

ಪ್ರಮುಖ ಮುಖ್ಯಾಂಶಗಳು
ಇದೆಲ್ಲವೂಕಂಡು ಬಂದದ್ದು ಪಟ್ಟಣದ ಸಿದ್ದರಾಮೇಶ್ವರಸಮುದಾಯ ಭವನದಲ್ಲಿ ಸೋಮವಾರಆಯೋಜನೆಗೊಂಡಿದ್ದ ವಿಶಿಷ್ಟವಿವಾಹ ಮಹೋತ್ಸವದಲ್ಲಿ.ವಧು ಮತ್ತು ವರಇಬ್ಬರೂ ಹುಟ್ಟಿನಿಂದಲೇ ಮಾತುಮತ್ತು ಶ್ರವಣ ಶಕ್ತಿ ಕಳೆದುಕೊಂಡವರು.ಮಾತು ಬಾರದಿದ್ದರೂ,ಕಿವಿ ಕೇಳದಿದ್ದರೂಉತ್ತಮ ಬದುಕು ರೂಪಿಸಿಕೊಂಡುದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಹೊಸದುರ್ಗತಾಲೂಕಿನ ಹಳೆ ಮಳಲಿ ಗ್ರಾಮದಕೃಷಿಕರಾದ ಶೋಭಾ ಮತ್ತು ಪ್ರಕಾಶ್ದಂಪತಿಯ ಪುತ್ರಿ ಸಂಗೀತ ಹಾಗೂಕಡೂರು ತಾಲೂಕಿನ ಕಾಮನಕೆರೆ ಗ್ರಾಮದರೈತರಾದ ಕೋಮಲ ಮತ್ತು ಶಿವಲಿಂಗಪ್ಪಅವರ ಪುತ್ರ ಕೆ.ಎಸ್.ಅವಿನಾಶ್ ಇಬ್ಬರೂಹುಟ್ಟಿನಿಂದಲೇ ಮಾತು ಮತ್ತುಶ್ರವಣಶಕ್ತಿ ಕಳೆದುಕೊಂಡವರು.ಆದರೆ,ಮನೆಯವರ ಕಾಳಜಿಯಿಂದಇಬ್ಬರೂ ತಂತ್ರಜ್ಞಾನ ಪದವೀಧರರಾಗಿ,ಜರ್ಮನ್ ಮೂಲದಅಂತರರಾಷ್ಟ್ರೀಯ ಕಂಪನಿಯಲ್ಲಿಉನ್ನತ ಉದ್ಯೋಗ ಪಡೆದು ಯುವಸಮುದಾಯಕ್ಕೆ ಮಾದರಿಯಾಗಿದ್ದಾರೆ.
ಕುಟುಂಬದವರುಹಾಗೂ ಹಿತೈಷಿಗಳ ಇಚ್ಛೆಯಂತೆಸತಿಪತಿಗಳಾಗಿ ಹೊಸ ಜೀವನಕ್ಕೆಕಾಲಿಟ್ಟಿದ್ದಾರೆ.ಈ ವೇಳೆ ಸಂಗೀತಹಾಗೂ ಅವಿನಾಶ್ ಅವರ ಜೊತೆಯಲ್ಲಿಓದಿದ, ಉದ್ಯೋಗಮಾಡುತ್ತಿರುವ ಮಾತು ಬಾರದ,ಕಿವಿ ಕೇಳದ180ಕ್ಕೂಹೆಚ್ಚಿನ ಯುವ ಸ್ನೇಹಿತರು ಮದುವೆಗೆಸಾಕ್ಷಿಯಾದರು.
ಮದುವೆಮನೆಯಲ್ಲಿ ಗದ್ದಲ,ಗಲಾಟೆಗಳಿಲ್ಲದೆ,ಮೌನಕ್ಕೂ ಜಾರದೆಅವರದೇ ವಿಶೇಷ ಸಂವಹನ ನಡೆಯುತ್ತಿತ್ತು.ಮಾತು ಬಾರದಿದ್ದರೂಸಾಮಾಜಿಕ ಅಡೆತಡೆ ಮೀರಿ ಪ್ರೀತಿಹಾಗೂ ದಾಂಪತ್ಯದ ಬದುಕಿಗೆ ಕಾಲಿಟ್ಟವಧುವರರನ್ನು ಎಲ್ಲರೂ ಮನತುಂಬಿಹರಸಿದರು.
ನಿವೃತ್ತಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕಸಿದ್ದರಾಮಪ್ಪ,ಸಿದ್ದರಾಮೇಶ್ವರವಿದ್ಯಾಸಂಸ್ಥೆ ಉಪಾಧ್ಯಕ್ಷಅರಳಿಹಳ್ಳಿ ಲೋಕೇಶ್ವರಪ್ಪ,ಖಜಾಂಚಿ ಟಿ.ಪಾಲಾಕ್ಷ,ಶೆಟ್ಟಿಹಳ್ಳಿನಾಗಭೂಷಣ್, ಸಫಾರಿಶಿವಲಿಂಗಪ್ಪ ಮತ್ತಿತರರು ಮದುವೆಗೆಸಾಕ್ಷಿಯಾದರು.
ನೂತನ ಜೀವನಕ್ಕೆಕಾಲಿಟ್ಟ ವರ ಕೆ.ಎಸ್.ಅವಿನಾಶ್ಅಂತರರಾಷ್ಟ್ರೀಯ ಕ್ರೀಡಾಪಟುವಾಗಿಗುರುತಿಸಿಕೊಳ್ಳುವ ಜೊತೆಗೆರಾಷ್ಟ್ರಪತಿಯವರಿಂದ ಅಭಿನಂದನೆಸ್ವೀಕರಿಸಿದ್ದಾರೆ.2023ರಲ್ಲಿಫ್ರಾನ್ಸ್‌ನಲ್ಲಿ ನಡೆದ 10ನೇಅಂತರರಾಷ್ಟ್ರೀಯ ಅಬಿಲಿಂಪಿಕ್ಸ್‌ನಲ್ಲಿಪಾಲ್ಗೊಂಡು ವಿವಿಧ ಕೌಶಲಸ್ಪರ್ಧೆಗಳಲ್ಲಿ ಚಿನ್ನ,ಬೆಳ್ಳಿ,ಕಂಚು ಸೇರಿ 7ಪದಕಗಳನ್ನುಪಡೆದು ವಿಶೇಷ ಸಾಧನೆ ಮಾಡಿದ್ದಾರೆ.ಇವರ ಸಾಧನೆಗೆರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿದ್ರೌಪದಿ ಮುರ್ಮು ಹಾಗೂ ಅಂದಿನಕೇಂದ್ರ ಕ್ರೀಡಾ ಸಚಿವ ಅನುರಾಗ್ಠಾಕೂರ್ ಅಭಿನಂದನೆ ಸಲ್ಲಿಸಿದ್ದಾರೆ.