೧೭ರಂದು ಜಿಲ್ಲಾ ಯಾದವ ಗೊಲ್ಲರ ಸಂಘಕ್ಕೆ ಚುನಾವಣೆ

ಬಿ.ಎಂ.ಗೋವಿAದರಾಜು
ಬಿ.ಎಂ.ಗೋವಿAದರಾಜು
Published on
ಚಿತ್ರದುರ್ಗ: ಜಿಲ್ಲಾ ಯಾದವ ಗೊಲ್ಲರ ಸಂಘದ ಆಡಳಿತ ಮಂಡಳಿ ೧೫ ಸ್ಥಾನಗಳಿಗೆ ಮೇ ೧೭ರಂದು ಚುನಾವಣೆ ನಡೆಯಲಿದೆ ಎಂದು ಚುನಾವಣಾಽಕಾರಿ, ಚಿತ್ರದುರ್ಗ ತಹಸೀಲ್ದಾರ್ ಬಿ.ಎಂ. ಗೋವಿಂದರಾಜು ತಿಳಿಸಿದ್ದಾರೆ.
ಸಂಘದ ೧೫ ಜನ ಸದಸ್ಯರು ಚುನಾವಣೆ ನಡೆದ ದಿನದಿಂದ ಮುಂದಿನ ೩ ವರ್ಷಗಳ ಅವಽಗೆ ಚುನಾವಣೆ ನಡೆಯಲಿದೆ.
ಮೇ ೨ರಿಂದ ೮ರವರೆಗೆ ಬೆಳಗ್ಗೆ ೧೧ರಿಂದ ಮಧ್ಯಾಹ್ನ ೩ರವರೆಗೆ ಚಿತ್ರದುರ್ಗ ತಾಲೂಕು ಕಚೇರಿಯಲ್ಲಿ ನಾಮಪತ್ರ ಸಲ್ಲಿಕೆ. ೯ ರಂದು ಬೆಳಗ್ಗೆ ೧೧ರಿಂದ ಮಧ್ಯಾಹ್ನ ೩ರವರೆಗೆ ನಾಮಪತ್ರಗಳ ಪರಿಶೀಲನೆ.
ನಂತರ ಕ್ರಮಬದ್ಧವಾಗಿ ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳ ಪಟ್ಟಿಯನ್ನು ತಾಲೂಕು ಕಚೇರಿ ಹಾಗೂ ಸಂಘದ ಸೂಚನಾ -Àಲಕದಲ್ಲಿ ಪ್ರಕಟಿಸಲಾಗುವುದು.
೧೧ರಂದು ಮಧ್ಯಾಹ್ನ ೩ ಗಂಟೆಯೊಳಗೆ ನಾಮಪತ್ರ ಹಿಂಪಡೆಯಲು ಅವಕಾಶವಿದೆ. ಅಂದು ಮಧ್ಯಾಹ್ನ ೩ರ ನಂತರ ಚಿಹ್ನೆಗಳ ಹಂಚಿಕೆಯೊAದಿಗೆ ಅಭ್ಯರ್ಥಿಗಳ ಅಂತಿಮ ಪಟ್ಟಿ ಹಾಗೂ ೧೩ ರಂದು ಸಂಜೆ ೪ಕ್ಕೆ ಮಾದರಿ ಮತಪತ್ರದ ನಮೂನೆ ಪ್ರಕಟಿಸಲಾಗುವುದು.
೧೭ ರಂದು ಬೆಳಗ್ಗೆ ೯ರಿಂದ ಸಂಜೆ ೪ರವರೆಗೆ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಮತದಾನ ನಡೆಯಲಿದೆ. ನಂತರ ಎಣಿಕೆ ನಡೆಸಿ ಅಂದೇ -Àಲಿತಾಂಶ ಘೋಷಿಸಲಾಗುವುದು ಎಂದು ತಿಳಿಸಿದ್ದಾರೆ.
ಅಭ್ಯರ್ಥಿಗಳು ಬೈಲಾ ಪ್ರಕಾರ ಸ್ಪರ್ಧೆಗೆ ಅರ್ಹರಾಗಿರಬೇಕು. ಸಂಘದ ಕಚೇರಿಯಲ್ಲಿ ೨೦೦೦ ರೂ. ಠೇವಣಿ ಪಾವತಿಸಿ ಚಲನ್ ಪಡೆಯಬೇಕು. ೨೦೨೬ರ ಏಪ್ರಿಲ್ ೨೬ ಕ್ಕೆ ಅಂತಿಮ ಮತದಾರರ ಪಟ್ಟಿಯಲ್ಲಿ ಹೆಸರು ಇರುವವರು ಮತದಾನ ಮತ್ತು ಸ್ಪರ್ಧೆಗೆ ಅರ್ಹರಿರುತ್ತಾರೆ.
ಮತದಾನದ ಸಮಯದಲ್ಲಿ ಸಂಘದ ಗುರುತಿನ ಚೀಟಿ ಕಡ್ಡಾಯ. ಮತಪತ್ರಗಳ ಮೂಲಕ ಚುನಾವಣೆ ನಡೆಯಲಿದೆ ಎಂದು ಗೋವಿಂದರಾಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net