ತಪ್ಪು ಮಾಹಿತಿ ನೀಡಿ ಸದನಕ್ಕೆ ಅಗೌರವ

ಬಿಜೆಪಿ ಜಿಲ್ಲಾ ಯುವ ಘಟಕದ ಮಾಜಿ ಅ ಧ್ಯಕ್ಷ ಹನುಮಂತೇಗೌಡ
ಬಿಜೆಪಿ ಜಿಲ್ಲಾ ಯುವ ಘಟಕದ ಮಾಜಿ ಅ ಧ್ಯಕ್ಷ ಹನುಮಂತೇಗೌಡ
Published on
ಚಿತ್ರದುರ್ಗ: ರಾಜ್ಯದ ೧.೨೮ ಕೋಟಿ ಮಹಿಳೆಯರಿಗೆ ಪ್ರಸಕ್ತ ಸಾಲಿನ -ೆಬ್ರವರಿ, ಮಾರ್ಚ್ ತಿಂಗಳ ಗೃಹಲಕ್ಷೀ್ಮ ಯೋಜನೆ ಹಣ ಕೊಟ್ಟಿರುವುದಾಗಿ ಹೇಳಿಕೆ ನೀಡುವ ಮೂಲಕ ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಬಿಜೆಪಿ ಜಿಲ್ಲಾ ಯುವ ಘಟಕದ ಮಾಜಿ ಅ ಧ್ಯಕ್ಷ ಹನುಮಂತೇಗೌಡ ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷಿ÷್ಮÃ ಹೆಬ್ಬಾಳ್ಕರ್ ವಿರುದ್ಧ ಅಸಮಾಧಾನ ವ್ಯಕ್ತಪಡಿ ಸಿದ್ದಾರೆ.
ಸದನದ ಕಲಾಪ ವೇಳೆ ೨ ತಿಂಗಳ ಹಣ ಜಮೆಯಾಗಿದೆ ಎಂದು ಸಚಿವರು ಹೇಳಿದ್ದಾರೆ. ಆದರೆ, ಅದಕ್ಕೆ ದಾಖಲೆಯಿಲ್ಲ. ಎರಡು ತಿಂಗಳಿನ ಕಂತು ಅಂದಾಜು ಐದು ಸಾವಿರ ಕೋಟಿ ರೂ. -Àಲಾನುಭವಿಗಳಿಗೆ ಕೊಟ್ಟಿಲ್ಲವೆಂದು ಸದನದಲ್ಲಿ ಬಿಜೆಪಿ ಶಾಸಕರು ದಾಖಲೆಯೊಂದಿಗೆ ಬಹಿರಂಗಪಡಿಸಿದ್ದಾರೆ.
ಸಚಿವರು ತಪ್ಪು ಮಾಹಿತಿ ನೀಡುವ ಮೂಲಕ ಸದನದ ಕಲಾಪಕ್ಕೆ ಅಗೌರವ ತೋರಿಸಿದ್ದಾರೆ. ಆದ್ದರಿಂದ ಸಚಿವರು ಹಾಗೂ ಸಂಬAಽ ಸಿದ ಅಽಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಬಾಕಿ ಇರುವ ಎರಡು ತಿಂಗಳ ಹಣವನ್ನು ಕೂಡಲೇ ಫಲಾನುಭವಿಗಳ ಖಾತೆಗಳಿಗೆ ಜಮಾ ಮಾಡಬೇಕೆಂದು ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net