ಚಿತ್ರದುರ್ಗದ ಬಿಜೆಪಿ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ಸಂವಿಧಾನ ಹತ್ಯಾ ದಿವಸ್ ಕಾರ್ಯಕ್ರಮದಲ್ಲಿ ಭಾರತಾಂಭೆ, ಸಂವಿಧಾನ ಪುಸ್ತಕ, ಡಾ.ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಗೋವಿಂದ ಎಂ. ಕಾರಜೋಳ, ಡಾ.ಎಂ. ಚಂದ್ರಪ್ಪ, ಜಿ.ಎಚ್. ತಿಪ್ಪಾರೆಡ್ಡಿ ಪುಷ್ಪ ನಮನ ಸಲ್ಲಿಸಿದರು.
ಸಂವಿಧಾನ ಪುಸ್ತಕ ಹಿಡಿದು ರಕ್ಷಕರೆಂದು ಪದೇ-ಪದೆ ಮಾತನಾಡುವ ಕಾಂಗ್ರೆಸ್ಸಿಗರ ಆಡಳಿತಾವಽಯಲ್ಲೇ ಅತಿ ಹೆಚ್ಚು ತಿದ್ದುಪಡಿ ಯಾಗಿದೆ. ಇದನ್ನರಿತ ದೇಶದ ಜನ ಸರ್ವಾಽಕಾರಿ ಧೋರಣೆ ವಿರುದ್ಧ ಪಾಠ ಕಲಿಸುತ್ತ ಬಂದಿದ್ದಾರೆ ಎಂದರು.
ಬಿಜೆಪಿ ಜಿ¯್ಲÁಧ್ಯಕ್ಷ ಕೆ.ಟಿ. ಕುಮಾರಸ್ವಾಮಿ ಮಾತನಾಡಿ, ದೇಶದಲ್ಲಿ ತುರ್ತುಪರಿಸ್ಥಿತಿ ೨೧ ತಿಂಗಳ ಕಾಲ ಜಾರಿಯಲ್ಲಿತ್ತು. ಸಂವಿಧಾನದ ವಿಽ ೧೪, ೧೯, ೨೧ ಮತ್ತು ೨೨ರ ಅಡಿಯಲ್ಲಿ ಸಿಗುವ ನಾಗರಿಕರ ಮೂಲಭೂತ ಹಕ್ಕುಗಳನ್ನು ಅಮಾನತು ಗೊಳಿಸಲಾಯಿತು.
ಪ್ರಜಾಪ್ರಭುತ್ವದ ಆಶಯ ಬಲಿಕೊಟ್ಟು ಅಽಕಾರ ಉಳಿಸಿಕೊಳ್ಳಲು ಕಾಂಗ್ರೆಸ್ ಮಾಡಿದ ಐತಿಹಾಸಿಕ ತಪ್ಪನ್ನು ದೇಶದ ಜನತೆಗೆ ನೆನಪಿಸಲು ಹಾಗೂ ಸಂವಿಧಾನದ ಮಹತ್ವ ಸಾರಲು ಬಿಜೆಪಿ ಪ್ರತಿ ವರ್ಷ ಜೂ. ೨೫ರಂದು ಕರಾಳ ದಿನವನ್ನಾಗಿ ಆಚರಿಸುತ್ತ ಬಂದಿದೆ ಎಂದು ಹೇಳಿದರು.
ಜಿ¯್ಲÁ ಪ್ರಧಾನ ಕಾರ್ಯದರ್ಶಿ ಜಿ.ಎಚ್. ಮೋಹನ್‌ಕುಮಾರ್ ಮಾತನಾಡಿ, ತುರ್ತು ಪರಿಸ್ಥಿತಿ ಮೂಲಕ ಪತ್ರಿಕಾ ಸ್ವಾತಂತ್ರ‍್ಯ ಹತ್ತಿಕ್ಕಿದ್ದಲ್ಲದೆ, ವಿರೋಧ ಪಕ್ಷದ ನಾಯಕರನ್ನು ಬಂಽಸಲಾಯಿತು. ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಹಲವು ತಿದ್ದುಪಡಿ ತರಲಾಯಿತು ಎಂದು ದೂರಿದರು.
ಲೋಕನಾಯಕ ಜಯಪ್ರಕಾಶ್ ನಾರಾಯಣ್ ಅವರ ನೇತೃತ್ವದಲ್ಲಿ ದೇಶವ್ಯಾಪಿ ಹೋರಾಟ ಆರಂಭವಾಯಿತು. ಪ್ರಜಾಪ್ರಭುತ್ವ, ಸಂವಿಧಾನ ರಕ್ಷಿಸುವ ಮಹತ್ವದ ಜನಾಂದೋಲನಕ್ಕೆ ಆರ್‌ಎಸ್‌ಎಸ್ ಸೇರಿ ಅನೇಕ ಸಂಘಟನೆಗಳು ಬೆಂಬಲ ನೀಡಿದವು.
ಜನಶಕ್ತಿ ಮುಂದೆ ಸರ್ವಾಽಕಾರಿ ಮನೋಭಾವ ಸೋತು, ೧೯೭೭ರಲ್ಲಿ ಮತ್ತೆ ಪ್ರಜಾಪ್ರಭುತ್ವ ಮರು ಸ್ಥಾಪನೆಯಾಯಿತು ಎಂದು ತಿಳಿಸಿದರು.
ಹತ್ಯಾ ದಿವಸ್ ಕೇವಲ ಇತಿಹಾಸದ ಘಟನೆಯಲ್ಲ. ಸಂವಿಧಾನ, ಸ್ವಾತಂತ್ರ‍್ಯ, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಸದಾ ಕಾಪಾ ಡುವ ಸಂಕಲ್ಪದ ಸಂಕೇತವಾಗಿದೆ ಎಂದು ತಿಳಿಸಿದರು.
ಪ್ರಜಾಪ್ರಭುತ್ವವನ್ನು ಕ್ರೂರವಾಗಿ ಹತ್ತಿಕ್ಕಿದ ತುರ್ತು ಪರಿಸ್ಥಿತಿಯ ಕರಾಳ ದಿನದ ನೆನಪು ನಮ್ಮ ಸಂವಿಧಾನ, ಪ್ರಜಾಪ್ರಭುತ್ವ ವ್ಯ ವಸ್ಥೆಯಲ್ಲಿ ನಾಗರಿಕರ ಹಕ್ಕುಗಳನ್ನು ಸದಾ ರಕ್ಷಿಸಲು ನಮಗೆ ಪ್ರೇರಣೆ ನೀಡುತ್ತಿದೆ ಎಂದು ಬಿಜೆಪಿ ಮುಖಂಡ ರಾಘವೇಂದ್ರ ಹೇ ಳಿದರು.