ಹೊಳಲ್ಕೆರೆ ತಾಲೂಕಿಗೆ ಕುಡಿವ ನೀರು ಪೂರೈಸಲು ಹಿರಿಯೂರು ವಿವಿ ಸಾಗರ ಜಲಾಶಯದಲ್ಲಿ ನಿರ್ಮಿಸಿರುವ ಜಾಕ್‌ವೆಲ್‌ನ್ನು ಶಾಸಕ ಡಾ.ಎಂ.ಚಂದ್ರಪ್ಪ ಶುಕ್ರವಾರ ವೀಕ್ಷಿಸಿದರು. ಎಂ.ಸಿ.ರಘುಚಂದನ್, ಕುಮಾರ್, ಸಿದ್ದೇಶ್, ಡಿ.ಸಿ.ಮೋಹನ್ ಇತರ ಪ್ರಮುಖರು ಇದ್ದರು.
ಚಿತ್ರದುರ್ಗ: ಹಿರಿಯೂರು ತಾಲೂಕು ವಾಣಿವಿಲಾಸ ಸಾಗರ ಜಲಾಶಯದಿಂದ ಹೊಳಲ್ಕೆರೆ ತಾಲೂಕಿನ ಗ್ರಾಮಗಳಿಗೆ ಕುಡಿಯುವ ನೀರು ಪೂರೈಸುವ ೩೬೭ ಕೋಟಿ ರೂ.ವೆಚ್ಚದ ಯೋಜನೆ ಪೂರ್ಣಗೊಂಡಿದೆ. ನಿಗದಿತ ವೆಚ್ಚ ಹೆಚ್ಚಾಗದಂತೆ ತ್ವರಿತವಾಗಿ ಪೂರ್ಣ ಗೊಂಡಿದ್ದು, ರಾಜ್ಯ ಮತ್ತು ದೇಶದಲ್ಲೇ ಪ್ರಥಮ ಎಂಬ ದಾಖಲೆಗೆ ಪಾತ್ರವಾಗಿದೆ.
ವಿವಿ ಸಾಗರದಲ್ಲಿರುವ ಜಾಕ್‌ವೆಲ್ ಅನ್ನು ಶುಕ್ರವಾರ ವೀಕ್ಷಿಸಿದ ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ ಸುದ್ದಿಗಾರರೊಂದಿಗೆ ಈ ಮಾಹಿತಿ ಹಂಚಿಕೊಂಡರು. ೨೦೫೨ರಲ್ಲಿ ಇರಬಹುದಾದ ಜನಸಂಖ್ಯೆ ಆಧರಿಸಿ ಯೋಜನೆ ಅನುಷ್ಠಾನವಾಗಿದೆ. ಈ ಬೃಹತ್ ಯೋಜನೆ ಆರಂಭವಾದ ೪ ವರ್ಷಗಳಲ್ಲಿ ಪೂರ್ಣಗೊಂಡಿದ್ದು ೪೦೦ ಹಳ್ಳಿಗಳಿಗೆ ನೀರು ಒದಗಿಸಲಿದೆ. ಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ನೀರು ಪೂರೈಕೆಗೆ ಚಾಲನೆ ದೊರೆಯಲಿದೆ ಎಂದರು.
ಈಗಾಗಲೇ ಟ್ರಯಲ್ ರನ್ ಮೂಲಕ ತಾಲೂಕಿನ ಹಾಲೇನಹಳ್ಳಿಗೆ ನೀರು ಹರಿಸಲಾಗಿದೆ. ಇನ್ನು ಒಂದೂವರೆ ತಿಂಗಳೊಳಗೆ ಹೊ ಳಲ್ಕೆರೆ ಪಟ್ಟಣ ಹಾಗೂ ತಾಲೂಕಿನ ಎಲ್ಲ ಗ್ರಾಮಗಳಿಗೆ ೨೪ ತಾಸು ನಿಯಮಿತವಾಗಿ ಶುದ್ಧ ಕುಡಿಯುವ ನೀರು ಪೂರೈಕೆ ಯಾಗಲಿದೆ.
ಜಾಕ್‌ವೆಲ್ ಇರುವ ಜಾಗದಿಂದ ೧೦೦ ಅಡಿ ಆಳದಲ್ಲಿ ನೀರಿದೆ. ಅದರ ಕೆಳಗಡೆ ಇದ್ದ ೪೦-೪೫ ಅಡಿ ದಪ್ಪದ ಬಂಡೆ ಕೊರೆದು ಪೈಪ್‌ಪಿಲ್ಲರ್‌ಗಳನ್ನು ನಿರ್ಮಿಸಲಾಗಿದೆ. ನೀರಿನ ಮಟ್ಟಕ್ಕಿಂತ ಮೇಲೆ ೩೦ ಅಡಿ ಎತ್ತರಕ್ಕೆ ಈ ಪಿಲ್ಲರ್‌ಗಳಿದ್ದು, ಒಟ್ಟಾರೆ ೧೭೦ ಅಡಿ ಎತ್ತರದ ಬÊಹತ್ ಜಾಕ್‌ವೆಲ್ ಕಟ್ಟಡವನ್ನು ನಿರ್ಮಿಸಲಾಗಿದೆ.
ಜಲಾಶಯದ ಡೆಡ್ ಸ್ಟೋರೇಜ್ ೬೦ ಅಡಿ ಇದೆ. ಆದ್ದರಿಂದ ಎಂಥದ್ದೇ ಕಠಿಣ ಸಂದರ್ಭದಲ್ಲೂ ಕುಡಿವ ನೀರಿಗೆ ತೊಂದರೆ ಆಗದು. ಭದ್ರಾ ಹಾಗೂ ಎತ್ತಿನಹೊಳೆಯಿಂದಲೂ ವಿವಿ ಸಾಗರಕ್ಕೆ ನೀರು ಹರಿಯಲಿರುವುದರಿಂದ ನೀರಿನ ಕೊರತೆ ಕಾಣಿಸದು ಎಂದರು.
ಮುಖಂಡರಾದ ಎಂ.ಸಿ.ರಘುಚಂದನ್, ಕುಮಾರ್, ಸಿದ್ದೇಶ್, ಡಿ.ಸಿ.ಮೋಹನ್, ತಿಪ್ಪೇಸ್ವಾಮಿ, ಈಶಣ್ಣ, ರಮೇಶ್, ಪ್ರವೀಣï, ರಂಗಸ್ವಾಮಿ, ನಿತಿನ್, ಬಂಗಾರಪ್ಪ, ನಾಗರಾಜ್ ಶಿವಪುರ, ಚಿತ್ರಹಳ್ಳಿ ದೇವರಾಜ್ ಸೇರಿದಂತೆ ಕ್ಷೇತ್ರದ ವಿವಿಧ ಗ್ರಾಮಗಳ ಗ್ರಾಮಸ್ಥರು,ಪ್ರಮುಖರು ಇದ್ದರು.
೨೪/೭ ನಿರಂತರ ನೀರು ಪೂರೈಕೆ
ಈ ಯೋಜನೆಯಡಿ ೧,೬೦೦ ಎಚ್‌ಪಿ ಸಾಮರ್ಥ್ಯದ ಮೂರು ಪಂಪ್‌ಗಳು ಹಾಗೂ ವಿದ್ಯುತ್ ವ್ಯವಸ್ಥೆ ಕಲ್ಪಿಸಲಾಗಿದೆ. ೩ ಪಂಪ್ ಗಳ ಪೈಕಿ ೨ ನಿರಂತರ ಕರ‍್ಯಾಚರಣೆ ನಡೆಸಲಿದ್ದು, ಒಂದನ್ನು ತುರ್ತು ಸಂದರ್ಭಕ್ಕೆ ಕಾಯ್ದಿರಿಸಲಾಗಿದೆ. ವಿದ್ಯುತ್ ಸಹಿತ ಯಾ ವುದೇ ತಾಂತ್ರಿಕ ಅಡಚಣೆಯಾಗದಂತೆ ದಿನದ ೨೪ ಗಂಟೆ, ವರ್ಷದ ೩೬೫ ದಿನವೂ ನೀರು ಪೂರೈಕೆಯಾಗಲಿದೆ.
ವಾಣಿ ವಿಲಾಸ ಸಾಗರದಿಂದ ೨೫ ಕಿ.ಮೀ ದೂರದ ಹಾಲೇನಹಳ್ಳಿಯಲ್ಲಿರುವ ೬೦ ಕೋಟಿ ರೂ.ವೆಚ್ಚದ ಫಿಲ್ಟರ್ ಘಟಕಕ್ಕೆ ನೀರನ್ನು ಹಾಯಿಸಿ, ನಂತರದಲ್ಲಿ ಗಟ್ಟಿಹೊಸಹಳ್ಳಿ ಗುಡ್ಡಕ್ಕೆ ಲಿ-ï್ಟ ಮಾಡಲಾಗುತ್ತದೆ. ಅಲ್ಲಿಂದ ಇಡೀ ತಾಲೂಕಿಗೆ ಗುರುತ್ವಾಕರ್ಷಣೆ ಆಧಾರದೊಂದಿಗೆ ೬೨೫ ಕಿ.ಮೀ ಉದ್ದದ ಪೈಪ್‌ಲೈನ್ ಜಾಲದ ಮೂಲಕ ನೀರು ಪೂರೈಕೆ ಆಗಲಿದೆ.
೪೦೦ಕ್ಕೂ ಹೆಚ್ಚು ಹಳ್ಳಿಗಳಿಗೆ ನೀರು
ಹೊಳಲ್ಕೆರೆ ತಾಲೂಕಿನ ಸಣ್ಣ, ದೊಡ್ಡ ಗ್ರಾಮಗಳು ಹಾಗೂ ಹಟ್ಟಿಗಳು ಸೇರಿದಂತೆ ೪೦೦ಕ್ಕೂ ಹೆಚ್ಚು ಜನವಸತಿ ಪ್ರದೇಶಗಳಿಗೆ ನೀರು ತ ಲುಪಲಿದೆ. ಹೊಳಲ್ಕೆರೆ ಟೌನ್‌ಗೆ ೨೫ ಕೋಟಿ ರೂ.ವೆಚ್ಚದಲ್ಲಿ ಪ್ರತ್ಯೇಕ ಪೈಪ್‌ಲೈನ್ ಜಾಲ ರೂಪಿಸಲಾಗಿದೆ. ಇದರಿಂದಾಗಿ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯಲಿದೆ.
೩೦೦ ಕೋಟಿ ರೂ.ವೆಚ್ಚದಲ್ಲಿ ಪವರ್‌ಸ್ಟೇಷನ್
ಕ್ಷೇತ್ರದ ರೈತರಿಗೆ ವಿದ್ಯುತ್ ಸಮಸ್ಯೆ ಎದುರಾಗದಂತೆ ಜೋಗ-Áಲ್ಸ್ನಿಂದ ವಿದ್ಯುತ್ ಪೂರೈಕೆಗೆ ಕ್ರಮ ವಹಿಸಲಾಗಿದೆ. ಭರಮಸಾಗರ ಮತ್ತು ಹೊಳಲ್ಕೆರೆ ಭಾಗದಲ್ಲಿ ೩೦೦ ಕೋಟಿ ರೂ.ವೆಚ್ಚದಲ್ಲಿ ೨೨೦ ಕೆವಿಎ ಸಾಮರ್ಥ್ಯದ ಬÊಹತ್ ವಿದ್ಯುತ್ ಉಪಕೇಂದ್ರ ನಿರ್ಮಿಸಲಾಗುತ್ತಿದೆ.
"
ಕ್ಷೇತ್ರದ ಜನರು ಐದು ಬಾರಿ ನನ್ನನ್ನು ಶಾಸಕನಾಗಿ ಆಯ್ಕೆ ಮಾಡಿದ್ದಾರೆ. ಅವರ ಋಣ ತೀರಿಸಲು ಮೊದಲ ಹಂತದಲ್ಲಿ ಕುಡಿಯುವ ನೀರು ಯೋಜನೆ ಪೂರ್ಣಗೊಳಿಸಿದ್ದೇನೆ. ಮುಂದಿನ ದಿನಗಳಲ್ಲಿ ಕೆರೆ ತುಂಬಿಸುವ ಯೋಜನೆ ಹಾಗೂ ರಸ್ತೆ ಕಾಮಗಾರಿಗಳಿಗೆ ಆದ್ಯತೆ ನೀ ಡಲಾಗುವುದು.