ಚಿತ್ರದುರ್ಗ: ಕರ್ತವ್ಯಲೋಪ,ಅನುದಾನ ದುರ್ಬಳಕೆ ಆರೋಪದಡಿ ಜಿಲ್ಲಾಸ್ಪತ್ರೆ ಜಿಲ್ಲಾಶಸ್ತç ಚಿಕಿತ್ಸಕ ಡಾ.ಎಸ್.ಪಿ.ರವೀಂದ್ರ ಅವ ರನ್ನು ರಾಜ್ಯ ಸರ್ಕಾರ ಸೇವೆಯಿಂದ ಅಮಾನುತುಗೊಳಿಸಿ ಬುಧವಾರ ಆದೇಶಿಸಿದೆ.
ಜಿಲ್ಲಾಸ್ಪತ್ರೆಯ ವಿವಿಧ ವಿಭಾಗಗಳಲ್ಲಿ ಶುಚ್ಚಿತ್ವ ಕಾಪಾಡಿಕೊಳ್ಳದಿರುವುದು,ರೋಗಿಗಳು,ಸಂದರ್ಶಕರ ದಟ್ಟಣೆ ವಾತಾವರಣದ ನಿ ರ್ಮಾಣ, ಅವ್ಯವಹಾರ ಹಾಗೂ ಕಳೆದ ಸೆಪ್ಟೆಂಬರ್ ೬ರಂದು ಆಸ್ಪತ್ರೆ ಸಿಬ್ಬಂದಿಗೆ ಸಾಮೂಹಿಕ ರಜೆ ಮಂಜೂರು ಮಾಡಿದ್ದು.
ರೋಗಿಗಳಿಗೆ ಸಕಾಲದಲ್ಲಿ ಆರೋಗ್ಯ ಸೇವೆ ಒದಗಿಸಲು.
ಕ್ಲಿನಿಕಲ್,ನಾನ್‌ಕ್ಲಿನಿಕಲ್ ದೈನಂದಿನ ಕರ್ತವ್ಯಗಳನ್ನು ಪರಿಣಾಮ ಕಾರಿಯಾಗಿ ನಿರ್ವಹಿಸಲು ಹಾಗೂ ಅನುದಾನದ ಸಮರ್ಪಕ ಬಳಕೆಯಲ್ಲಿ ವಿಫಲವಾಗಿರುವುದರ ವಿರುದ್ಧ ಕಳೆದ ಸೆಪ್ಟೆಂಬರ್ ೮ರಂದು ನಡೆದಿದ್ದ ಜಿಲ್ಲಾ ತ್ರೆÊಮಾಸಿಕ ಕೆಡಿಪಿ ಸಭೆಯಲ್ಲಿ ರವೀಂ ದ್ರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತವಾಗಿತ್ತು.
ಜಿಲ್ಲಾಸ್ಪತ್ರೆಗೆ ಸಂಬAಽಸಿದ ಔಷಧಗಳನ್ನು ನೇರ ಖರೀದಿಸಿ ಅಕ್ರಮವೆಸಗಿರುವುದು,ಮೇಲಾಽಕಾರಿ ಆದೇಶ ಉಲ್ಲಂಘಿಸಿ ಪತ್ರಿಕಾ ಗೋಷ್ಠಿ ನಡೆಸಿರುವ ರವೀಂದ್ರ ಅವರನ್ನು ಅಮಾನತುಗೊಳಿಸಬೇಕೆಂಬ ಶಿಫಾರಸು ಪರಿಗಣಿಸಿ ರಾಜ್ಯಸರ್ಕಾರ ಅವರನ್ನು ಸೇವೆ ಯಿಂದ ಅಮಾನತುಗೊಳಿಸಿ ಆದೇಶಿಸಿದೆ.