ರಸ್ತೆ ವಿಸ್ತರಣೆಗೆ ಎಂಟು ಮಳಿಗೆಗಳ ತೆರವು

ಚಳ್ಳಕೆರೆಯ ಬಳ್ಳಾರಿ ವಾರ್ಗದ ರಸ್ತೆ ವಿಸ್ತರಣೆಗೆ ಮಂಗಳವಾರ ನಗರಸಭೆ ಆಡಳಿತ ಜೆಸಿಬಿ ಯಂತ್ರದ ಮೂಲಕ ಕಾಮಗಾರಿಗೆ ಅಟ್ಟಿಯಾಗಿದ್ದ ಮಳಿಗೆಗಳ ತೆರವು ಕಾರ್ಯ ನಡೆಸಿತು.
ಚಳ್ಳಕೆರೆಯ ಬಳ್ಳಾರಿ ವಾರ್ಗದ ರಸ್ತೆ ವಿಸ್ತರಣೆಗೆ ಮಂಗಳವಾರ ನಗರಸಭೆ ಆಡಳಿತ ಜೆಸಿಬಿ ಯಂತ್ರದ ಮೂಲಕ ಕಾಮಗಾರಿಗೆ ಅಟ್ಟಿಯಾಗಿದ್ದ ಮಳಿಗೆಗಳ ತೆರವು ಕಾರ್ಯ ನಡೆಸಿತು.
Published on

ಪ್ರಮುಖ ಮುಖ್ಯಾಂಶಗಳು

  • ಬಳ್ಳಾರಿ ವಾರ್ಗದ ರಸ್ತೆ ವಿಸ್ತರಣೆ
  • ಪೌರಾಯುಕ್ತೆ ಡಾ. ನಾಗವೇಣಿ ಅವರ ನಡೆಗೆ ಸಾರ್ವಜನಕರಿಂದ ಮೆಚ್ಚುಗೆ
ಚಳ್ಳಕೆರೆ: ನಗರದಲ್ಲಿ ಕುಂಠಿತವಾಗಿದ್ದ ಬಳ್ಳಾರಿ ವಾರ್ಗದ ರಸ್ತೆ ವಿಸ್ತರಣೆಗೆ ನಗರಸಭೆ ಮರುಚಾಲನೆ ನೀಡಿದ್ದು, ಮಂಗಳವಾರ ಬೆಳಗ್ಗೆಯಿಂದಲೇ ಜೆಸಿಬಿಯಿಂದ 8 ಮಳಿಗೆಗಳ ತೆರವು ಕಾರ್ಯಚರಣೆ ನಡೆಸಿತು.
ಈ ವೇಳೆ ಪೌರಾಯುಕ್ತೆ ಡಾ. ನಾಗವೇಣಿ ಮಾತನಾಡಿ, ನಗರದಲ್ಲಿ ಜನಸಂಖ್ಯೆ ಹೆಚ್ಚಾಗುತ್ತಿದ್ದು, ದಿನೇ ದಿನೆ ವಾಹನ ದಟ್ಟಣೆಯಿಂದ ಸಂಚಾರಕ್ಕೆ ತೊಡಕಾಗಿದೆ. ಬಳ್ಳಾರಿ ಮತ್ತು ಪಾವಗಡ ಮಾರ್ಗದ ರಸ್ತೆಗಳ ವಿಸ್ತರಣೆ ಅಗತ್ಯವಿದೆ. ಈ ಹಿಂದೆ ಕಾಮಗಾರಿ ಆರಂಭಿಸಲಾಗಿತ್ತು. ಕೆಲ ವರ್ತಕರು ಮಳಿಗೆ ತೆರವು ವಾಡಲು ಒಪ್ಪಿರಲಿಲ್ಲ. ಸಭೆ ಕರೆದು ಕಾನೂನು ಅರಿವು ಮೂಡಿಸಿಸಲಾಗಿತ್ತು. ಇದರಿಂದ 8 ಮಳಿಗೆಗಳ ವರ್ತಕರು ಸ್ವಯಂ ಪ್ರೇರಿತರಾಗಿ ಅಂಗಡಿಗಳನ್ನು ಖಾಲಿ ವಾಡಿದ್ದಾರೆ. ಇನ್ನು ಕೆಲವರು ನ್ಯಾಯಾಲಯಕ್ಕೆ ಹೋಗುವುದಾಗಿ ತಿಳಿಸಿದ್ದಾರೆ ಎಂದರು.
ಮಳಿಗೆಗಳ ತೆರವು ಕಾರ್ಯದ ಹಿನ್ನೆಲೆ ಬಳ್ಳಾರಿ ರಸ್ತೆ ವಾರ್ಗದಲ್ಲಿ ಪೊಲೀಸ್ ಬ್ಯಾರಿಕೇಡ್ ಹಾಕಿ ಸಿಬ್ಬಂದಿ ನಿಯೋಜನೆ ವಾಡಲಾಗಿತ್ತು. ನಗರಸಭೆ ಅಧಿಕಾರಗಳು, ಪೌರ ಕಾರ್ಮಿಕರು, ಸಿಬ್ಬಂದಿ ಸ್ಥಳದಲ್ಲಿದ್ದರು.
ಸಾರ್ವಜನಿಕರ ಒತ್ತಾಯ: ಪಾವಗಡ ರಸ್ತೆ ವಿಸ್ತರಣೆ ಕಾಮಗಾರಿ ಆರಂಭಿಸಿ ವರ್ಷಗಳೇ ಕಳೆದಿವೆ. ಕೆಲ ಮಳಿಗೆಗಳ ವಾಲೀಕರು ಕೋರ್ಟ್‌ಗೆ ಹೋಗಿದ್ದಾರೆ ಎಂಬ ಹಿನ್ನೆಲೆಯಲ್ಲಿ ನಗರಸಭೆ ಕಾಮಗಾರಿ ನಿಲ್ಲಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ನಗರದಲ್ಲಿ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಆದ್ದರಿಂದ ರಸ್ತೆ ವಿಸ್ತರಣೆ ಅಗತ್ಯ. ರಸ್ತೆ ಕಾಮಗಾರಿಗೆ ಅಡ್ಡಿಯಾಗಿರುವ ಮಳಿಗೆಗಳನ್ನು ತೆರವು ಮಾಡಿ ವಿಸ್ತರಣೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಅಧಿಕಾರಿಗಳ ನಡೆಗೆ ಜನರ ಮೆಚ್ಚುಗೆ: ನಗರದಲ್ಲಿ ಅನೇಕ ವರ್ಷಗಳಿಂದ ಶಿಥಿಲಾವಸ್ಥೆಯಲ್ಲಿದ್ದ 94ಮಳಿಗೆಗಳ ತೆರವಿಗೆ ಯಾವ ಅಧಿಕಾರಿಯೂ ಮುಂದಾಗಿರಲಿಲ್ಲ. ಈ ಹಿಂದೆ ಇದ್ದ ಪೌರಾಯುಕ್ತರು ವಿದ್ಯುತ್ ಸಂಪರ್ಕ ಸ್ಥಗಿತ ವಾಡಿ, ತೆರವು ಕಾರ್ಯಕ್ಕೆ ಮುಂದಾಗಿದ್ದರು. ಮಳಿಗೆದಾರರು ಕೋರ್ಟ್ ಮೊರೆ ಹೋಗಿದ್ದರು. ಕೆಲ ಮುಖಂಡರು ಅವರ ಬೆಂಬಲಕೆ ನಿಂತಿದ್ದರು. ಇದರಿಂದ ತೆರವು ಕಾರ್ಯ ನೆನೆಗುದಿಗೆ ಬಿದ್ದಿತ್ತು. ಪ್ರಸ್ತುತ ಪೌರಾಯುಕ್ತರಾಗಿರುವ ಡಾ. ನಾಗವೇಣಿ ಅವರು ಒತ್ತಡಕ್ಕೆ ಮಣಿಯದೆ ಪೊಲೀಸರ ಭದ್ರತೆಯಲ್ಲಿ 94 ಮಳಿಗೆಗಳನ್ನು ನೆಲಸಮ ವಾಡಿ, ರಸ್ತೆ ವಿಸ್ತರಣೆಗೆ ಮುಂದಾಗಿದ್ದಾರೆ ಎಂದು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net