ಚಿತ್ರದುರ್ಗ: ವಿವಿಧ ಯೋಜನೆಗಳಡಿ ಫಲಾನುಭವಿಗಳಿಗೆ ಸೌಲಭ್ಯಗಳನ್ನು ಒದಗಿಸಲು ಸಿಬಿಲ್ ಸ್ಕೋರ್ ಮತ್ತಿತರ ಯಾವುದೇ ತಾಂತ್ರಿಕ ಕಾರಣಗಳು ಅಡ್ಡಿಯಾಗಬಾರದು ಎಂದು ರಾಜ್ಯ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ. ರಾಮಪ್ಪ ಅಽಕಾರಿಗಳಿಗೆ ತಾಕೀತು ಮಾಡಿದರು.
ನಗರದ ಜಿಲ್ಲಾ ಭೋವಿ ಅಭಿವೃದ್ಧಿ ನಿಗಮದ ಕಚೇರಿಯಲ್ಲಿ ಗುರುವಾರ ಪ್ರಗತಿ ಪರಿಶೀಲಿಸಿ ಮಾತನಾಡಿ, ಬಡಜನರ ಆರ್ಥಿಕ ಸಬ ಲೀಕರಣಕ್ಕೆ ಸರ್ಕಾರ ನಿಗಮದ ಮೂಲಕ ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಆದರೆ, ಸಿಬಿಲ್ ಸ್ಕೋರ್ ಸಮಸ್ಯೆ ಮುಂದಿಟ್ಟುಕೊAಡು ಸೌಲಭ್ಯಗಳನ್ನು ಒದಗಿಸದೇ ಇರುವುದು ಸರಿಯಲ್ಲ. ಈ ಕುರಿತು ಜಿಪಂ ಸಿಇಒ ಜತೆ ಚರ್ಚಿಸಿದ್ದೇನೆ. ಸೌಲಭ್ಯ ಗಳ ಮಂಜೂರಿಗೆ ಭದ್ರತೆ, ಸಿಬಿಲ್ ಅಂಶಗಳನ್ನು ಪರಿಗಣಿಸದೆ ಕಾರ್ಯಕ್ರಮಗಳ ಅನುಷ್ಠಾನಕ್ಕೆ ವೇಗ ನೀಡಬೇಕೆಂದು ಸೂಚಿಸಿ ದರು.
ರಾಜ್ಯ ಸರ್ಕಾರದ ೫ ಗ್ಯಾರಂಟಿಗಳ ಜತೆಗೆ, ನಮ್ಮ ನಿಗಮದಿಂದ ಗಂಗಾಕಲ್ಯಾಣ, ಸ್ವಯಂ ಉದ್ಯೋಗ ನೇರ ಸಾಲ, ಉದ್ಯಮ ಶೀಲತೆ ಅಭಿವೃದ್ಧಿ ಯೋಜನೆ, ಸ್ವಾವಲಂಬಿ ಸಾರಥಿ ಹಾಗೂ ಹೈನುಗಾರಿಕೆ ಸೇರಿ ಆರು ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಈ ಮೂಲಕ ಭೋವಿ ಸಮುದಾಯಕ್ಕೆ ೧೧ ಗ್ಯಾರಂಟಿಗಳು ತಲುಪುತ್ತಿವೆ.
ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆಬಾವಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಮಳೆಗಾಲ ಆರಂಭ ಹಿನ್ನೆಲೆಯಲ್ಲಿ ಮೇ ತಿಂಗಳ ಅಂತ್ಯದೊಳಗೆ ಗಂಗಾಕಲ್ಯಾಣದ ಎಲ್ಲ ಬಾಕಿ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕೆಂದರು.
ಭೋವಿ ಸಮುದಾಯದ ನಿರುದ್ಯೋಗಿ ಯುವ ಜನರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡಲು ನಿಗಮ ಹತ್ತಾರು ಯೋಜನೆ ಗಳನ್ನು ರೂಪಿಸುತ್ತಿದೆ. ಸ್ವಾವಲಂಬಿ ಬದುಕಿಗೆ ರಾಜ್ಯಾದ್ಯಂತ ಟೈಲರಿಂಗ್ ತರಬೇತಿ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲಾ ಗುತ್ತಿದೆ.
ಮೇ ೪ರಂದು ಮೈಸೂರಿನಲ್ಲಿ ೭೫ದಿನಗಳ ಟೈಲರಿಂಗ್ ತರಬೇತಿಗೆ ಚಾಲನೆ ನೀಡಲಾಗುವುದು. ೨೦-೪೫ ವರ್ಷದೊಳಗಿನ ಆಸಕ್ತ ಪುರುಷ ಮತ್ತು ಮಹಿಳೆಯರು ತರಬೇತಿಯಲ್ಲಿ ಭಾಗವಹಿಸಬಹುದು. ತರಬೇತಿ ಪಡೆಯುವವರಿಗೆ ಮಧ್ಯಾಹ್ನ ಊಟದ ವ್ಯವಸ್ಥೆ ಇರುತ್ತದೆ. ತರಬೇತಿ ಪೂರ್ಣಗೊಳಿಸಿದವರಿಗೆ ನಿಗಮದಿಂದ ಉಚಿತ ಹೊಲಿಗೆ ಯಂತ್ರ ವಿತರಿಸಲಾಗುವುದು.
ತರಬೇತಿ ನಂತರ ಹೊಲಿದ ಬಟ್ಟೆಗಳಿಗೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ಜವಾಬ್ದಾರಿಯನ್ನು ತರಬೇತಿ ನೀಡುವ ಸಂಸ್ಥೆಗಳಿಗೆ ವಹಿಸಲಾಗಿದೆ. ಚಳ್ಳಕೆರೆಯಲ್ಲಿ ಮೇ ಮೊದಲ ವಾರ ಟೈಲರಿಂಗ್ ತರಬೇತಿ ಆರಂಭಿಸಲು ಸಿದ್ಧತೆ ನಡೆಸಲಾಗಿದೆ. ಮೇ ೨೨ರಿಂದ ೨ ದಿನಗಳ ಕಾಲ ಬಾಗಲಕೋಟೆ ಜಗದ್ಗುರು ಶ್ರೀ ಸಿದ್ಧರಾಮೇಶ್ವರ ಮಹಾಸಂಸ್ಥಾನ ಮಠದಲ್ಲಿ ೨ ದಿನಗಳ ವಿಶೇಷ ಕಾರ್ಯಾ ಗಾರಕ್ಕೆ ಸಿದ್ಧತೆ ನಡೆದಿದೆ.
ಈ ವರ್ಷದಿಂದ ಕಾರುಗಳ ಬದಲಿಗೆ ಟ್ರ‍್ಯಾಕ್ಟರ್ ವಿತರಿಸಲು ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ. ಭೋವಿ ಸಮುದಾಯದವರು ಹೆಚ್ಚಾಗಿ ಕಟ್ಟಡ ನಿರ್ಮಾಣ ಮತ್ತು ಕಾಂಟ್ರಾಕ್ಟ್ ಕೆಲಸಗಳಲ್ಲಿ ತೊಡಗಿಸಿಕೊಂಡಿರುವುದರಿAದ ಅವರಿಗೆ ನೆರವಾಗಲು ಸ್ಟೀಲ್ ಸೆಂಟ್ರಿAಗ್ ಸಾಮಗ್ರಿ ಹಾಗೂ ಅಜಾಕ್ಸ್ ಯಂತ್ರಗಳನ್ನು ಒದಗಿಸಲಾಗುವುದು ಎಂದು ತಿಳಿಸಿದರು.
ರಾಜ್ಯದ ೧೧ ಜಿಲ್ಲೆಗಳಲ್ಲಿರುವ ನಿಗಮದ ಕಚೇರಿಗಳಿಗೆ ಸ್ವಂತ ಜಾಗ ಗುರುತಿಸಿ ಶಾಶ್ವತ ಕಟ್ಟಡ ನಿರ್ಮಿಸುವ ಗುರಿ ಇದೆ. ಕೋಲಾ ರದಲ್ಲಿ ೨೦ ಸಾವಿರ ಚದರಡಿ, ಧಾರವಾಡದಲ್ಲಿ ೨೨ ಸಾವಿರ ಚದರಡಿ ಜಾಗ ಖರೀದಿಸಲಾಗಿದೆ. ಚಿತ್ರದುರ್ಗದಲ್ಲೂ ೫ ಸಾವಿರ ಕ್ಕೂ ಹೆಚ್ಚಿನ ಚದರಡಿ ವಿಸ್ತೀರ್ಣದ ನಿವೇಶನಕ್ಕೆ ನಗರಾಭಿವೃದ್ಧಿ ಪ್ರಾಽಕಾರವನ್ನು ಕೋರಲಾಗಿದೆ. ಈ ಕಟ್ಟಡಗಳಲ್ಲಿ ತರಬೇತಿ ಕೇಂದ್ರ, ಮೀಟಿಂಗ್ ಹಾಲ್ ಮತ್ತು ಕಾರ್ಯಾಗಾರಕ್ಕೆ ವ್ಯವಸ್ಥೆ ಇರುತ್ತದೆ ಎಂದರು.
ನಿಗಮದ ಜಿಲ್ಲಾ ವ್ಯವಸ್ಥಾಪಕ ವೈ. ರವಿಕುಮಾರ್, ಭೋವಿ ಗುರುಪೀಠದ ಸಿಇಒ ಗೌನಹಳ್ಳಿ ಗೋವಿಂದಪ್ಪ, ಮುಖಂಡ ಕನಕದಾಸ್ ಇತರರು ಇದ್ದರು.