ಡಾ.ಮೇಘಾಗೆ ಕೃತಕ ಬುದ್ಧಿಮತ್ತೆ ಪದವಿ

ಡಾ.ಜಿ.ಎಚ್.ಮೇಘಾ
ಡಾ.ಜಿ.ಎಚ್.ಮೇಘಾ
Published on

ಪ್ರಮುಖ ಮುಖ್ಯಾಂಶಗಳು

  • ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ
  • ಅರಿವಳಿಕೆ ವಿಭಾಗ
  • ಕಡಿಮೆ ವೆಚ್ಚದಲ್ಲಿ ಆರೋಗ್ಯ ಸೇವೆ
ಚಿತ್ರದುರ್ಗ: ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಅರಿವಳಿಕೆ ವಿಭಾಗದ ಮುಖ್ಯಸ್ಥೆ ಡಾ.ಜಿ.ಎಚ್.ಮೇಘಾ ಅವರು ಸ್ಟ್ಯಾನ್-ೆÇÃರ್ಡ್ ವಿಶ್ವವಿದ್ಯಾಲಯದಿಂದ ವೈದ್ಯಕೀಯ ಕೃತಕ ಬುದ್ಧಿಮತ್ತೆ (ಅ್ಟಠಿಜ್ಛಿಜ್ಚಿಜಿZ್ಝ ಐ್ಞಠಿಛ್ಝ್ಝಿಜಿಜಛ್ಞ್ಚಿಛಿ)ಕೋರ್ಸ್ನಲ್ಲಿ ಪದವಿ ಪಡೆದಿದ್ದಾರೆ. ಅವರು ಸಂಸ್ಥೆಯ ಎನ್‌ಎಂಸಿ ವಿಭಾಗದ ರಿಜಿಸ್ಟಾçರ್ ಆಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.
ರೋಗಗಳ ಪತ್ತೆ ಹಚ್ಚುವಲ್ಲಿ ವಿನೂತನ, ಬಹುರೂಪದಲ್ಲಿ ನೆರವಾಗಲಿರುವ ಎಐ ತಂತ್ರಜ್ಞಾನ ಭಾರತದಲ್ಲಿ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳನ್ನು ಅನುಷ್ಠಾನಗೊಳಿಸಲು ಸಹಕಾರಿಯಾಗಿದೆ.
ಎಐ ಬಳಕೆಯಿಂದ ದತ್ತಾಂಶ ನಮೂದು ಮತ್ತು ವಿಶ್ಲೇಷಣೆ ಮೂಲಕ ಭವಿಷ್ಯದಲ್ಲಿ ಉತ್ತಮ ಹಾಗೂ ಕಡಿಮೆ ವೆಚ್ಚದಲ್ಲಿ ಆರೋಗ್ಯ ಸೇವೆ ಗಳನ್ನು ನೀಡಲು ಸಾಧ್ಯವಾಗಲಿದೆ. ಅವರ ಈ ಸಾಧನೆಗೆ ಸಂಸ್ಥೆ ನಿರ್ದೇಶಕ ಡಾ.ಬಿ.ವೈ.ಯುವರಾಜ್, ಬೋಧಕ ಹಾಗೂ ಬೋಧಕೇತರ ವರ್ಗದವರು ಹರ್ಷ ವ್ಯಕ್ತಪಡಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net