ಮೊದಲ ಪ್ರಾಶಸ್ತ್ಯದಲ್ಲಿ ಎನ್‌ಡಿಎ ಅಭ್ಯರ್ಥಿ ಗೆಲ್ಲಿಸಿ

ಚಿತ್ರದುರ್ಗದಲ್ಲಿ ಬಿಜೆಪಿ ಬುಧವಾರ ಏರ್ಪಡಿಸಿದ್ದ ವಿಧಾನ ಪರಿಷತ್ ಆಗ್ನೇಯ ಕ್ಷೇತ್ರದ ಚುನಾವಣೆ ಪೂರ್ವಭಾವಿ ಸಭೆಯನ್ನು ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಉದ್ಘಾಟಿಸಿದರು. ಶಾಸಕ ಡಾ.ಎಂ. ಚಂದ್ರಪ್ಪ, ಅಭ್ಯರ್ಥಿ ಕೆ.ಎಂ. ಸುರೇಶ್, ಎಂಎಲ್‌ಸಿಗಳಾದ ಕೇಶವಪ್ರಸಾದ್, ಕೆ.ಎಸ್. ನವೀನ್, ಮಾಜಿ ಎಂಎಲ್‌ಸಿ ಶಿವಯೋಗಿ ಸ್ವಾಮಿ, ಮಾಜಿ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ, ಎಸ್.ಕೆ. ಬಸವರಾಜನ್, ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ. ಕುಮಾರಸ್ವಾಮಿ ಇತರರು ಇದ್ದರು.
ಚಿತ್ರದುರ್ಗದಲ್ಲಿ ಬಿಜೆಪಿ ಬುಧವಾರ ಏರ್ಪಡಿಸಿದ್ದ ವಿಧಾನ ಪರಿಷತ್ ಆಗ್ನೇಯ ಕ್ಷೇತ್ರದ ಚುನಾವಣೆ ಪೂರ್ವಭಾವಿ ಸಭೆಯನ್ನು ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಉದ್ಘಾಟಿಸಿದರು. ಶಾಸಕ ಡಾ.ಎಂ. ಚಂದ್ರಪ್ಪ, ಅಭ್ಯರ್ಥಿ ಕೆ.ಎಂ. ಸುರೇಶ್, ಎಂಎಲ್‌ಸಿಗಳಾದ ಕೇಶವಪ್ರಸಾದ್, ಕೆ.ಎಸ್. ನವೀನ್, ಮಾಜಿ ಎಂಎಲ್‌ಸಿ ಶಿವಯೋಗಿ ಸ್ವಾಮಿ, ಮಾಜಿ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ, ಎಸ್.ಕೆ. ಬಸವರಾಜನ್, ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ. ಕುಮಾರಸ್ವಾಮಿ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪಕ್ಷದ ಕಾರ್ಯಕರ್ತರಿಗೆ ಬಿಜೆಪಿ ರಾಜ್ಯಾಧ್ಯಕ್ಷರ ಮನವಿ
  • ಪರಿಷತ್‌ಗೆ ಹಣವಂತರ ಲಗ್ಗೆ, ವಿಜಯೇಂದ್ರ ಕಳವಳ
  • ವಿಧಾನ ಪರಿಷತ್ ಆಗ್ನೇಯ ಕ್ಷೇತ್ರ
ಚಿತ್ರದುರ್ಗ: ವಿಧಾನ ಪರಿಷತ್ ಆಗ್ನೇಯ ಕ್ಷೇತ್ರದಲ್ಲಿ ಪಕ್ಷಕ್ಕೆ ದೊರಕುತ್ತಿರುವ ನಿರಂತರ ಗೆಲುವನ್ನು ಮುಂದಿನ ಚುನಾವಣೆಯಲ್ಲೂ ಕಾಪಾಡಿ ಕೊಳ್ಳಬೇಕಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕಾರ್ಯಕರ್ತರಿಗೆ ಮನವಿ ಮಾಡಿದರು.
ನಗರದ ಜಿಜಿ ಸಮುದಾಯ ಭವನದಲ್ಲಿ ಬುಧವಾರ ಆಗ್ನೇಯ ಕ್ಷೇತ್ರಕ್ಕೆ ಅಕ್ಟೋಬರ್‌ನಲ್ಲಿ ನಡೆಯಲಿರುವ ಚುನಾವಣೆ ಪೂರ್ವಭಾವಿ ಸಭೆ ಉದ್ಘಾಟಿಸಿ ಮಾತನಾಡಿ, ಕೋಲಾರದಿಂದ ದಾವಣಗೆರೆವರೆಗೆ ೩೩ ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ಈ ಕ್ಷೇ ತ್ರದಲ್ಲಿ ಬಿಜೆಪಿ ಘೋಷಿತ ಎನ್‌ಡಿಎ ಅಭ್ಯರ್ಥಿ ಕೆ.ಎಂ. ಸುರೇಶ್ ಅವರು ಶೇ.೮೦ರಷ್ಟು ಮತಗಳಿಂದ ಗೆಲ್ಲುವು ಸಾಽಸಬೇಕು. ಈ ನಿಟ್ಟಿನಲ್ಲಿ ಕಾರ್ಯಕರ್ತರು, ಮುಖಂಡರು ಒಗ್ಗೂಡಿ ಕೆಲಸ ಮಾಡಬೇಕು. ಮೊದಲ ಪ್ರಾಶಸ್ತ್ಯದಲ್ಲೇ ಸುರೇಶ್ ಜಯಭೇರಿ ಬಾರಿಸ ಬೇಕು ಎಂದರು.
ನಾಡಿನ ಸಮಗ್ರ ಅಭಿವೃದ್ಧಿ ಕುರಿತು ಚರ್ಚೆ ಆಗಬೇಕಿರುವ ವಿಧಾನ ಪರಿಷತ್‌ಗೆ ರಾಜಕಾರಣದ ಚಟಕ್ಕೆ ಒಳಗಾಗಿರುವ ಹಣವಂತ ರು ಆಯ್ಕೆಯಾಗುವಂತಾಗುತ್ತಿದೆ. ಜನರ ಸೇವೆ ಮಾಡುವಂತಹವರ ಆಯ್ಕೆ ಮಾಡುವ ಹೊಣೆ ಎಲ್ಲರ ಮೇಲಿದೆ ಎಂದರು.
ಚಿತ್ರದುರ್ಗದಲ್ಲಿ ಸದ್ಯ ೪೩ ಸಾವಿರ ಮತದಾರರ ನೋಂದಣಿ ಆಗಿದೆ. ಚುನಾವಣೆ ವೇಳೆಗೆ ಈ ಸಂಖ್ಯೆ ೫೦ ಸಾವಿರ ತಲುಪಲಿದೆ. ಆಡಳಿತರೂಢ ಕಾಂಗ್ರೆಸ್ ಸುಮ್ಮನೆ ಕೂರುವುದಿಲ್ಲ. ಆದ್ದರಿಂದ ನಮ್ಮ ಅಭ್ಯರ್ಥಿ ಗೆಲುವಿಗೆ ಕಾರ್ಯಕರ್ತರು ಎಚ್ಚರಿಕೆಯಿಂದ ಕೆಲ ಸ ಮಾಡಬೇಕು. ಬಿಜೆಪಿ ಭದ್ರಕೋಟೆ ಚಿತ್ರದುರ್ಗ ಜಿಲ್ಲೆಯಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾಗಿದ್ದರೂ ಲೋಕಸಭೆಯಲ್ಲಿ ಗೆಲುವು ದೊರೆಯಿತು. ಜಯವನ್ನು ಪದವೀಧರ ಕ್ಷೇತ್ರದ ಚುನಾವಣೆಯಲ್ಲೂ ಸಾಽಸಬೇಕಾಗಿದೆ ಎಂದು ತಿಳಿಸಿ ದರು.
ಎಂಎಲ್‌ಸಿ ಕೆ.ಎಸ್. ನವೀನ್ ಮಾತನಾಡಿ, ಜನಸಂಘದಿAದಲೂ ಈ ಕ್ಷೇತ್ರದಲ್ಲಿ ಗೆಲುವು ನಮ್ಮದಾಗುತ್ತಾ ಬಂದಿದೆ. ಚುನಾವಣೆ ಎದುರಿಸಲು ತಂಡಗಳನ್ನು ಸಜ್ಜುಗೊಳಿಸಲಾಗುವುದು. ಎಸ್‌ಐಆರ್ ಕುರಿತಂತೆ ಪಕ್ಷದ ಕಾರ್ಯಕರ್ತರು ಎಚ್ಚರಿಕೆ ವಹಿಸಬೇಕಿದೆ. ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ಆಶಯಕ್ಕೆ ಪೂರಕವಾಗಿ ಎಸ್‌ಐಆರ್ ಪ್ರಕ್ರಿಯೆ ಆಗಬೇಕಿ ದೆ ಎಂದರು.
ಶಾಸಕ ಡಾ.ಎಂ. ಚಂದ್ರಪ್ಪ ಮಾತನಾಡಿ, ಶೈಕ್ಷಣಿಕ ಸೇವೆ ಮೂಲಕ ಸುರೇಶ್ ಅವರು ಗುರುತಿಸಿಕೊಂಡಿದ್ದಾರೆ. ಅವರನ್ನು ಗೆಲ್ಲಿ ಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬೆಂಬಲಿಸಬೇಕಿದೆ. ಅವರಿಗೆ ಜಯ ತಂದು ಕೊಡುವಂಥ ಕೆಲಸ ನಮ್ಮಿಂ ದಾಗಬೇಕಾಗಿದೆ. ನಮ್ಮ ಶಿಕ್ಷಣ ಸಂಸ್ಥೆಗಳಲ್ಲೇ ಹತ್ತಾರು ಸಾವಿರ ಶಿಕ್ಷಕರು, ಪದವೀಧರರಾಗಿದ್ದಾರೆ ಎಂದರು.
ಅಭ್ಯರ್ಥಿ ಸುರೇಶ್ ಮಾತನಾಡಿ, ಸಾಮಾನ್ಯ ಕಾರ್ಯಕರ್ತನಾದ ನನ್ನನ್ನು ಪಕ್ಷ ಗುರುತಿಸಿ ಟಿಕೆಟ್ ನೀಡಿದೆ. ನಾನು ಅಖಂಡ ಚಿತ್ರದುರ್ಗ ಜಿಲ್ಲೆ ಮಗ. ತಮ್ಮ ನಂಬಿಕೆಯನ್ನು ಉಳಿಸಿಕೊಂಡು ಪದವೀಧರರ ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕವಾಗಿ ಕೆಲಸ ಮಾಡುವುದಾಗಿ ತಿಳಿಸಿದರು.
ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಮಾತನಾಡಿ, ವಿಜಯೇಂದ್ರ ಅವರು ಅಧ್ಯಕ್ಷರಾದ ಬಳಿಕ ಚಾಮರಾಜನಗರದಿಂದ ಬೀದರ್‌ವರೆಗೆ ಪ್ರವಾಸ ಮಾಡಿ ಪಕ್ಷ ಸಂಘಟಿಸುತ್ತಿದ್ದಾರೆ. ಆಗ್ನೇಯ ಪದವೀಧರರ ಕ್ಷೇತ್ರ ವ್ಯಾಪ್ತಿ ದೊಡ್ಡದಿದೆ. ಆದ್ದರಿಂದ ನಾವೇ ಅಭ್ಯರ್ಥಿ ಎಂದು ಭಾವಿಸಿ ಸುರೇಶ್ ಗೆಲುವಿಗೆ ಶ್ರಮಿಸಬೇಕಾಗಿದೆ ಎಂದರು.
ಮಾಜಿ ಶಾಸಕ ಎಸ್.ಕೆ. ಬಸವರಾಜನ್, ಎಂಎಲ್‌ಸಿ ಕೇಶವಪ್ರಸಾದ್, ಮಾಜಿ ಎಂಎಲ್‌ಸಿ ಶಿವಯೋಗಿಸ್ವಾಮಿ, ಪಕ್ಷದ ಜಿಲ್ಲಾಧ್ಯಕ್ಷ ಕೆ.ಟಿ. ಕುಮಾರಸ್ವಾಮಿ, ಚುನಾವಣಾ ಸಹ ಪ್ರಭಾರಿ ಎಂ.ಸಿ. ರಘುಚಂದನ್, ನರೇಂದ್ರನಾಥ್, ಡಾ. ಸಿದ್ದಾರ್ಥ ಗುಂಡಾರ್ಪಿ, ಎನ್. ಆರ್. ಲಕ್ಷಿ÷್ಮÃಕಾಂತ, ರಾಜಣ್ಣ, ಅನಿಲ್, ಎ. ಮುರಳಿ, ಡಾ. ಸಿದ್ಧಾರ್ಥಗುಂಡಾರ್ಫಿ, ಮಾಧುರಿಗಿರೀಶ್, ಜಿ.ಎಚ್.ಮೋ ಹನ್‌ಕುಮಾರ್, ಬಾಳೆಕಾಯಿ ರಾಮದಾಸ್, ಲೋಕೇಶ್, ನಾಗರಾಜ್, ವೆಂಕಟೇಶ್‌ಯಾದವ್ ಇತರರು ಇದ್ದರು.
ಆತ್ಮಹತ್ಯೆ ಸಮಸ್ಯೆಗೆ ಮದ್ದಲ್ಲ
ಇವತ್ತು ನಿತ್ಯವೂ ಎಂಬAತೆ ನಾನಾ ಕ್ಷೇತ್ರಗಳಲ್ಲಿರುವ ಯುವಜನರು ಸಮಸ್ಯೆಗಳನ್ನು ಎದುರಿಸಲಾಗದೇ ಆತ್ಮಹತ್ಯೆ ಮಾಡಿಕೊ ಳ್ಳುತ್ತಿದ್ದಾರೆ ಎಂದು ವಿಜಯೇಂದ್ರ ಕಳವಳ ವ್ಯಕ್ತಪಡಿಸಿದರು. ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ಗಟ್ಟಿಯಾಗಿ ಎದುರಿಸ ಬೇಕು. ಯಾವುದೇ ಕಾರಣಕ್ಕೂ ಯಾರೂ ಆತ್ಮಹತ್ಯೆ ಮಾಡಿಕೊಳ್ಳಬಾರದು ಎಂದರು.
ಮುAದಿನ ಸಿಎಂ
ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ವಿಜಯೇಂದ್ರ ಅವರ ಸಂಘಟನಾ ಕಾರ್ಯ ಚಟುವಟಿಕೆಯನ್ನು ಪ್ರಶಂಸಿದರು. ವಿಜಯೇಂದ್ರ ಮುಂದಿನ ಮುಖ್ಯಮಂತ್ರಿ ಎಂದು ಶಾಸಕ ಡಾ. ಎಂ. ಚಂದ್ರಪ್ಪ ಅಭಿಮಾನ ಮೆರೆದರು.
ಸೋನಿಯಾ, ರಾಹುಲ್ ರಾಜೀನಾಮೆ ಕೇಳುವ ತಾಕತ್ತಿದೆಯೇ?
ಅಯೋಧ್ಯೆ ವಿಷಯಕ್ಕೆ ಸಂಬAಽಸಿ ಪ್ರಧಾನಿ ನರೇಂದ್ರ ಮೋದಿ ಅವರ ರಾಜೀನಾಮೆ ಕೇಳುತ್ತಿರುವ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿ ಪ್ರಸಾದ್ ಅವರಿಗೆ ನ್ಯಾಷನಲ್ ಹೆರಾಲ್ಡ್ ಹಗರಣದಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಽ, ಕೇಂದ್ರದ ಪ್ರತಿಪಕ್ಷ ನಾಯಕ ರಾಹುಲ್‌ಗಾಂಽ ಅವರ ರಾಜೀನಾಮೆ ಕೇಳುವ ತಾಕತ್ತು ಇದೆಯೇ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ .ವಿಜಯೇಂದ್ರ ಪ್ರಶ್ನಿಸಿ ದರು.
ನಗರದ ಜಿಜಿ ಸಮುದಾಯ ಭವನದಲ್ಲಿ ಬುಧವಾರ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆ ಪೂರ್ವಭಾವಿ ಸಭೆಯಲ್ಲಿ ಮಾತ ನಾಡಿ, ಪ್ರಧಾನಿ ರಾಜೀನಾಮೆ ಕೇಳುತ್ತಿರುವ ಹರಿಪ್ರಸಾದ್‌ಗೆ ನಾಚಿಕೆಯಾಗಬೇಕು. ಸ್ವಾತಂತ್ರ‍್ಯಯೋಧರು ಬೆವರು ಸುರಿಸಿ ಕಟ್ಟಿ ರುವ ನ್ಯಾಷನಲ್ ಹೆರಾಲ್ಡ್ ಸಂಸ್ಥೆಯಲ್ಲಿ ನೆಹರೂ ಕುಟುಂಬದವರು ೫ ಸಾವಿರ ಕೋಟಿ ರೂ.ಗಿಂತ ಅಽಕ ಹಣ ಲೂಟಿ ಹೊಡೆದಿ ದ್ದಾರೆ. ಈ ಪ್ರಕರಣದಲ್ಲಿ ಜಾಮೀನಿನ ಮೇಲಿರುವ ನಿಮ್ಮ ಕೆಲವು ನಾಯಕರ ರಾಜೀನಾಮೆ ಕೇಳಿ ಎದೆಗಾರಿಕೆ ತೋರಿ ಎಂದು ಸವಾಲು ಹಾಕಿದರು.
ಉತ್ತರ ಪ್ರದೇಶ ಸರ್ಕಾರ ಕಳವಿನ ತನಿಖೆಯನ್ನು ಎಸ್‌ಐಟಿಯಿಂದ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸುತ್ತಿದೆ. ಆದರೆ, ಕಾಂಗ್ರೆಸ್ ಸಿಬಿಐ ತನಿಖೆಗೆ ಒತ್ತಾಯಿಸುತ್ತಿದೆ. ೩ ವರ್ಷಗಳ ಹಿಂದೆ ಶ್ರೀ ಮಹರ್ಷಿ ವಾಲ್ಮೀಕಿ ನಿಗಮದ ನೂರಾರು ಕೋಟಿ ರೂ. ಹಗರಣವನ್ನು ಸಿಬಿಐಗೆ ವಹಿಸುವಂತೆ ಒತ್ತಾಯಿಸಿದ್ದರೂ ಕೇಳಿಸಿಕೊಳ್ಳದ ಕಾಂಗ್ರೆಸ್ಸಿಗೆ ಈಗ ಸಿಬಿಐ ಬಗ್ಗೆ ವಿಶ್ವಾಸ ಬಂದಿದೆ ಎಂದು ವ್ಯಂಗ್ಯ ವಾಡಿದರು.
ರಾಜ್ಯದಲ್ಲಿ ದುರಾಡಳಿತ ಹೆಚ್ಚಾಗಿದೆ. ಗ್ಯಾರಂಟಿಗಳ ನೆಪದಲ್ಲಿ ಯಾವುದೇ ಅಭಿವೃದ್ಧಿಗಳಾಗುತ್ತಿಲ್ಲ. ಹಿಂದೂ ಕಾರ್ಯಕರ್ತರ ಕಗ್ಗೊ ಲೆ ಆಗಿದೆ. ಹಲ್ಲೆ, ಮಹಿಳೆಯರ ಮೇಲೆ ದೌರ್ಜನ್ಯ ಹೆಚ್ಚಾಗಿದ್ದರೂ ತಪ್ಪಿತಸ್ಥರನ್ನು ಶಾಶ್ವತವಾಗಿ ಜೈಲಿಗಟ್ಟಿಲ್ಲ. ಬಿಜೆಪಿ ಅಲ್ಪ ಸಂ ಖ್ಯಾತರ ವಿರೋಽ ಅಲ್ಲ, ಆದರೆ ಪಾಕಿಸ್ತಾನ್ ಜಿಂದಾಬಾದ್ ಎನ್ನುವ ದೇಶದ್ರೋಹಿಗಳನ್ನು ಸಹಿಸಿಕೊಳ್ಳುವುದಿಲ್ಲ ಎಂದರು.
ರಾಷ್ಟಿçÃಯ ಚುನಾವಣಾ ಆಯೋಗ ಇಡೀ ದೇಶದಲ್ಲಿ ಎಸ್‌ಐಆರ್ ನಡೆಸುತ್ತಿದೆ. ಆದರೆ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇಡೀ ವ್ಯವಸ್ಥೆಯನ್ನು ಬುಡಮೇಲು ಮಾಡುತ್ತಿದೆ. ತಮ್ಮ ತಪ್ಪು ಮುಚ್ಚಿಹಾಕಲು ಆಯೋಗವನ್ನು ದೂರುವುದು ಸರಿಯಲ್ಲ. ಸಂವಿಧಾನಿಕ ಸಂಸ್ಥೆ ಮೇಲೆ ವಿಶ್ವಾಸವಿಡಬೇಕು ಎಂದು ವಿಜಯೇಂದ್ರ ಹೇಳಿದರು.
ರೈತರ ಸಂಕಷ್ಟಕ್ಕೆ ಸ್ಪಂದಿಸುವ ಜವಾಬ್ದಾರಿ ರಾಜ್ಯಸರ್ಕಾರದ ಮೇಲಿದೆ. ಸಿಎಂ ಡಿ.ಕೆ. ಶಿವಕುಮಾರ್ ಅವರು ಮೊಸಳೆ ಕಣ್ಣೀರು ಸುರಿಸದೆ ರೈತರ ಸಂಕಷ್ಟಗಳಿಗೆ ಸ್ಪಂದಿಸಬೇಕು ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net