ಯಾವುದನ್ನೂ ಸುಮ್ಮನೆ ಒಪ್ಪಿಕೊಳ್ಳಬಾರದು

 ಚಿತ್ರದುರ್ಗದಲ್ಲಿ ಮಂಗಳವಾರ ಏರ್ಪಡಿಸಿದ್ದ ವಿಜ್ಞಾನ ವಸ್ತು ಪ್ರದರ್ಶನದ ಉದ್ಘಾಟನಾ ಸಮಾರಂಭದಲ್ಲಿ ಬಿಇಒ ಎಚ್.ಗಿರಿಜಾ ಅವರನ್ನು ಗೌರವಿಸಲಾಯಿತು. ಡಾ. ಮಲ್ಲಿಕಾರ್ಜುನಪ್ಪ, ಬಿ. ವಿಜಯಕುಮಾರ್, ಪಿ. ಬಸವರಾಜಯ್ಯ, ಎಚ್‌ಎಸ್‌ಟಿ ಸ್ವಾಮಿ, ಎನ್.ಜಿ. ತಿಪ್ಪೇಸ್ವಾಮಿ ಇತರರು ಇದ್ದರು.
ಚಿತ್ರದುರ್ಗದಲ್ಲಿ ಮಂಗಳವಾರ ಏರ್ಪಡಿಸಿದ್ದ ವಿಜ್ಞಾನ ವಸ್ತು ಪ್ರದರ್ಶನದ ಉದ್ಘಾಟನಾ ಸಮಾರಂಭದಲ್ಲಿ ಬಿಇಒ ಎಚ್.ಗಿರಿಜಾ ಅವರನ್ನು ಗೌರವಿಸಲಾಯಿತು. ಡಾ. ಮಲ್ಲಿಕಾರ್ಜುನಪ್ಪ, ಬಿ. ವಿಜಯಕುಮಾರ್, ಪಿ. ಬಸವರಾಜಯ್ಯ, ಎಚ್‌ಎಸ್‌ಟಿ ಸ್ವಾಮಿ, ಎನ್.ಜಿ. ತಿಪ್ಪೇಸ್ವಾಮಿ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ವಿದ್ಯಾರ್ಥಿಗಳಿಗೆ ಬಿಇಒ ಸಲಹೆ
  • ವಿಜ್ಞಾನ ವಸ್ತು ಪ್ರದರ್ಶನಕ್ಕೆ ಚಾಲನೆ
  • ಉತ್ತಮ ವಿದ್ಯಾಭ್ಯಾಸ
ಚಿತ್ರದುರ್ಗ: ಈಗಿರುವ ಶೈಕ್ಷಣಿಕ ಸವಲತ್ತುಗಳು ೧೫-೨೦ ವರ್ಷಗಳ ಹಿಂದಿನ ವಿದ್ಯಾರ್ಥಿಗಳಿಗೆ ಲಭ್ಯವಿರಲಿಲ್ಲ. ಪ್ರಸ್ತುತ ದೊರೆ ತಿರುವ ಅವಕಾಶಗಳನ್ನು ಬಳಸಿಕೊಂಡು ಉತ್ತಮವಾಗಿ ವಿದ್ಯಾಭ್ಯಾಸ ಮಾಡುವಂತೆ ಬಿಇಒ ಎಚ್. ಗಿರಿಜಾ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ನಗರದ ವಿದ್ಯಾವಿಕಾಸ ವಿದ್ಯಾಸಂಸ್ಥೆಯಲ್ಲಿ ಮಂಗಳವಾರ ಆಯೋಜಿಸಿದ್ದ ವಿಜ್ಞಾನ ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾ ಡಿದರು. ಈ ಪ್ರದರ್ಶನದ ಮುಖ್ಯ ಉದ್ದೇಶವೂ ಕಲಿಕೆಯೇ ಆಗಿದೆ. ಯಾವುದನ್ನೂ ಸುಮ್ಮನೆ ಒಪ್ಪಿಕೊಳ್ಳಬಾರದು. ಪ್ರಶ್ನೆಗಳನ್ನು ಕೇಳಿ ಸಮಂಜಸ ಉತ್ತರ ಪಡೆಯಬೇಕು.
ಚಿಂತನಾತ್ಮಕ, ತಾರ್ಕಿಕ ಮನೋಭಾವನೆ ಬೆಳೆಸಿಕೊಳ್ಳಬೇಕು, ನ್ಯೂಟನ್, ಅಬ್ದುಲ್ ಕಲಾಂ, ಸರ್ ಸಿ.ವಿ. ರಾಮನ್ ಅವರಂತೆ ವಿಜ್ಞಾನಿಗಳಾಗಬೇಕೆಂಬ ಕನಸನ್ನು ನನಸಾಗಿಸಲು ಶ್ರಮಿಸಬೇಕು ಎಂದರು. ಚಿತ್ರದುರ್ಗ ಸೈನ್ಸ್ ಫೌಂಡೇಷನ್ ಅಧ್ಯಕ್ಷ ಡಾ. ಮಲ್ಲಿಕಾರ್ಜುನಪ್ಪ ಮಾತನಾಡಿ, ಸಂಶೋಧನೆಗಳಿಗೆ ವಸ್ತು ಪ್ರದರ್ಶನ ಸಹಕಾರಿ.
ವಿಜ್ಞಾನವೆಂದರೆ ಭೌತ ವಸ್ತುವಿನ ಅಧ್ಯಯನವಲ್ಲ, ಅಭೌತಿಕ ವಸ್ತುಗಳನ್ನೂ ಒಳಗೊಂಡಿದೆ ಎಂದರು. ಚಿತ್ರದುರ್ಗ ವಿಜ್ಞಾನ ಕ್ಲಬ್ ಕಾರ್ಯದರ್ಶಿ ಎಚ್‌ಎಸ್‌ಟಿ ಸ್ವಾಮಿ ಮಾತನಾಡಿ, ವಿಜ್ಞಾನ ಬಿಟ್ಟು ನಾವಿಲ್ಲ, ನಮ್ಮನ್ನು ಬಿಟ್ಟು ವಿಜ್ಞಾನವಿಲ್ಲ. ವೈಜ್ಞಾನಿಕ ಮನೋ ಭಾವ ಬೆಳೆಸಿಕೊಂಡು ಜನಸಾಮಾನ್ಯರಿಗೆ ಉಪಯುಕ್ತ ಮಾದರಿ ಸಿದ್ಧಪಡಿಸುವಂತೆ ವಿದ್ಯಾರ್ಥಿಗಳಿಗೆ ಸೂಚಿಸಿದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆ ಕಾರ್ಯದರ್ಶಿ ಬಿ. ವಿಜಯಕುಮಾರ್ ಮಾತನಾಡಿ, ದೇಶ, ಸಮಾಜಕ್ಕೆ ವಿಜ್ಞಾನ ಬೇಕು ಎಂಬ ಅರಿವು ಇರುವ ಶಾಲೆ ನಮ್ಮದು ಎಂದರು. ವಿಜ್ಞಾನ ಮಾದರಿಗಳ ತಯಾರಿಸುವಲ್ಲಿ ಶಿಕ್ಷಕರ,ಪಾಲಕರ ಪ್ರೋತ್ಸಾಹ ಬಹಳ ಮುಖ್ಯವಾಗಿದೆ ಎಂದರು.
ಐಸಿಎಸ್‌ಇ ಪ್ರಾಚಾರ್ಯ ಪಿ. ಬಸವರಾಜಯ್ಯ, ಮುಖ್ಯಶಿಕ್ಷಕ ಎನ್.ಜಿ. ತಿಪ್ಪೇಸ್ವಾಮಿ ಮಾತನಾಡಿದರು. ೩೨೭ಕ್ಕೂ ಹೆಚ್ಚಿನ ಮಾ ದರಿಗಳನ್ನು ಪ್ರದರ್ಶಿಸಲಾಯಿತು. ತೀರ್ಪುಗಾರರಾದ ಎಂ.ಬಿ. ವೀರಭದ್ರಯ್ಯ, ಪಿ.ನವೀನ್, ಎಂ.ಆರ್. ಲೋಕೇಶ್, ಡಿ.ಆರ್. ಸವಿತಾ, ರ‍್ಹಾತ್ ಖಾನಂ, ಸಂಸ್ಥೆ ನಿರ್ದೇಶಕಿ ಪಿ.ಸಿ. ಸುನಿತಾ ಇತರರು ಇದ್ದರು.
ಶಿಕ್ಷಕಿ ಶ್ರೀನಿಽ ಪ್ರಾರ್ಥಿಸಿದರು, ಶಿಕ್ಷಕರಾದ ಸಿ.ಎನ್. ಚೈತ್ರಾ ಸ್ವಾಗತಿಸಿ, ಮೊಹಮ್ಮದ್ ಆರೀಫ್ ವಂದಿಸಿದರು. ಡಿ. ಕೃಷ್ಣವೇಣಿ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net