ಕೆಆರ್‌ಎಸ್ ಮಾದರಿಯಲ್ಲಿ ವಿವಿ ಸಾಗರ ಅಭಿವೃದ್ಧಿ

ಚಿತ್ರದುರ್ಗ ತಾಲೂಕು ಗೋನೂರು ಬಳಿ ಭದ್ರಾ ಮೇಲ್ದಂಡೆ ಯೋಜನೆಯಡಿ ನಿರ್ಮಿಸುತ್ತಿರುವ ಆಕ್ವಾಡೆಕ್
ಚಿತ್ರದುರ್ಗ ತಾಲೂಕು ಗೋನೂರು ಬಳಿ ಭದ್ರಾ ಮೇಲ್ದಂಡೆ ಯೋಜನೆಯಡಿ ನಿರ್ಮಿಸುತ್ತಿರುವ ಆಕ್ವಾಡೆಕ್
Published on

ಪ್ರಮುಖ ಮುಖ್ಯಾಂಶಗಳು

  • ಭೂ ಸ್ವಾಽÃನಕ್ಕೆ ಅನುದಾನ ಕೋರಿ ಪತ್ರ
  • ಜಂಗಲ್ ಲಾಡ್ಜ್ ನಿರ್ಮಾಣಕ್ಕೂ ಪ್ಲ್ಯಾನ್
  • ಪ್ರವಾಸಿ ತಾಣವಾಗಲಿದೆ ಗೋನೂರು ಅಕ್ವಾಡೆಕ್
ಡಿಪಿಎನ್ ಶ್ರೇಷ್ಠಿ, ಚಿತ್ರದುರ್ಗ
ಶತಮಾನದ ಐತಿಹ್ಯವುಳ್ಳ ಹಿರಿಯೂರು ವಾಣಿವಿಲಾಸ ಸಾಗರ ಜಲಾಶಯ ವ್ಯಾಪ್ತಿಯ ಅಂದಾಜು ೬೩ ಎಕರೆ ವಿಸ್ತೀರ್ಣವನ್ನು ಅತ್ಯುತ್ತಮ ಪ್ರವಾಸಿ ತಾಣವನ್ನಾಗಿ ಸಮಗ್ರವಾಗಿ ಅಭಿವೃದ್ಧಿ ಪಡಿಸಲು ವಿಶ್ವೇಶ್ವರಯ್ಯ ಜಲ ನಿಗಮ ಮುಂದಾಗಿದೆ.
ಈ ನಿಟ್ಟಿನಲ್ಲಿ ನಿಗಮ ಮತ್ತು ರಾಜ್ಯ ಸರ್ಕಾರದ ಸಂಬAಽಸಿದ ಇಲಾಖೆಗಳ ಹಿರಿಯ ಅಽಕಾರಿಗಳೊಂದಿಗೆ, ಕಳೆದ ಜೂನ್ ೧೦ ರಂದು ಬೆಂಗಳೂರಲ್ಲಿ ಜಿ¯್ಲÁ ಉಸ್ತುವಾರಿ ಸಚಿವ ಡಿ. ಸುಧಾಕರ್ ಅವರು ಸಭೆ ನಡೆಸಿದ್ದರು. ಯೋಜನೆಯ -Àಲಶ್ರುತಿ ಎಂಬAತೆ, ಹಿರಿಯೂರು ತಾಲೂಕು ರಾಜ್ಯ ಹೆz್ದÁರಿ-೨೪ (ತರೀಕೆರೆ-ಹೊಸದುರ್ಗ-ವಿವಿಪುರ-ಹಿರಿಯೂರು-ಧರ್ಮಪುರ ರಸ್ತೆ) ರ, ವಿವಿಪುರ ಮುಖ್ಯರಸ್ತೆಯನ್ನು ೪ ಪಥದ ರಸ್ತೆಯನ್ನಾಗಿ ಅಭಿವೃದ್ಧಿ ಪಡಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ ಅಂದಾಜು ೨೯ ಎಕರೆ ಭೂ ಸ್ವಾಽÃನ ಪಡಿಸಿಕೊಳ್ಳಲಾಗುತ್ತಿದೆ.
ಭೂಸ್ವಾಽÃನಕ್ಕಾಗಿ ೧೪.೫೪ ಕೋಟಿ ರೂ. ಮಂಜೂರು ಮಾಡುವಂತೆ ಲೋಕೋಪಯೋಗಿ ಇಲಾಖೆ ಸರ್ಕಾರಕ್ಕೆ ಕಳೆದ ಡಿಸೆಂಬರ್‌ನಲ್ಲಿ ಪತ್ರ ಬರೆದಿದೆ. ಪಿಡಬ್ಲ್ಯೂಡಿ ಇಲಾಖೆಯು ಅಗತ್ಯ ಭೂಮಿಯನ್ನು ವಶಪಡಿಸಿಕೊಂಡು ನಿಗಮಕ್ಕೆ ಹಸ್ತಾಂತರಿಸಲಿದೆ. ಅನುದಾನ ಬಿಡುಗಡೆಯಾಗುತ್ತಿದ್ದಂತೆ ಭೂ ಸ್ವಾಽÃನ ಪ್ರಕ್ರಿಯೆ ಚುರುಕುಗೊಳ್ಳಲಿದ್ದು, ನಿಗಮಕ್ಕೆ ಭೂಮಿ ಹಸ್ತಾಂತರಿಸುವ ಹೊಣೆ ಜಿ¯್ಲÁಡಳಿತದ ಮೇಲಿದೆ.
ಜಂಗಲ್ ಲಾಡ್ಜ್
ನಿಗಮವು ರಸ್ತೆ ಅಗಲೀಕರಣದೊಂದಿಗೆ ಜಲಾಶಯ ವ್ಯಾಪ್ತಿಯಲ್ಲಿರುವ ೬೩ ಎಕರೆ ಪ್ರದೇಶದಲ್ಲಿ ಕೆ.ಆರ್.ಎಸ್. ಬೃಂದಾವನ ಮಾದರಿಯಲ್ಲಿ, ಪಿಪಿಪಿ ಮಾಡೆಲ್‌ನೊಂದಿಗೆ ಅಭಿವೃದ್ಧಿಪಡಿಸಲು ಉದ್ದೇಶಿಸಿದೆ.
ನಿಗಮದ ಎಂಡಿ ಸಣ್ಣಚಿತ್ತಯ್ಯ ಅವರು ಈ ಬಗ್ಗೆ ವಿಶೇಷ ಕಾಳಜಿ ವಹಿಸಿದ್ದು, ಕಳೆದ ನವೆಂಬರ್‌ನಲ್ಲಿ ನಿಗಮ ಇದಕ್ಕೆ ಒಪ್ಪಿಗೆಯನ್ನೂ ನೀಡಿದೆ. ಅಣೆಕಟ್ಟು ಅಕ್ಕಪಕ್ಕ ಜಂಗಲ್ ಲಾಡ್ಜ್ಗಳನ್ನು ನಿರ್ಮಿಸಲು ಯೋಜಿಸಲಾಗಿದೆ.
ಗೋನೂರು ಅಕ್ವಾಡೆಕ್ ಅಭಿವೃದ್ಧಿ
ಮಾರ್ಚ್ನೊಳಗೆ ಗೋನೂರುವರೆಗೆ ಭದ್ರಾ ನೀರು ಹರಿದು ಬರುವ ನಿರೀಕ್ಷೆ ಇದೆ. ಅಕ್ವೇರಿಯಂನೊAದಿಗೆ ವಾಕಿಂಗ್ ಪಾಥ್ ನಿರ್ಮಿಸುವ ಮೂಲಕ ಗೋನೂರು ಅಕ್ವಾಡೆಕ್ ಅನ್ನು ಅಭಿವೃದ್ಧಿಪಡಿಸಿ, ಅದನ್ನು ಆಕರ್ಷಕ ಪ್ರವಾಸಿ ತಾಣವನ್ನಾಗಿ ಪರಿವರ್ತಿಸಲು ನಿಗಮ ಮುಂದಾಗಿದೆ.
ಟೂರಿಸ್ಟ್ ಹಬ್
ಸಾಕಷ್ಟು ಸಂಖ್ಯೆಯಲ್ಲಿ ಪ್ರಸಿದ್ಧ ಪ್ರವಾಸಿ ತಾಣಗಳಿರುವ ಮಧ್ಯ ಕರ್ನಾಟಕದ ಚಿತ್ರದುರ್ಗವನ್ನು ಅತ್ಯುತ್ತಮ ಟೂರಿಸ್ಟ್ ಹಬ್ ಆಗಿ ಪರಿವರ್ತಿಸಲು ವಿಪುಲ ಅವಕಾಶಗಳಿವೆ. ಪ್ರಖ್ಯಾತ ಏಳುಸುತ್ತಿನ ಕೋಟೆಗೆ ಲಕ್ಷಾಂತರ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಿ z್ದÁರೆ. ಹೀಗೆ ಬಂದವರನ್ನು ವಿವಿ ಸಾಗರ ಸಹಿತ ಜಿ¯್ಲೆಯ ಇತರೆ ಪ್ರವಾಸಿ ತಾಣಗಳಿಗೂ ಭೇಟಿ ನೀಡುವಂತೆ ಆಕರ್ಷಿಸಲು ಈ ಯೋಜನೆ ರೂಪಿಸಲಾಗಿದೆ. ಇದರಿಂದ ಜಿ¯್ಲÉಯಲ್ಲಿ ಉದ್ಯೋಗಾವಕಾಶಗಳು ಕೂಡ ಹೆಚ್ಚಲಿವೆ. ಈ ಹಿನ್ನೆಲೆಯಲ್ಲಿ ವಿವಿ ಸಾಗರ ಜಲಾಶಯ ಅಭಿವೃದ್ಧಿಗೆ ನಿಗಮ ಮುಂದಾಗಿದ್ದು, ಬಹುತೇಕ ಏಪ್ರಿಲ್‌ನಲ್ಲಿ ಇದಕ್ಕೆ ಟೆಂಡರ್ ಕರೆಯುವ ಸಾಧ್ಯತೆ ಇದೆ.
"

ವಿವಿ ಸಾಗರ ಜಲಾಶಯವನ್ನು ಕೆಆರ್‌ಎಸ್ ಮಾದರಿಯಲ್ಲಿ ಅತ್ಯುತ್ತಮ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿ ಪಡಿಸಲಾಗುವುದು. ಏಪ್ರಿ ಲ್‌ನಲ್ಲಿ ಟೆಂಡರ್ ಕರೆಯಲಾಗುವುದು. ಯುಗಾದಿಯೊಳಗೆ ಗೋನೂರಿಗೆ ಭದ್ರೆ ನೀರು ಹರಿಯಲಿದೆ. ಈ ಅವಽಯೊಳಗೆ ನೀರು ಹರಿ ಯುವುದರಲ್ಲಿ ಯಾವುದೇ ಅನುಮಾನ ಬೇಡ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net