ಫೆಬ್ರವರಿ ಅಂತ್ಯೊದೊಳಗೆ ದುರ್ಗಕ್ಕೆ ಭದ್ರೆ ನೀರು

 ಭದ್ರಾ ಮೇಲ್ದಂಡೆ ಯೋಜನೆ ಕುರಿತು ಚಿತ್ರದುರ್ಗದಲ್ಲಿ ಮಾಜಿ ಸಂಸದ ಪಿ. ಕೋದಂಡರಾಮಯ್ಯ ಮಾತನಾಡಿದರು. ಪ್ರೊ.ರವಿವರ್ಮ ಕುಮಾರ್, ಸೋಮಗುದ್ದು ರಂಗಸ್ವಾಮಿ, ಈಚಘಟ್ಟದ ಸಿದ್ದವೀರಪ್ಪ, ಬೇಡರೆಡ್ಡಿಹಳ್ಳಿ ಬಸವರೆಡ್ಡಿ, ಕೆ.ಸಿ. ಹೊರಕೇರಪ್ಪ ಇತರರು ಇದ್ದರು.
ಭದ್ರಾ ಮೇಲ್ದಂಡೆ ಯೋಜನೆ ಕುರಿತು ಚಿತ್ರದುರ್ಗದಲ್ಲಿ ಮಾಜಿ ಸಂಸದ ಪಿ. ಕೋದಂಡರಾಮಯ್ಯ ಮಾತನಾಡಿದರು. ಪ್ರೊ.ರವಿವರ್ಮ ಕುಮಾರ್, ಸೋಮಗುದ್ದು ರಂಗಸ್ವಾಮಿ, ಈಚಘಟ್ಟದ ಸಿದ್ದವೀರಪ್ಪ, ಬೇಡರೆಡ್ಡಿಹಳ್ಳಿ ಬಸವರೆಡ್ಡಿ, ಕೆ.ಸಿ. ಹೊರಕೇರಪ್ಪ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮಾಜಿ ಸಂಸದ ಪಿ. ಕೋದಂಡರಾಮಯ್ಯ ವಿಶ್ವಾಸ
  • ಅನುದಾನ ಕೊಡದ ಕೇಂದ್ರದ ವಿರುದ್ಧ ಅಸಮಾಧಾನ
  • ಸಾರ್ವಜನಿಕ ಹಿತ್ತಾಸಕ್ತಿ ಮೊಕದ್ದಮೆಗೆ ಚಿಂತನೆ
ಚಿತ್ರದುರ್ಗ: ಚಿತ್ರದುರ್ಗಕ್ಕೆ ಫೆಬ್ರವರಿ ಅಂತ್ಯಕ್ಕೆ ಪ್ರಾಯೋಗಿಕವಾಗಿ ಭದ್ರಾ ನೀರು ಹರಿಯಲಿದೆ ಎಂದು ಮಾಜಿ ಸಂಸದ, ಜಿಲ್ಲಾ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಪಿ.ಕೋದಂಡರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.
ನಗರದ ಪತ್ರಿಕಾಭವನದ ಡಾ.ಬಿ.ಆರ್. ಅಂಬೇಡ್ಕರ್ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ೨೦೦೩ ಸೆಪ್ಟೆಂಬರ್‌ನಲ್ಲಿ ಮಂಜೂರಾಗಿ ಮಂದಗತಿಯಲ್ಲಿ ಸಾಗಿದ್ದ ಈ ಯೋಜನೆ ಕಾಮಗಾರಿ ಶೇ.೬೦ ಪೂರ್ಣಗೊಂಡಿದೆ. ಎಲ್ಲವೂ ಅಂದುಕೊAಡAತೆ ಆದರೆ ಆಗಸ್ಟ್೧೫ರ ವೇಳೆಗೆ ಚಿತ್ರದುರ್ಗ ಶಾಖಾ ನಾಲಾ ಕಾಮಗಾರಿ ಪೂರ್ಣಗೊಳ್ಳಲಿದೆ. ಶುಕ್ರವಾರ ತಾವು ಕಾಮಗಾರಿ ಪರಿವೀಕ್ಷಣೆ ನಡೆಸುವ ಮುನ್ನ ಡಿಸಿಎಂ ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದೆ. ಮತ್ತೆ ಅವರೊಂದಿಗೆ ಚರ್ಚಿಸುತ್ತೇನೆ ಎಂದು ತಿಳಿಸಿದರು.
೧೯೯೬ರಲ್ಲಿ ಚಿತ್ರದುರ್ಗಲೋಕಸಭಾ ಕ್ಷೇತ್ರದಿಂದ ಸ್ಪಽðಸಿ ಗೆದ್ದಿದ್ದೆ. ಚುನಾವಣೆ ವೇಳೆ ಭದ್ರಾ ಹಾಗೂ ದಾವಣಗೆರೆ-ತುಮಕೂರು ನೇರ ರೈಲು ಮಾರ್ಗ ಯೋಜನೆ ಅನುಷ್ಠಾನದ ಭರವಸೆ ಕೊಟ್ಟಿದ್ದೆ. ಈಗ ಚಿಕ್ಕಮಗಳೂರು, ಚಿತ್ರದುರ್ಗ ವ್ಯಾಪ್ತಿಯ ಕಾಲುವೆಗಳಲ್ಲಿ ನೀರು ಹರಿಯುವುದನ್ನು ನೋಡಿ ಸಂಭ್ರಮಿಸಿದ್ದೇನೆ ಎಂದರು.
ರೈಲ್ವೆ ಯೋಜನೆ ಪೂರ್ಣಗೊಂಡು ರೈಲಿನಲ್ಲಿ ಒಮ್ಮೆ ಓಡಾಡಿದರೆ ಜೀವನ ಸಾರ್ಥಕವಾಗಲಿದೆ. ಭದ್ರಾ ಮಂಜೂರಾದ ಬಳಿಕ ನಡೆದ ಚುನಾವಣೆಯಲ್ಲಿ ನಾನು ಸೋತ್ತಿದ್ದು ನೋವು ತರಿಸಿತು. ಈ ಕಾರಣದಿಂದ ಹೋರಾಟದಿಂದ ಹಿಂದೆ ಸರಿದರೂ ಅಽಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ ಎಂದು ಕೋದಂಡರಾಮಯ್ಯ ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಖುದ್ದು ದುರ್ಗದಲ್ಲಿ ಹಾಗೂ ಬಜೆಟ್‌ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ಘೋಷಿಸಿದ್ದ ೫೩೦೦ ಕೋಟಿ ರೂ.ಅನುದಾನ ಬಿಡುಗಡೆ ಮಾಡಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು. ದೇಶದಲ್ಲೇ ಅತಿ ದೊಡ್ಡ ಹಾಗೂ ವೆಚ್ಚದ ಈ ಯೋಜನೆ ಅನುಷ್ಠಾನಕ್ಕೆ ಕೇಂದ್ರ ಸರ್ಕಾರ ಸ್ಪಂದಿಸಿದ್ದರೆ ಕಾಮಗಾರಿ ಇನ್ನಷ್ಟು ವೇಗ ಪಡೆಯುತ್ತಿತ್ತು. ಕರ್ನಾಟಕದಿಂದ ರಾಜ್ಯ ಸಭೆಗೆ ಆಯ್ಕೆಯಾಗಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೂಡ ಸ್ಪಂದಿಸುತ್ತಿಲ್ಲ. ಪತ್ರ ವ್ಯವಹಾರದಲ್ಲೇ ಕಾಲ ಹರಣವಾಗುತ್ತಿದೆ.
ಅಗತ್ಯ ಅನುದಾನ ಬಿಡುಗಡೆಗೆ ರಾಜ್ಯ ಸರ್ಕಾರವೂ ಮುತುವರ್ಜಿ ವಹಿಸಬೇಕಿದೆ. ೮ ಸಾವಿರ ಕೋಟಿ ರೂ. ಅಂದಾಜು ವೆಚ್ಚದ ಯೋಜನೆ ಮೊತ್ತ ೨೧,೫೦೦ ಕೋಟಿ ರೂ.ಗೆ ತಲುಪಿದೆ. ಗುತ್ತಿಗೆದಾರರ ಬಿಲ್ ಬಾಕಿ ಇದೆ. ಮುರುಘಾಮಠ ಸೇರಿ ಜಿಲ್ಲೆಯ ನಾ ನಾ ರಾಜ ಕಾರಣಿಗಳು, ಸಂಘ-ಸAಸ್ಥೆಗಳ ಮುಖಂಡರು ಹೋರಾಟಕ್ಕೆ ಬೆಂಬಲವಾಗಿ ನಿಂತಿದ್ದು, ಎರಡೂ ಯೋಜನೆಗಳಿಗೆ ಹಿಂದಿನ ಕೇಂದ್ರ, ರಾಜ್ಯ ಸರ್ಕಾರಗಳ ಸಚಿವರು ಸಹಕರಿಸಿದ್ದನ್ನು ಹಾಗೂ ತಾವು ಕೋರ್ಟಿಗೆ ಐದು ವರ್ಷ ಅಲೆದಾಡಿದ್ದನ್ನು ಕೋದಂಡರಾಮಯ್ಯ ಸ್ಮರಿಸಿದರು.
ಮಾಜಿ ಅಡ್ವೋಕೇಟ್ ಜನರಲ್ ಪ್ರೊ.ರವಿವರ್ಮಕುಮಾರ್ ಮಾತನಾಡಿ, ಭದ್ರಾ ಗುರುತ್ವಾಕರ್ಷಣ ಶಕ್ತಿಯಿಂದ ನಾಲೆಗಳಿಗೆ ನೀರು ಹರಿಸುವ ಯೋಜನೆಯಾಗಿದೆ. ಗುರುತ್ವಾಕರ್ಷಣÉ ಇಲ್ಲದ ಸ್ಥಳಗಳಲ್ಲಿ ನೀರನ್ನು ಪಂಪ್‌ಮಾಡಿ ಕೆರೆಗಳಿಗೆ ಹರಿಸಲಾಗುತ್ತಿದೆ ಎಂದರು.
ಭದ್ರಾಕ್ಕೆ ಸಂಬAಽಸಿದAತೆ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹೂಡುವ ಕುರಿತು ಅಧ್ಯಯನ ನಡೆಸುತ್ತಿದ್ದೇನೆ. ರಾಜ್ಯದ ಸಂಸದರು ಅಽವೇಶನದಲ್ಲಿ ಧ್ವನಿಯೆತ್ತಿದ್ದರೆ ೫೩೦೦ ಕೋಟಿ ರೂ. ಬಿಡುಗಡೆ ಆಗುವುದು ಖಚಿತ. ಇದಕ್ಕಾಗಿ ಹೋರಾಟ ನಡೆಸಬೇಕಿದೆ ಎಂದರು.
ಶಿವುಯಾದವ್, ಸೋಮಗುದ್ದು ರಂಗಸ್ವಾಮಿ, ಈಚಘಟ್ಟದ ಸಿದ್ದವೀರಪ್ಪ,ಬೇಡರೆಡ್ಡಿಹಳ್ಳಿ ಬಸವರೆಡ್ಡಿ, ಕೆ.ಸಿ. ಹೊರಕೇರಪ್ಪ, ಸಿ.ಟಿ. ಕÊಷ್ಣಮೂರ್ತಿ, ಜಿ.ಎಸ್. ಉಜ್ಜನಪ್ಪ, ಆರ್. ಶೇಷಣ್ಣಕುಮಾರ್, ಡಿ.ದುರುಗೇಶ್, ಚಳ್ಳಕೆರೆ ಬಸವರಾಜ್, ನರೇನಹಳ್ಳಿ ಅರುಣ್‌ಕುಮಾರ್, ರಾಘವೇಂದ್ರನಾಯ್ಕ, ಕೂನಿಕೆರೆ ರಾಮಣ್ಣ, ಸಂಪತ್‌ಕುಮಾರ್, ಟಿ. ಶಫಿವುಲ್ಲಾ, ತಿಪ್ಪೀರಯ್ಯ, ವದ್ಧಿಕೆರೆ ಕಾಂತರಾಜ್ ಇನ್ನಿತರ ಪ್ರಮುಖರು ಇದ್ದರು.
ಜನರನ್ನು ಸಂಕಷ್ಟಕ್ಕೆ ದೂಡಿದೆ
ಭದ್ರಾ ವಿಚಾರದಲ್ಲಿ ಕೇಂದ್ರ-ರಾಜ್ಯಸರ್ಕಾರಗಳ ನಡುವಿನ ಸಂಘರ್ಷ ಜನರನ್ನು ಸಂಕಷ್ಟಕ್ಕೆ ದೂಡಿದೆ. ಸಂಪನ್ಮೂಲ ಕೇಂದ್ರದ ಹಿಡಿತದಲ್ಲಿದೆ. ನರೇಗಾ ಬದಲಾವಣೆಯಿಂದ ವಿವಿಧ ರಾಜ್ಯಗಳ ಮೇಲೆ ಆರ್ಥಿಕ ಹೊರೆ ಇನ್ನಷ್ಟು ಹೆಚ್ಚಾಗಲಿದೆ ಎಂದು ಕೋದಂಡರಾಮಯ್ಯ ಆತಂಕ ವ್ಯಕ್ತಪಡಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net