ಐಟಿಐ ಸರ್ವೆ ಟ್ರೇಡ್ ವಿದ್ಯಾರ್ಥಿಗಳ ಕನಸು ಭಗ್ನ

ಸರ್ವೆ
ಸರ್ವೆ
Published on

ಪ್ರಮುಖ ಮುಖ್ಯಾಂಶಗಳು

  • ನೇಮಕಾತಿಯಿಂದ ಹೊರಗಿಟ್ಟ ಕೆಇಎ
  • ಸರ್ಕಾರಿ ಉದ್ಯೋಗ ಗಗನ ಕುಸುಮವೇ?
  • ಭೂ ಮಾಪಕರ ಪರೀಕ್ಷೆಗೆ ವಿದ್ಯಾರ್ಹತೆ ಪರಿಗಣಿಸಲಿ
ಕೆ.ಎಸ್.ಪ್ರಣವಕುಮಾರ್ ಚಿತ್ರದುರ್ಗ
ಕುಶಲಕರ್ಮಿ ತರಬೇತಿ ಯೋಜನೆ ಅಡಿಯಲ್ಲಿ ೨ ವರ್ಷದ ತಾಂತ್ರಿಕ ವÊತ್ತಿಪರ ಕೋರ್ಸ್ ಆದ ಐಟಿಐ ಇನ್ ಸರ್ವೆ ಟ್ರೇಡ್ ಪೂರೈಸಿರುವ ರಾಜ್ಯದ ಸಾವಿರಾರು ವಿದ್ಯಾರ್ಥಿಗಳ ಸರ್ಕಾರಿ ಉದ್ಯೋಗದ ಕನಸು ಈಗ ಕಮರುವ ಹಂತದಲ್ಲಿದೆ.
ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆಯ ಉಳಿಕೆ ಮೂಲ ವÊಂದದಲ್ಲಿ ಖಾಲಿ ಇರುವ ಗ್ರೂಪ್ `ಸಿ` ಹುದ್ದೆಯ ೫೬೦ ಭೂ ಮಾಪಕರನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಸರ್ಕಾರ ನಿರ್ಧರಿಸಿದೆ.
ಆದರೆ, ಈ ಸಂಬಂಧ ಕರ್ನಾಟಕ ಪರೀಕ್ಷಾ ಪ್ರಾಽಕಾರ ೨೦೨೬ರ ಸಾಲಿನಲ್ಲಿ ಹೊರಡಿಸಿರುವ ಅಽಸೂಚನೆಯಲ್ಲಿ ಈ ಕೋರ್ಸ್ ಅನ್ನು ವಿದ್ಯಾರ್ಹತೆಯಾಗಿ ಪರಿಗಣಿಸಿಲ್ಲ. ಇದರಿಂದಾಗಿ ವÊತ್ತಿಪರ ತರಬೇತಿ ಪಡೆದ ಸಾವಿರಾರು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಾಗದೆ ಕಂಗಾಲಾಗಿದ್ದಾರೆ.
೨೦೨೪ರ ನೇಮಕಾತಿಯಲ್ಲಿತ್ತು ಅವಕಾಶ!
೨೦೨೪ರಲ್ಲಿ ಕರ್ನಾಟಕ ಲೋಕಸೇವಾ ಆಯೋಗ ಇದೇ ವÊಂದದ ೨೬೪ ಭೂ ಮಾಪಕರ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನಿಸಿ ತ್ತು. ಆ ವೇಳೆ ಶೈಕ್ಷಣಿಕ ವಿದ್ಯಾರ್ಹತೆಯಲ್ಲಿ ಐಟಿಐ ಇನ್ ಸರ್ವೆ ಟ್ರೇಡ್ ಅನ್ನು ಮಾನ್ಯ ಮಾಡಲಾಗಿತ್ತು. ಇದನ್ನು ನೆಚ್ಚಿಕೊಂಡೇ ರಾಜ್ಯದ ಅನೇಕ ವಿದ್ಯಾರ್ಥಿಗಳು ಈ ಕೋರ್ಸ್ಗೆ ಸೇರಿ ಉತ್ತೀರ್ಣರಾಗಿದ್ದಾರೆ.
ಆದರೆ, ಇದೀಗ ಪ್ರಾಽಕಾರವು ಈ ಕೋರ್ಸ್ ಅನ್ನು ಹೊರಗಿಟ್ಟು ಪರೀಕ್ಷೆ ನಡೆಸಲು ಮುಂದಾಗಿರುವುದು ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ನೇರ ನೇಮಕಾತಿ ಸಂಬಂಧ ಪ್ರಾಽಕಾರವು ಈಗಾಗಲೇ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದ್ದು, ನೇಮ ಕಾತಿಗೆ ಅರ್ಹತೆ ಪಡೆಯಲು ಪ್ರಾಽಕಾರ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾತಿ ಕಡ್ಡಾಯವೆಂದು ಸೂಚಿಸಿದೆ.
ನ್ಯಾಯಕ್ಕಾಗಿ ಆಗ್ರಹ
ಕೋರ್ಸ್ ಪಡೆದರೂ ಸರ್ಕಾರದ ಈ ನಿರ್ಧಾರದಿಂದ ಯಾವುದೇ ಪ್ರಯೋಜನ ಇಲ್ಲದಂತಾಗಿದೆ. ಇಲಾಖೆಯ ಅಗತ್ಯಕ್ಕೆ ತಕ್ಕಂತೆಯೇ ತರಬೇತಿ ಪಡೆದ ನಮ್ಮನ್ನು ಕೈಬಿಟ್ಟಿರುವುದು ಅನ್ಯಾಯ. ಸಾವಿರಾರು ವಿದ್ಯಾರ್ಥಿಗಳ ಭವಿಷ್ಯವನ್ನು ದÊಷ್ಟಿಯಲ್ಲಿಟ್ಟುಕೊಂಡು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಹಾಗೂ ನಿಯಮ ಬದಲಾವಣೆ ಮಾಡಿ ಮುಂಬರುವ ಪರೀಕ್ಷೆಗೆ ಅವಕಾಶ ಮಾಡಿಕೊಡಬೇಕು ಎಂಬುದು ವಿದ್ಯಾರ್ಥಿ ಸಮೂಹದ ಒಕ್ಕೊರಲಿನ ಆಗ್ರಹವಾಗಿದೆ.

ಐಟಿಐ ಸರ್ವೇಯರ್ಸ್ ಪಾತ್ರವೇನು?


ಐಟಿಐ ಸರ್ವೆಯರ್ ಟ್ರೇಡ್ ಎಂಬುದು ಭೂಮಿಯ ಗಡಿಗಳನ್ನು ಅಳೆಯಲು, ಎತ್ತರವನ್ನು ಲೆಕ್ಕಹಾಕಲು, ಸ್ಥಳಾಕÊತಿಯ ನಕ್ಷೆ ಗಳನ್ನು ರಚಿಸಲು, ನಿರ್ಮಾಣ ಮತ್ತು ಮೂಲಸೌಕರ್ಯ ಯೋಜನೆಗಳಿಗಾಗಿ ಟೋಟಲ್ ಸ್ಟೇಷನ್ ಮತ್ತು ಜಿಪಿಎಸ್‌ನಂತಹ ಸಾಂಪ್ರದಾಯಿಕ ಮತ್ತು ಆಧುನಿಕ ಡಿಜಿಟಲ್ ಉಪಕರಣಗಳನ್ನು ಬಳಸಲು ತರಬೇತಿ ನೀಡಿ ಸಜ್ಜುಗೊಳಿಸುವ ಕೋರ್ಸ್ ಆಗಿದೆ.
ಸಿವಿಲ್ ಎಂಜಿನಿಯರಿಂಗ್, ಲೋಕೋಪಯೋಗಿ, ಗಣಿ ಮತ್ತು ಭೂ ವಿಜ್ಞಾನ, ಕಂದಾಯ, ರೈಲ್ವೆ ಇನ್ನಿತರೆ ಇಲಾಖೆಯ ಯೋಜನೆಗಳಲ್ಲೂ ಇವರ ಪಾತ್ರ ಪ್ರಮುಖವಾಗಿರುತ್ತದೆ.

ಈ ಸಲ ನಿಗದಿಗಳಿಸಿದ ವಿದ್ಯಾರ್ಹತೆ


ಪ್ರಾಽಕಾರವು ಈ ಬಾರಿಯ ಅಽಸೂಚನೆಯಲ್ಲಿ ಕೆಳಕಂಡ ವಿದ್ಯಾರ್ಹತೆಗಳನ್ನು ಮಾತ್ರ ಉಲ್ಲೇಖಿಸಿದೆ.
*ವಿಶ್ವವಿದ್ಯಾಲಯದಿಂದ ಇಂಜಿನಿಯರಿಂಗ್/ತಂತ್ರಜ್ಞಾನದಲ್ಲಿ ಯಾವುದೇ ಪದವಿ ಅಥವಾ ಇದೇ ವಿಭಾಗದಲ್ಲಿ ಎಎಂಐಇ ಪದವಿ.
* ಗಣಿತ, ಭೌತಶಾಸ್ತ್ರ, ಕಂಪ್ಯೂಟರ್ ಸೈನ್ಸ್, ಮಾಹಿತಿ ತಂತ್ರಜ್ಞಾನ, ಇನ್‌ಸ್ಟ್ರÄಮೆಂಟೇಶನ್, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್, ಕÊಷಿ ಬಿಎಸ್‌ಸಿ ಪದವಿ.
* ಎಐಸಿಟಿಇ ಮಾನ್ಯತೆ ಪಡೆದ ಅಽಕÊತ ಸಂಸ್ಥೆಯಿಂದ ಇಂಜಿನಿಯರಿಂಗ್/ತಂತ್ರಜ್ಞಾನದ ವಿಭಾಗದಲ್ಲಿ ಡಿಪ್ಲೊಮಾ.
ನಿಗದಿತ ವಿದ್ಯಾರ್ಹತೆ ಹೊರತುಪಡಿಸಿ, ಬೇರೆ ವಿದ್ಯಾರ್ಹತೆಯ ಆಧಾರದ ಮೇಲೆ ಅರ್ಜಿ ಸಲ್ಲಿಸಿ ಮುಂದಿನ ಪ್ರಕ್ರಿಯೆಯಲ್ಲಿ ಅಭ್ಯರ್ಥಿಗಳು ಅನರ್ಹಗೊಂಡರೆ ಅದಕ್ಕೆ ಪ್ರಾಽಕಾರ ಜವಾಬ್ದಾರಿಯಲ್ಲ ಎಂದು ಅಽಸೂಚನೆಯಲ್ಲಿ ಸ್ಪಷ್ಟಪಡಿಸಲಾಗಿದೆ.
ಭವಿಷ್ಯ ಅತಂತ್ರ

ಕಂದಾಯ ಇಲಾಖೆಯ ೫೬೦ ಭೂಮಾಪಕರ ನೇಮಕಾತಿಗೆ ಸಂಬಂಽಸಿದಂತೆ ಕರ್ನಾಟಕ ಪರೀಕ್ಷಾ ಪ್ರಾಽಕಾರ ಇತ್ತೀಚೆಗೆ ಹೊರಡಿಸಿರುವ ಅಽಸೂಚನೆಯಲ್ಲಿ ೨ ವರ್ಷದ ಐಟಿಐ ಇನ್ ಸರ್ವೆ ಟ್ರೇಡ್ ಕೋರ್ಸ್ ಅನ್ನು ವಿದ್ಯಾರ್ಹತೆಯಾಗಿ ಪರಿಗಣಿಸ ದಿರುವುದು ಸಾವಿರಾರು ವಿದ್ಯಾರ್ಥಿಗಳ ಭವಿಷ್ಯವನ್ನು ಅತಂತ್ರಗೊಳಿಸಿದೆ.

* ಕಂದಾಯ ಇಲಾಖೆಯ ಉಳಿಕೆ ಮೂಲ ವÊಂದದಡಿ ಭೂ ಮಾಪಕರ ನೇಮಕಾತಿ


* ಐಟಿಐ ಸರ್ವೆ ಟ್ರೇಡ್ ಓದಿದವರನ್ನು ಪಟ್ಟಿಯಿಂದ ಕೈಬಿಟ್ಟ ಪರೀಕ್ಷಾ ಪ್ರಾಽಕಾರ.
* ೨೦೨೪ರಲ್ಲಿ ನೇಮಕಾತಿಯಲ್ಲಿ ಕೋರ್ಸ್ಗೆ ಮಾನ್ಯತೆ.
* ನಿಯಮ ಬದಲಾಯಿಸಿ, ಪರೀಕ್ಷೆಗೆ ಅವಕಾಶ ಕಲ್ಪಿಸಲು ಅಭ್ಯರ್ಥಿಗಳ ಒತ್ತಾಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net