ಜಾತಿ ಹೆಸರಲ್ಲಿ ಅಸಮಾನತೆ ಸೃಷ್ಟಿ ಬೇಡ

ಚಿತ್ರದುರ್ಗ ಮುರುಘಾಮಠದಲ್ಲಿ ಶನಿವಾರ ಶಿವಶರಣರಾದ ತುರುಗಾಹಿ ರಾಮಣ್ಣ ಹಾಗೂ ಕುರುಬ(ವೀರ)ಗೊಲ್ಲಾಳೇಶ್ವರ ಜಯಂತ್ಯುತ್ಸವದಲ್ಲಿ ಡಾ. ಬಸವಕುಮಾರ ಸ್ವಾಮೀಜಿ, ಡಾ. ಬಸವಪ್ರಭು ಸ್ವಾಮೀಜಿ, ಬಿ.ಟಿ. ಜಗದೀಶ್, ರಮೇಶ್, ಕಣಿವೆಮಾರಮ್ಮ ತಿಪ್ಪೇಸ್ವಾಮಿ, ಜಾಲಿಕಟ್ಟೆ ಓಂಕಾರಪ್ಪ ಇತರರು ಇದ್ದರು.
ಚಿತ್ರದುರ್ಗ ಮುರುಘಾಮಠದಲ್ಲಿ ಶನಿವಾರ ಶಿವಶರಣರಾದ ತುರುಗಾಹಿ ರಾಮಣ್ಣ ಹಾಗೂ ಕುರುಬ(ವೀರ)ಗೊಲ್ಲಾಳೇಶ್ವರ ಜಯಂತ್ಯುತ್ಸವದಲ್ಲಿ ಡಾ. ಬಸವಕುಮಾರ ಸ್ವಾಮೀಜಿ, ಡಾ. ಬಸವಪ್ರಭು ಸ್ವಾಮೀಜಿ, ಬಿ.ಟಿ. ಜಗದೀಶ್, ರಮೇಶ್, ಕಣಿವೆಮಾರಮ್ಮ ತಿಪ್ಪೇಸ್ವಾಮಿ, ಜಾಲಿಕಟ್ಟೆ ಓಂಕಾರಪ್ಪ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶ್ರೀ ಬಸವಕುಮಾರ ಸ್ವಾಮೀಜಿ ಅಭಿಮತ
  • ತುರುಗಾಹಿ ರಾಮಣ್ಣ, ಕುರುಬ(ವೀರ)ಗೊಲ್ಲಾಳೇಶ್ವರ ಜಯಂತ್ಯುತ್ಸವ
  • ಬಸವಾದಿ ಶಿವಶರಣರು
ಚಿತ್ರದುರ್ಗ: ಯಾವ ವ್ಯಕ್ತಿ ತನ್ನ ಸದ್ಗುಣಗಳಿಂದ ಸಮಾಜಕ್ಕೆ ಆದರ್ಶವಾಗಿ ಬದುಕುತ್ತಾನೊ ಆತನೇ ಶ್ರೇಷ್ಠ, ಜಾತಿ ಹೆಸರಲ್ಲಿ ಅಸ ಮಾನತೆ ಸÊಷ್ಟಿಸುವುದು ಬೇಡ ಎಂದು ಮುರುಘಾಮಠದ ಆಡಳಿತ ಮಂಡಳಿ ಸದಸ್ಯ ಡಾ.ಬಸವಕುಮಾರ ಸ್ವಾಮೀಜಿ ಹೇಳಿದ ರು.
ಶ್ರೀಮಠದಲ್ಲಿ ಶನಿವಾರ ಆಯೋಜಿಸಿದ್ದ ಶಿವಶರಣರಾದ ತುರುಗಾಹಿ ರಾಮಣ್ಣ ಹಾಗೂ ಕುರುಬ(ವೀರ)ಗೊಲ್ಲಾಳೇಶ್ವರ ಜಯಂತ್ಯು ತ್ಸವದ ಸಾನ್ನಿಧ್ಯವಹಿಸಿ ಮಾತನಾಡಿದ ಅವರು, ೧೨ನೇ ಶತಮಾನದಲ್ಲೇ ಜಾತಿ ರಹಿತ ಸಮಾಜಕ್ಕೆ ಬಸವಾದಿ ಶಿವಶರಣರು ಶ್ರಮಿಸಿದ್ದಾರೆ. ಸಮಾಜಕ್ಕೆ ದಾರಿದೀಪವಾಗಬಲ್ಲ ವಚನಗಳನ್ನು ನಮಗೆ ನೀಡಿದ್ದಾರೆ ಎಂದರು.
ಶ್ರೀಮಠದಲ್ಲಿ ನಡೆಯುವ ಶರಣರ, ದಾರ್ಶನಿಕರ ಜಯಂತಿಗಳು ಅರ್ಥಪೂರ್ಣವಾಗಿ ನಡೆಯುತ್ತಿವೆ ಎಂದು ದಾವಣಗೆರೆ ವಿರಕ್ತ ಮ ಠದ ಶ್ರೀ ಪ್ರಭುಸ್ವಾಮೀಜಿ ಹೇಳಿದ್ದಾರೆ. ಈ ಕಾರ್ಯಕ್ರಮಗಳನ್ನು ಇನ್ನಷ್ಟು ಅರ್ಥಪೂರ್ಣವಾಗಿಸಲು ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರ ಬೇಕೆಂದಿದ್ದಾರೆ.
ಮುಂದಿನ ದಿನಗಳಲ್ಲಿ ಶರಣರ ಹಾಗೂ ಮುರುಘಾ ಪರಂಪರೆಯ ಎಲ್ಲ ಸ್ವಾಮೀಜಿಗಳ ಜನ್ಮದಿನಗಳ ಅರ್ಥ ಪೂರ್ಣ ಆಚರಣೆಗೆ ಆಡಳಿತ ಮಂಡಳಿ ಹೆಜ್ಜೆ ಇಡಲಿದೆ ಎಂದರು.
ಶಿವಶರಣ ಕುರುಬ(ವೀರ)ಗೊಲ್ಲಾಳೇಶ್ವರರ ಬಗ್ಗೆ ವಿಷಯ ಮಂಡಿಸಿದ ನಗರದ ವಾಸುದೇವರೆಡ್ಡಿ ಸ್ಮಾರಕ ಪ್ರೌಢಶಾಲೆಯ ಶಿಕ್ಷಕ ಡಿ. ಎಚ್.ರಾಮಲಿಂಗಪ್ಪ, ಬಸವಾದಿ ಶಿವಶರಣರು ಜೀವನದ ಎಲ್ಲ ರಂಗಗಳ ಕುರಿತು ೧೨ನೇ ಶತಮಾನದಲ್ಲಿ ಅರ್ಥಪೂರ್ಣ ಚಿಂ ತನೆ ನಡೆಸಿದ್ದಾರೆ. ಅವರೆಲ್ಲರ ಮೂಲ ಉz್ದೆÃಶ ಮಾನವ ಕಲ್ಯಾಣವಾಗಿತ್ತು ಎಂದರು.
ಶಿವಶರಣ ತುರುಗಾಹಿ ರಾಮಣ್ಣ ಅವರ ಕುರಿತು ವಿಷಯಾವಲೋಕನ ಮಾಡಿದ ನಗರದ ಪ್ರಿಯದರ್ಶಿನಿ ಪ್ರೌಢಶಾಲೆ ಪ್ರಭಾರ ಮು ಖ್ಯ ಶಿಕ್ಷಕ ಸಿ.ಎಂ. ತಿಪ್ಪೇರುದ್ರಪ್ಪ, ಶರಣರಾದ ತುರುಗಾಹಿ ರಾಮಣ್ಣನವರು ಗೋಪಿನಾಥ ವಿಶ್ವೇಶ್ವರಲಿಂಗ ಎಂಬ ಅಂಕಿತದಲ್ಲಿ ೪೬ ವಚನಗಳನ್ನು ರಚಿಸಿದ್ದಾರೆ. ರಾಮಣ್ಣನವರು ಕಲ್ಯಾಣದಲ್ಲಿದ್ದರು ಎಂಬುದಕ್ಕೆ ಅವರ ವಚನಗಳಲ್ಲಿ ಉಲ್ಲೇಖವಿದೆ ಎಂದರು.
ಕುಡಾ ಮಾಜಿ ಅಧ್ಯಕ್ಷ ಬಿ.ಟಿ. ಜಗದೀಶ್ ಮಾತನಾಡಿ, ಬೃಹನ್ಮಠವು ಹಿಂದುಳಿದ, ಶೋಷಿತ ಸಮುದಾಯದವರನ್ನು ಪ್ರತಿನಿಽಸುವ ಶರಣರನ್ನು ಪರಿಚಯಿಸುವ ಮಹಾತ್ಕಾರ್ಯ ಮಾಡುತ್ತಿದೆ ಎಂದರು.
ಡಾ. ಬಸವಪ್ರಭು ಸ್ವಾಮೀಜಿ, ಜಾಲಿಕಟ್ಟೆ ಓಂಕಾರಪ್ಪ, ಎಸ್. ವೀರೇಶ್, ಕಣಿವೆಮಾರಮ್ಮ ತಿಪ್ಪೇಸ್ವಾಮಿ, ನಾಗರಾಜ ಸಂಗಮ್, ಡಾ. ದೊಡ್ಡಮಲ್ಲಯ್ಯ, ಚಂದ್ರಣ್ಣ, ರುದ್ರಪ್ಪ, ಪರಮೇಶ್ವರಪ್ಪ ಜಾಲಿಕಟ್ಟೆ, ವಕೀಲ ಹನುಮಂತಪ್ಪ, ಕರವೇ ಸಂಚಾಲಕ ರಮೇಶ್, ಮಾಲತೇಶ್, ಎಂ.ವಿ. ಬಾಗೇಶ್, ಉಗ್ರಾಣ ಅಂಗಡಿ ಬಸವರಾಜ್, ಪುಷ್ಪವಲ್ಲಿ, ನಾರಾಯಣಪ್ಪ ಸೇರಿ ವಿವಿಧ ಸಂಘ ಸಂಸ್ಥೆಗಳು, ಸಮಾಜಗಳ ಮುಖಂಡರು ಇದ್ದರು.
ಪಂಡಿತ್ ರವಿ ಸ್ವಾಗತಿಸಿದರು. ಉಮೇಶ್‌ಪತ್ತಾರ್, ಬಸವರಾಜಕಟ್ಟಿ ಅವರು ತುರುಗಾಹಿ ರಾಮಣ್ಣ ಹಾಗೂ ಕುರುಬ ಗೊಲ್ಲಾ ಳೇಶ್ವರರ ವಚನಗಳ ಗಾಯನ ನಡೆಸಿಕೊಟ್ಟರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net