ಆರ್ಥಿಕತೆ ಸಬಲೀಕರಣ ಎಂಎಸ್‌ಎAಇ ಉದ್ದೇಶ

ಚಿತ್ರದುರ್ಗದಲ್ಲಿ ಸೋಮವಾರ ಆಯೋಜಿಸಿದ್ದ ಎಂಎಸ್‌ಎAಇ ಕುರಿತಾ ಜಾಗೃತಿ ಕಾರ್ಯಾಗಾರದಲ್ಲಿ ಎಸ್‌ಜೆಎಂಐಟಿ ಪ್ರಾಚಾರ್ಯ ಡಾ.ಪಿ.ಬಿ. ಭರತ್, ರಾಘವೇಂದ್ರ, ಮಂಜುನಾಥ್, ಮಹಮ್ಮದ್ -Àಜಲುಲ್ಲಾ, ಮಹೇಶ್ವರಪ್ಪ, ಡಾ.ಬಿ.ಜಿ. ಕುಮಾರಸ್ವಾಮಿ, ಡಾ.ಎಸ್.ಪಿ. ಶಿವಕುಮಾರ್, ಡಾ.ಎ.ಎಂ. ರಾಜೇಶ್ ಇತರರು ಇದ್ದರು.
ಚಿತ್ರದುರ್ಗದಲ್ಲಿ ಸೋಮವಾರ ಆಯೋಜಿಸಿದ್ದ ಎಂಎಸ್‌ಎAಇ ಕುರಿತಾ ಜಾಗೃತಿ ಕಾರ್ಯಾಗಾರದಲ್ಲಿ ಎಸ್‌ಜೆಎಂಐಟಿ ಪ್ರಾಚಾರ್ಯ ಡಾ.ಪಿ.ಬಿ. ಭರತ್, ರಾಘವೇಂದ್ರ, ಮಂಜುನಾಥ್, ಮಹಮ್ಮದ್ -Àಜಲುಲ್ಲಾ, ಮಹೇಶ್ವರಪ್ಪ, ಡಾ.ಬಿ.ಜಿ. ಕುಮಾರಸ್ವಾಮಿ, ಡಾ.ಎಸ್.ಪಿ. ಶಿವಕುಮಾರ್, ಡಾ.ಎ.ಎಂ. ರಾಜೇಶ್ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪ್ರಾಚಾರ್ಯ ಡಾ.ಪಿ.ಬಿ. ಭರತ್ ಅಭಿಪ್ರಾಯ
  • ಎಸ್‌ಜೆಎಂಐಟಿಯಲ್ಲಿ ಉದ್ಯಮ ಜಾಗೃತಿ ಕಾರ್ಯಾಗಾರ
  • ಆರ್ಥಿಕತೆ ಸಬಲೀಕರಣ
ಚಿತ್ರದುರ್ಗ: ನಿರುದ್ಯೋಗ ಸಮಸ್ಯೆ, ಗ್ರಾಮೀಣ ಮತ್ತು ನಗರಗಳ ಆರ್ಥಿಕತೆ ಸಬಲೀಕರಣ ಎಂಎಸ್‌ಎAಇ ಮೂಲ ಉದ್ದೇಶವಾ ಗಿದೆ ಎಂದು ಎಸ್‌ಜೆಎಂ ತಾಂತ್ರಿಕ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಪಿ.ಬಿ. ಭರತ್ ಅಭಿಪ್ರಾಯಪಟ್ಟರು.
ರಾಜ್ಯ ಸೂಕ್ಷ÷್ಮ, ಸಣ್ಣ ಮತ್ತು ಮಧ್ಯಮ ಉದ್ಯಮ(ಎಂಎಸ್‌ಎAಇ)ಇಲಾಖೆಯಿAದ ನಗರದ ಎಸ್‌ಜೆಎಂ ತಾಂತ್ರಿಕ ಮಹಾ ವಿ ದ್ಯಾಲಯದಲ್ಲಿ ಸೋಮವಾರ ಆಯೋಜಿಸಿದ್ದ ಉದ್ಯಮ ಜಾಗೃತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ದೇಶದ ಅಭಿವೃದ್ಧಿ ಯಲ್ಲಿ ಎಂಎಸ್‌ಎAಇ ಅತ್ಯಂತ ಮಹತ್ತರ ಪಾತ್ರ ವಹಿಸುತ್ತಿದೆ ಎಂದರು.
ಇAಜಿನಿಯರಿAಗ್ ವಿದ್ಯಾರ್ಥಿಗಳು ಉದ್ಯೋಗ ಹುಡುಕುವ ಬದಲು ಉದ್ಯೋಗ ನೀಡುವಂಥರಾಗೋಣ ಎನ್ನುವ ಮನೋಭಾವ ಬೆಳೆಸಿಕೊಳ್ಳಬೇಕು. ಪದವಿಯಲ್ಲಿ ಪಡೆದ ಜ್ಞಾನ, ತಾಂತ್ರಿಕ ಕೌಶಲ ಹಾಗೂ ಸೃಜನಶೀಲತೆಗಳನ್ನು ಬಳಸಿಕೊಂಡು ಸಣ್ಣ ಉದ್ಯಮ ಆರಂಭಿಸಬೇಕು. ಇದರಿಂದ ತಮ್ಮ ಬದುಕು ಹಾಗೂ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯವಾಗಲಿದೆ ಎಂದರು.
ಕೆನರಾಬ್ಯಾAಕ್ ವ್ಯವಸ್ಥಾಪಕ ರಾಘವೇಂದ್ರ ಮಾತನಾಡಿ, ವಿದ್ಯಾಭ್ಯಾಸದ ನಂತರ ಉದ್ಯೋಗ ನಿರೀಕ್ಷಿಸಿ ಕುಳಿತುಕೊಳ್ಳುವುದ ಕ್ಕಿಂತ, ಸ್ವತಃ ಉದ್ಯಮ ಆರಂಭಿಸುವ ಮೂಲಕ ಮತ್ತೊಬ್ಬರಿಗೆ ಉದ್ಯೋಗ ಸÊಷ್ಟಿಸಬೇಕೆಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದ ರು. ಬ್ಯಾಂಕ್‌ಗಳಿAದ ಕಡಿಮೆ ಬಡ್ಡಿದರದಲ್ಲಿ ಸಾಲ, ಉತ್ಪಾದನಾ ಸಾಧನಗಳ ಖರೀದಿ, ವ್ಯವಹಾರ ವಿಸ್ತರಣೆ ಮತ್ತು ಹೊಸ ಆವಿಷ್ಕಾರಗಳಿಗೆ ಹಣಕಾಸು ಸಹಾಯದಂಥ ಸೌಲಭ್ಯಗಳನ್ನು ಪಡೆಯಬಹುದಾಗಿದೆ ಎಂದರು.
ಜಿಲ್ಲಾ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಉಪನಿರ್ದೇಶಕ ಮಂಜುನಾಥ್ ಮಾತನಾಡಿ, ರಾಜ್ಯ, ರಾಷ್ಟç ಆರ್ಥಿಕ ಶಕ್ತಿ ಉದ್ಯೋ ಗ ಸÊಷ್ಟಿ, ಗ್ರಾಮೀಣಾಭಿವೃದ್ಧಿ ಮತ್ತು ಸ್ಥಳೀಯ ಉತ್ಪಾದನೆಗಳ ಮೇಲೆ ನಿಂತಿದೆ. ಜಿಲ್ಲಾ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಬ್ಯು ಸಿನೆಸ್ ಐಡಿಯಾ ಪರಿಶೀಲಿಸಿ ಸಾಲ, ಅನುದಾನ, ಮತ್ತು ನೋಂದಣಿ ಪ್ರಕ್ರಿಯೆಗೆ ಸಂಪೂರ್ಣ ಸಹಕಾರ ನೀಡಲಿದೆ ಎಂದರು.
ಬೆAಗಳೂರಿನ ಎಂಎಸ್‌ಎAಇ ಸಹಾಯ ನಿರ್ದೇಶಕ ಮಹಮ್ಮದ್ -Àಜಲುಲ್ಲಾ, ದಾವಣಗೆರೆ ಬಾಪೂಜಿ ಪಾಲಿಟೆಕ್ನಿಕ್‌ನ ಮಹೇಶ್ವ ರಪ್ಪ, ಡಾ.ಬಿ.ಜಿ. ಕುಮಾರಸ್ವಾಮಿ, ಡಾ.ಎಸ್.ಪಿ. ಶಿವಕುಮಾರ್, ಡಾ.ಎ.ಎಂ. ರಾಜೇಶ್ ಇದ್ದರು. ಯುಕ್ತಾ ನಿರೂಪಿಸಿ, ದಯಾ ನಂದ್ ಸ್ವಾಗತಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net