಿ ಅನುಷ್ಠಾನದಲ್ಲಿ ಲೋಪವೆಸಗಿದ ಗುತ್ತಿಗೆದಾರರಿಗೆ ದಂಡ ವಿಽಸಿ ಕಪ್ಪು ಪಟ್ಟಿಗೆ ಸೇರಿಸಲಾಗುವುದು. ಯಾವ ಮುಲಾಜಿಲ್ಲದೆ ದಂಡ ವಸೂಲಿ ಮಾಡಲಾಗುವುದು ಎಂದು ಡಾ.ಎಸ್. ಆಕಾಶ್ ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net