ನೀರಿನ ಹರಿವು ವೀಕ್ಷಿಸಿದ ಜಿಲ್ಲಾಧಿಕಾರಿ visit

ದಾವಣಗೆರೆ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಅವರು ಗುರುವಾರ ಚಿಕ್ಕಜಾಜೂರು ಸಮೀಪದ ಮುತ್ತುಗದೂರು ಕೆರೆಗೆ ಭೇಟಿ ನೀಡಿ, ಸಾಸ್ವೇಹಳ್ಳಿ ಏತ ನೀರಾವರಿ ಯೋಜನೆಯಿಂದ ನೀರು ಹರಿಯುತ್ತಿರುವುದನ್ನು ವೀಕ್ಷಿಸಿದರು. ರೈತರು ಹಾಗೂ ಅಧಿಕಾರಿಗಳು ಇದ್ದರು. visit
ದಾವಣಗೆರೆ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಅವರು ಗುರುವಾರ ಚಿಕ್ಕಜಾಜೂರು ಸಮೀಪದ ಮುತ್ತುಗದೂರು ಕೆರೆಗೆ ಭೇಟಿ ನೀಡಿ, ಸಾಸ್ವೇಹಳ್ಳಿ ಏತ ನೀರಾವರಿ ಯೋಜನೆಯಿಂದ ನೀರು ಹರಿಯುತ್ತಿರುವುದನ್ನು ವೀಕ್ಷಿಸಿದರು. ರೈತರು ಹಾಗೂ ಅಧಿಕಾರಿಗಳು ಇದ್ದರು. visit
Published on

ಪ್ರಮುಖ ಮುಖ್ಯಾಂಶಗಳು

  • ಸೌಲಭ್ಯಕ್ಕೆ ರೈತ ಮುಖಂಡರಿಂದ ಮನವಿ ಸಲ್ಲಿಕೆ
ಚಿಕ್ಕಜಾಜೂರು: ಸಾಸ್ವಹಳ್ಳಿ ಏತ ನೀರಾವರಿ ಯೋಜನೆಯಿಂದ ಹೊಳಲ್ಕೆರೆ ತಾಲೂಕಿನ ಮುತ್ತುಗದೂರು ಕೆರೆಗೆ ಸರಬ ರಾಜಾಗುತ್ತಿರುವ ನೀರನ್ನು ದಾವಣಗೆರೆ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಗುರುವಾರ ವೀಕ್ಷಿಸಿದರು. visit
ಬಳಿಕ ಕೆರೆ ನೀರಾವರಿ ಸಮಿತಿ ಸದಸ್ಯರು, ರೈತ ಮುಖಂಡರೊಂದಿಗೆ ಮಾತುಕತೆ ನಡೆಸಿದರು. ಜಕ್ಕಲಿ ಪಂಪ್‌ಹೌಸ್ 3ಕ್ಕೆ ನಿರಂತರ 66 ಮೆಗಾವ್ಯಾಟ್ ವಿದ್ಯುತ್ ಸರಬರಾಜಾಗುವಂತೆ ನೋಡಿಕೊಳ್ಳುವುದು, ಜಕ್ಕಲಿಯಲ್ಲಿ 3ನೇ ಮೋಟಾರ್ ಪ್ರಾರಂಭಿಸುವುದು ಹಾಗೂ ಸಮೀಪದ ಸಾಸಲು ಹಳ್ಳದ ವಿದ್ಯುತ್ ವಿತರಣಾ ಕೇಂದ್ರಕ್ಕೆ ಮಾಯಕೊಂಡ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಅಳವಡಿಸಿರುವ 14 ಮೆಗಾವ್ಯಾಟ್ ವಿದ್ಯುತ್ ಪೂರೈಕೆ ಉಪಕರಣ ತೆರವುಗೊಳಿಸಿ ರೈತರಿಗೆ ಅನುಕೂಲ ಮಾಡಿಕೊಡುವಂತೆ ರೈತ ಮುಖಂಡರು ಈ ವೇಳೆ ಮನವಿ ಸಲ್ಲಿಸಿದರು. ಈ ಬಗ್ಗೆ ಸೂಕ್ತ ಕ್ರಮವಹಿಸುವುದಾಗಿ ಜಿಲ್ಲಾಧಿಕಾರಿ ಭರವಸೆ ನೀಡಿದರು.
ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆ ಮುಖ್ಯ ಕಾರ್ಯನಿರ್ವಾಹಕ ಎಂಜಿನಿ ಯರ್ ಕೃಷ್ಣಪ್ರಸಾದ್, ಹೊಳಲ್ಕೆರೆ ತಹಸೀಲ್ದಾರ್ ವಿಜಯಕುಮಾರ್, ದಾವಣಗೆರೆ ಕೃಷಿ ಇಲಾಖೆ ಉಪ ನಿರ್ದೇಶಕಿ ಭಾರತಿ, ರೈತ ಸಂಘದ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್, ತಾಲೂಕು ಅಧ್ಯಕ್ಷ ಕಾಗಳಗೆರೆ ಸಿದ್ದರಾಜು, ರೈತ ಮುಖಂಡರಾದ ಎಂ.ಬಿ. ಸಿದ್ದೇಶ್, ಪ್ರಕಾಶ್, ಎಂ. ದೇವರಾಜ್, ಜೆ. ಓಂಕಾರಪ್ಪ, ಎ.ಆರ್. ಶಿವಕುಮಾರ್, ಬಿ.ಎಸ್. ರಮೇಶ್, ಜಿ.ಪಿ. ಸತೀಶ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net