ಶುದ್ಧ ಹೃದಯದಿಂದ ದೇವರನ್ನು ಸ್ಮರಿಸುವುದೇ ಭಕ್ತಿ

ಉತ್ತರ ಭಾರತದ ಪ್ರವಾಸದ ವೇಳೆ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರು ಶ್ರೀ ಚೈತನ್ಯ ಪ್ರೇಮ ಸಂಸ್ಥಾನದ ಶ್ರೀವತ್ಸ ಗೋಸ್ವಾಮಿ ಅವರ ನೇತೃತ್ವದಲ್ಲಿ ಆಯೋಜಿಸಿದ್ದ ಬ್ರಜ್ ಯಾತ್ರೆ -2025ರ ಯಾತ್ರಾರ್ಥಿಗಳಿಗೆ ಆಶೀರ್ವಚನ ನೀಡಿದರು.
ಉತ್ತರ ಭಾರತದ ಪ್ರವಾಸದ ವೇಳೆ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರು ಶ್ರೀ ಚೈತನ್ಯ ಪ್ರೇಮ ಸಂಸ್ಥಾನದ ಶ್ರೀವತ್ಸ ಗೋಸ್ವಾಮಿ ಅವರ ನೇತೃತ್ವದಲ್ಲಿ ಆಯೋಜಿಸಿದ್ದ ಬ್ರಜ್ ಯಾತ್ರೆ -2025ರ ಯಾತ್ರಾರ್ಥಿಗಳಿಗೆ ಆಶೀರ್ವಚನ ನೀಡಿದರು.
Published on

ಪ್ರಮುಖ ಮುಖ್ಯಾಂಶಗಳು

  • ಶ್ರೀವತ್ಸ ಗೋಸ್ವಾಮಿ ಅವರ ನೇತೃತ್ವದಲ್ಲಿ ಬ್ರಜ್ ಯಾತ್ರೆ
  • ಭಕ್ತಿಯನ್ನು ಪದವಿಗಳಿಂದ ಅಳೆಯುವಂತಹದ್ದು ಅಲ್ಲ
  • ಬ್ರಜ್‌ಯಾತ್ರೆ ಆಧ್ಯಾತ್ಮಿಕ ಆಚರಣೆ

ಸಿರಿಗೆರೆ: ಶುದ್ಧ ಅಂತರಂಗದಿಂದ ದೇವರನ್ನು ಸ್ಮರಿಸುವುದೇ ನಿಜವಾದ ಭಕ್ತಿ ಎಂದು ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಉತ್ತರ ಭಾರತದ ಪ್ರವಾಸದ ವೇಳೆ ಶ್ರೀಗಳು ಮಥುರಾದಲ್ಲಿ ಶ್ರೀ ಚೈತನ್ಯ ಪ್ರೇಮ ಸಂಸ್ಥಾನದ ಪೂಜ್ಯ ಶ್ರೀವತ್ಸ ಗೋಸ್ವಾಮಿ ಅವರ ನೇತೃತ್ವದಲ್ಲಿ ಆಯೋಜಿಸಿದ್ದ ಬ್ರಜ್ ಯಾತ್ರೆ -2025ರ ಯಾತ್ರಾರ್ಥಿಗಳಿಗೆ ಆಶೀರ್ವಚನ ನೀಡಿದರು.

ಭಕ್ತಿಯನ್ನು ಸಂಪತ್ತು ಅಥವಾ ಪದವಿಗಳಿಂದ ಅಳೆಯುವಂತಹದ್ದು ಅಲ್ಲ ಎಂದು ಬಸವೇಶ್ವರರ ವಚನಗಳನ್ನು ಪ್ರಸ್ತಾಪಿಸಿ ಹಿಂದಿಯಲ್ಲಿ ನಿರರ್ಗಳವಾಗಿ ಉಪದೇಶ ನೀಡಿದರು.

ಭಾರತೀಯ ಸಮಾಜದಲ್ಲಿ ಪ್ರಾಚೀನ ಕಾಲದಿಂದಲೂ ನಡೆದು ಬಂದ ಭಕ್ತಿಪಂಥದ ಸುಳುಹುಗಳು. ಭಕ್ತಿಕನ್ಯೆಯು ದ್ರಾವಿಡ ದೇಶದಲ್ಲಿ ಹುಟ್ಟಿ ಕರ್ನಾಟಕದಲ್ಲಿ ಬೆಳೆದು, ಮಹಾರಾಷ್ಟ್ರ ಮತ್ತು ಗುಜರಾತ್‌ಗಳಲ್ಲಿ ಸಂಚರಿಸಿ, ವೃಂದಾವನದಲ್ಲಿ ಸುಂದರ ಯುವತಿಯಾಗಿ ರೂಪುಗೊಂಡಳು ಎಂದು ಪದ್ಮಪುರಾಣದಲ್ಲಿ ವರ್ಣಿಸಲಾಗಿರುವ ಶ್ಲೋಕವನ್ನು ವಿವರಿಸಿ ಭಕ್ತಿಯ ಕುರಿತು ಮಾತನಾಡಿದರು.

ಕಾರ್ಯಕ್ರಮದಲ್ಲಿ ಚೈತನ್ಯ ಪ್ರೇಮ ಸಂಸ್ಥಾನದ ಪೂಜ್ಯ ಶ್ರೀವತ್ಸ ಗೋಸ್ವಾಮಿಸಂಸ್ಥಾನದ ಅಧಿಕಾರಿ ವರ್ಗ, ಯಾತ್ರಾರ್ಥಿ ಪ್ರಮುಖರು, ಅಪಾರ ಸಂಖ್ಯೆಯ ಯಾತ್ರಿಗಳು ಉಪಸ್ಥಿತರಿದ್ದರು.

ಆಧ್ಯಾತ್ಮಿಕ ಆಚರಣೆ

ಬ್ರಜ್‌ಯಾತ್ರೆ ಆಧ್ಯಾತ್ಮಿಕ ಆಚರಣೆಯಾಗಿದೆಇದನ್ನು ಬ್ರಜ್ ಚೌರಾಸಿ ಕೋಸ್ ಯಾತ್ರೆ ಎಂದೂ ಕರೆಯಲಾಗುತ್ತದೆ. ಈ ಯಾತ್ರೆಯಲ್ಲಿ ಮಥುರಾ, ವೃಂದಾವನ, ಗೋವರ್ಧನ ಬೆಟ್ಟ, ನಂದಗಾವ, ಬರ್ಸಾನಾ ಮತ್ತು ಗೋಕುಲ್‌ನಂತಹ ಪ್ರಮುಖ ಸ್ಥಳಗಳಿಗೆ ಭೇಟಿ ನೀಡಲಾಗುತ್ತದೆ.

ಯಾತ್ರಾ ಮಾರ್ಗವು ಮಥುರಾ, ವೃಂದಾವನ ಮತ್ತು ಅದರ ಗಡಿ ರಾಜ್ಯಗಳಾದ ರಾಜಸ್ಥಾನ ಮತ್ತು ಹರಿಯಾಣದ ಮೂಲಕ ಹಾದುಹೋಗುತ್ತದೆಈ ಪರಿಕ್ರಮದ ಒಟ್ಟು ದೂರ 252 ಕಿ.ಮೀ ಆಗಿದೆ

ಈ ಮಾರ್ಗದಲ್ಲಿ ಸುಮಾರು 1300 ಹಳ್ಳಿಗಳು, 1100 ಕೊಳಗಳು 36 ಕಾಡುಗಳು ಮತ್ತು ಅನೇಕ ಪರ್ವತಗಳಿವೆ. ಕೃಷ್ಣನಿಗೆ ಸಂಬಂಧಿಸಿದ ಸ್ಥಳಗಳು ಮಾತ್ರವಲ್ಲದೆ ಅನೇಕ ದೇವರುಗಳು ಮತ್ತು ದೇವತೆಗಳಿಗೆ ಸಂಬಂಧಿಸಿದ ಸ್ಥಳಗಳು ಹಾಗೂ ಯಮುನಾ ನದಿಗೆ ಯಾತ್ರಾರ್ಥಿಗಳು ಭೇಟಿ ನೀಡುತ್ತಾರೆ. ಯಾತ್ರೆ ಕೇವಲ ದೇವಾಲಯಗಳ ಭೇಟಿಯಲ್ಲ, ಭಕ್ತಿಯ ಅನುಭವ, ಸ್ಮರಣೆ ಮತ್ತು ಆತ್ಮ ಶುದ್ಧೀಕರಣ ಎಂದು ಶ್ರೀಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net