ಜನಗಣತಿ ಕಾರ್ಯದಲ್ಲಿ ಗೊಂದಲ ಬೇಡ

 ಜನಗಣತಿ ತರಬೇತಿ ಕಾರ್ಯಾಗಾರಕ್ಕೆ ಚಿತ್ರದುರ್ಗದಲ್ಲಿ ಬುಧವಾರ ಎಡಿಸಿ ಬಿ.ಟಿ. ಕುಮಾರಸ್ವಾಮಿ ಚಾಲನೆ ನೀಡಿದರು. ವೈಭವ ಕÊಷ್ಣ, ಸೂರ್ಯನಾರಾಯಣ, ಎಲ್.ಪಿ. ಅನುಜಾ, ಎಸಿ ಡಾ.ಕೆ.ಜೆ. ಕಾಂತರಾಜ್, ಸಿ.ಎಸ್. ಗಾಯತ್ರಿ, ರೇಷ್ಮಾ ಹಾನಗಲ್ ಇತರ ಅಽಕಾರಿಗಳು ಇದ್ದರು.
ಜನಗಣತಿ ತರಬೇತಿ ಕಾರ್ಯಾಗಾರಕ್ಕೆ ಚಿತ್ರದುರ್ಗದಲ್ಲಿ ಬುಧವಾರ ಎಡಿಸಿ ಬಿ.ಟಿ. ಕುಮಾರಸ್ವಾಮಿ ಚಾಲನೆ ನೀಡಿದರು. ವೈಭವ ಕÊಷ್ಣ, ಸೂರ್ಯನಾರಾಯಣ, ಎಲ್.ಪಿ. ಅನುಜಾ, ಎಸಿ ಡಾ.ಕೆ.ಜೆ. ಕಾಂತರಾಜ್, ಸಿ.ಎಸ್. ಗಾಯತ್ರಿ, ರೇಷ್ಮಾ ಹಾನಗಲ್ ಇತರ ಅಽಕಾರಿಗಳು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಎಡಿಸಿ ಬಿ.ಟಿ. ಕುಮರಸ್ವಾಮಿ ಸಲಹೆ
  • ತರಬೇತಿ ಕಾರ್ಯಾಗಾರಕ್ಕೆ ಚಾಲನೆ
  • ಜನಗಣತಿ ಯಶಸ್ಸಿಗೆ ಬ್ಲಾಕ್‌ಗಳ ರಚನೆ
ಚಿತ್ರದುರ್ಗ: ಜನಗಣತಿ ಪ್ರಕ್ರಿಯೆಯಲ್ಲಿ ಯಾವುದೇ ರೀತಿಯ ಗೊಂದಲಗಳಿಗೆ ಅವಕಾಶ ಇರಬಾರದು ಎಂದು ಎಡಿಸಿ, ಜಿಲ್ಲಾ ಜನಗಣತಿ ಅಽಕಾರಿ ಬಿ.ಟಿ. ಕುಮಾರಸ್ವಾಮಿ ಅಽಕಾರಿಗಳಿಗೆ ಸೂಚಿಸಿದರು.
ಜಿಪಂನಲ್ಲಿ ಬುಧವಾರ ಜನಗಣತಿಗೆ ಸಂಬAಽಸಿದAತೆ ಅಽಕಾರಿ, ಸಿಬ್ಬಂದಿಗೆ ಆಯೋಜಿಸಿರುವ ೩ ದಿನಗಳ ತರಬೇತಿ ಕಾರ್ಯಾಗಾರಕ್ಕೆ ಬುಧವಾರ ಚಾಲನೆ ನೀಡಿ ಮಾತನಾಡಿದರು.
ಜನಗಣತಿ ಯಶಸ್ಸಿಗೆ ಬ್ಲಾಕ್‌ಗಳ ರಚನೆ ಅತ್ಯಂತ ಪ್ರಮುಖವಾಗಿದೆ. ಬ್ಲಾಕ್ ರಚನೆಯಲ್ಲಿ ಸಣ್ಣ ತಪ್ಪುಗಳಾದರೂ ಇಡೀ ಪ್ರಕ್ರಿಯೆ ಹಳಿ ತಪ್ಪುತ್ತದೆ. ಹೀಗಾಗಿ ಸಂಬAಽಸಿದ ಅಽಕಾರಿಗಳು ತಮ್ಮ ವ್ಯಾಪ್ತಿಯ ಪ್ರತಿ ಬ್ಲಾಕ್‌ಗೆ ಖುದ್ದು ಭೇಟಿ ನೀಡಿ ಪರಿಶೀಲಿಸಬೇಕು ಎಂದು ಸೂಚಿಸಿದರು.
ಕ್ಷೇತ್ರ ಮಟ್ಟದಲ್ಲಿ ಕೆಲಸ ಮಾಡುವ ಬಿಲ್‌ಕಲೆಕ್ಟರ್ ಮತ್ತಿತರ ಸಿಬ್ಬಂದಿ, ಅಽಕಾರಿಗಳು ಸಮನ್ವಯದಿಂದ ಕೆಲಸ ಮಾಡಬೇಕು. ಗಣತಿದಾರರನ್ನು ನೇಮಿಸುವಾಗ ಅವರು ವಾಸಿಸುವ, ಕೆಲಸ ಮಾಡುವ ಬ್ಲಾಕ್‌ಗಳಲ್ಲೇ ನಿಯೋಜಿಸಬೇಕು. ಅನಿವಾರ್ಯ ಸಂದರ್ಭಗಳಲ್ಲಿ ಸ್ಥಳೀಯರು ಲಭ್ಯವಿಲ್ಲದಿದ್ದರೆ, ೨೦೦ ಮೀಟರ್ ವ್ಯಾಪ್ತಿಯಲ್ಲಿರುವ ಸರ್ಕಾರಿ ನೌಕರರನ್ನು ನಿಯೋಜಿಸಬೇಕು ಎಂದರು.
ದೇಶದ ಅಭಿವೃದ್ಧಿ ಯೋಜನೆಗಳನ್ನು ರೂಪಿಸುವಿಕೆಯಲ್ಲಿ ಜನಗಣತಿ ಅಂಕಿ-ಅAಶಗಳು ಅಡಿಪಾಯವಾಗಿವೆ. ಈ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಅಽಕಾರಿಗಳು ರಾಷ್ಟç ನಿರ್ಮಾಣ ಸೇವೆಯಲ್ಲಿ ಭಾಗಿಯಾಗುತ್ತಿದ್ದೇವೆ ಎಂಬ ಭಾವನೆಯೊಂದಿಗೆ ಪ್ರಾಮಾಣಿಕ ಹಾಗೂ ಸಮರ್ಪಕವಾಗಿ ಕೆಲಸ ಮಾಡಬೇಕು.
ಸರ್ಕಾರಿ ನೌಕರರ ವೃತ್ತಿ ಜೀವನದಲ್ಲಿ ಚುನಾವಣೆ ಮತ್ತು ಜನಗಣತಿ ಕೆಲಸಗಳು ಅತ್ಯಂತ ಸ್ಮರಣೀಯವಾಗಿವೆ. ಜನಗಣತಿ ೧೮೭೨ರಲ್ಲಿ ಮೊದಲ ಬಾರಿ ಆರಂಭವಾಗಿದ್ದು, ಈಗ ನಡೆಯುತ್ತಿರುವುದು ೧೬ನೇಯದ್ದಾಗಿದೆ. ಇದರ ಅಂಕಿಅAಶಗಳು ದೇಶದ ಆರ್ಥಿಕ ಗುರಿ, ಜನರ ಸ್ಥಿತಿಗತಿ ತಿಳಿಯಲು ಬಹಳ ಮುಖ್ಯವಾಗಿದೆ. ಆದ್ದರಿಂದ ನಿಖರತೆ ವಿಷಯದಲ್ಲಿ ಅಜಾಗರೂಕತೆ ಬೇಡ ಎಂದು ಎಚ್ಚರಿಸಿದರು.
ಕೋವಿಡ್‌ನಿಂದಾಗಿ ಮುಂದೂಡಿದ್ದ ಜನಗಣತಿ ಈಗ ಎರಡು ಹಂತಗಳಲ್ಲಿ ನಡೆಯಲಿದೆ. ಮೊದಲ ಹಂತದಲ್ಲಿ ಮನೆ ಪಟ್ಟಿ ಮತ್ತು ಮ ನೆ ಗಣತಿ ನಡೆಯಲಿದೆ. ಸಮರ್ಥವಾಗಿ ತರಬೇತಿ ಪಡೆದು ಕೆಲಸ ಆರಂಭಿಸಬೇಕು. ಈ ಬಾರಿಯ ಜನಗಣತಿ ಸಂಪೂರ್ಣ ಮೊಬೈಲ್ ಆ್ಯಪ್ ಮೂಲಕ ನಡೆಯಲಿದೆ.
ಪ್ರತಿ ವಾರ್ಡ್/ಗ್ರಾಮ ಮಟ್ಟದಲ್ಲಿ ೧೫೦-೨೦೦ ಕುಟುಂಬಗಳನ್ನು ಒಳಗೊಂಡ ಬ್ಲಾಕ್‌ಗಳನ್ನು ಗುರುತಿಸಿ,ನಿಖರವಾದ ಬ್ಲಾಕ್ ನಕ್ಷೆ ಮತ್ತು ಪಟ್ಟಿಗಳನ್ನು ಸಿದ್ಧಪಡಿಸಬೇಕಿದೆ ಎಂದರು. ಜನಗಣತಿ ಕಾರ್ಯಕ್ಕಾಗಿ ಎಣಿಕೆದಾರರು ಮತ್ತು ಮೇಲ್ವಿಚಾರಕರನ್ನು ಶೀಘ್ರ ನೇಮಿಸುವಂತೆ ತಹಸೀಲ್ದಾರ್‌ಗಳಿಗೆ ನಿರ್ದೇಶಿಸಿದರು.
ತರಬೇತಿ ಅಽಕಾರಿಗಳಾದ ವೈಭವ ಕÊಷ್ಣ, ಸೂರ್ಯ ನಾರಾಯಣ ಹಾಗೂ ಎಲ್.ಪಿ. ಅನುಜಾ, ಎಸಿ ಡಾ.ಕೆ.ಜೆ. ಕಾಂತರಾಜ್, ಜಿಪಂ ಸಿಪಿಒ ಸಿ.ಎಸ್. ಗಾಯತ್ರಿ, ನಗರಾಭಿವÊದ್ಧಿ ಕೋಶ ಯೋಜನಾ ನಿರ್ದೇಶಕಿ ರೇಷ್ಮಾ ಹಾನಗಲ್, ಡಿಡಿಪಿಐ ಎಂ.ಆರ್. ಮಂಜುನಾಥ್, ಜಿಲ್ಲಾ ಸಂಖ್ಯಾ ಸಂಗ್ರಹಣಾಽಕಾರಿ ರವಿಕುಮಾರ್, ಮಾಸ್ಟರ್ ಟ್ರೆÊನರ್ ರಾಮಚಂದ್ರಪ್ಪ, ಚುನಾವಣಾ ತಹಸೀಲ್ದಾರ್ ಬೀಬಿ -Áತಿಮಾ, ಶಿರಸ್ತೆದಾರ್ ಮಲ್ಲಿಕಾರ್ಜುನ ನಾಯಕ ಇತರ ಅಽಕಾರಿಗಳು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net