ಆಧುನಿಕ ವೈದ್ಯಕೀಯ ಸೇವೆಗೆ ಜಿ¯್ಲÁಸ್ಪತ್ರೆ ಸನ್ನದ್ಧ

ಡಾ.ಎಸ್.ಪಿ. ರವೀಂದ್ರ
ಡಾ.ಎಸ್.ಪಿ. ರವೀಂದ್ರ
Published on

ಪ್ರಮುಖ ಮುಖ್ಯಾಂಶಗಳು

  • ೧೧೪ ಕೋಟಿ ರೂ. ವೆಚ್ಚದಲ್ಲಿ ೧೮೦ ಹಾಸಿಗೆಗಳ ಸುಸಜ್ಜಿತ ಕಟ್ಟಡ
  • ಸಿಎಸ್‌ಆರ್ ನಿಽಯಡಿ ಉಪಕರಣಗಳ ದೇಣಿಗೆ
  • ಡಾ. ರವೀಂದ್ರ ಮಾಹಿತಿ
ಚಿತ್ರದುರ್ಗ: ಸಾರ್ವಜನಿಕರಿಗೆ ಅತ್ಯಾಧುನಿಕ ವೈದ್ಯಕೀಯ ಸೇವೆಗಳನ್ನು ಒದಗಿಸಲು ಜಿ¯್ಲÁಸ್ಪತ್ರೆ ಸನ್ನದ್ಧವಾಗಿದೆ ಎಂದು ಜಿ¯್ಲÁ ಶಸöಚಿಕಿತ್ಸಕ ಡಾ.ಎಸ್.ಪಿ. ರವೀಂದ್ರ ತಿಳಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇದರೊಂದಿಗೆ ಜಿ¯್ಲÁಸ್ಪತ್ರೆ ಆವರಣದಲ್ಲಿ ೧೧೪ ಕೋಟಿ ರೂ. ವೆಚ್ಚದಲ್ಲಿ ೧೮೦ ಹಾಸಿಗೆಗಳ ಸುಸಜ್ಜಿತ ನೂತನ ಆಸ್ಪತ್ರೆ ಕಟ್ಟಡ ನಿರ್ಮಿಸಲು ಯೋಜನೆ ರೂಪಿಸಲಾಗಿದೆ ಎಂದರು.
೫ ಕೋಟಿ ರೂ. ವೆಚ್ಚದ ಕ್ರಿಟಿಕಲï ಕೇರ್ ಬ್ಲಾಕ್ ಕಾಮಗಾರಿ ಅಂತಿಮ ಹಂತದಲ್ಲಿದೆ. ಬೆಂಗಳೂರಿನ ಜಯದೇವ ಆಸ್ಪತ್ರೆ ಮಾದರಿಯಲ್ಲೇ ೧.೦೫ ಕೋಟಿ ರೂ. ವೆಚ್ಚದಲ್ಲಿ ಇಂಟಿಗ್ರೇಟೆಡ್ ಪಬ್ಲಿಕ್ ಹೆಲ್ತï ಲ್ಯಾಬೊರೇಟರಿ ಸ್ಥಾಪಿಸಿದ್ದು, ಶೀಘ್ರವೇ ಕಾರ್ಯಾರಂಭ ಮಾಡಲಾಗುವುದು ಎಂದು ತಿಳಿಸಿದರು.
ಎಚ್‌ಡಿಎ-ï‌ಸಿ ಬ್ಯಾಂಕ್‌ನ ಸಿಎಸ್‌ಆರ್ ನಿಽಯಡಿ ೧೦೦ -Ëಲರ್ಸ್ ಕಾಟ್‌ಗಳು, ಬೆಡ್‌ಸೈಡ್ ಲಾಕರ್‌ಗಳು, ತಲಾ ೧೦ ಸಿ-ಪ್ಯಾಪ್ ಯಂತ್ರಗಳು, ಮಾನಿಟರ್‌ಗಳು, ಇಸಿಜಿ ಯಂತ್ರಗಳು, ಬೇಬಿ ವಾರ್ಮರ್, -ೆÇÃಟೋಥೆರಪಿ ಹಾಗೂ ೨೮ ಲಕ್ಷ ರೂ. ಮೌಲ್ಯದ ತಲಾ ಎರಡು ಅತ್ಯಾಧುನಿಕ ಅರಿವಳಿಕೆ ಯಂತ್ರಗಳನ್ನು ಒಳಗೊಂಡು ಒಟ್ಟು ೧.೮೦ ಕೋಟಿ ರೂ. ಮೌಲ್ಯದ ವೈದ್ಯಕೀಯ ಉಪಕರಣಗಳನ್ನು ದೇಣಿಗೆ ಪಡೆಯಲಾಗಿದೆ ಎಂದು ಮಾಹಿತಿ ನೀಡಿದರು.
೩೦ ಲಕ್ಷ ರೂ. ವೆಚ್ಚದಲ್ಲಿ ಅತ್ಯಾಧುನಿಕ ಲ್ಯಾಬ್ ಉಪಕರಣಗಳನ್ನು ಜಿ¯್ಲÁಸ್ಪತ್ರೆಯಲ್ಲಿ ಅಳವಡಿಸಲಾಗಿದ್ದು, ಲ್ಯಾಬ್‌ನೊಳಗೆ ಒಂದೇ ಬಾರಿಗೆ ೨೪೦ರಿಂದ ೪೦೦ ಟೆ¸್ಟï‌ಗಳನ್ನು ನಡೆಸಬಹುದಾಗಿದೆ. ಕಿಡ್ನಿ, ಲಿವರ್, ಹೃದಯ ಸಂಬAಽ ಪರೀಕ್ಷೆಗಳ ವರದಿಗಳು ಇನ್ನು ಮುಂದೆ ಅತ್ಯಂತ ವೇಗವಾಗಿ ರೋಗಿಗಳಿಗೆ ತಲುಪಲಿದೆ ಎಂದರು.
೫೦ ಲಕ್ಷ ರೂ.ವೆಚ್ಚದಲ್ಲಿ ಉದರದರ್ಶಕ (ಎಂಡೋಸ್ಕೋಪಿ) ಸಿಸ್ಟಮï ಅನ್ನು ಅಳವಡಿಸಲಾಗಿದೆ. ಅನ್ನನಾಳ ಮತ್ತು ಗುದದ್ವಾರದ ಕ್ಯಾನ್ಸರ್ ಪತ್ತೆಗೆ ಸಹಕಾರಿಯಾಗಿದ್ದು, ಈಗಾಗಲೇ ೧೧೨ ತಪಾಸಣೆಗಳನ್ನು ಮಾಡಲಾಗಿದೆ. ಸ್ತನ ಕ್ಯಾನ್ಸರ್ ಅನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಲು ಮೆಮೊಗ್ರಫಿ ಸೌಲಭ್ಯವಿದೆ.
ಹಲ್ಲಿನ ಚಿಕಿತ್ಸೆಗಾಗಿ ೩೬೦ ಡಿಗ್ರಿಯಲ್ಲಿ ಚಿತ್ರೀಕರಿಸುವ ಅತ್ಯಾಧುನಿಕ ಒಪಿಜಿ ಎP್ಸï-ರೇ ಯಂತ್ರವನ್ನು ೧೫ ಲಕ್ಷ ರೂ. ವೆಚ್ಚದಲ್ಲಿ ಅಳವಡಿಸಲಾಗಿದ್ದು, ಹೊಸ ಡೆಂಟಲ್ ಚೇರ್‌ಗಳನ್ನೂ ಸಹ ಒದಗಿಸಲಾಗಿದೆ ಎಂದು ಮಾಹಿತಿ ಹಂಚಿಕೊAಡರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net