ಚಿತ್ರದುರ್ಗ: ಜಿಲ್ಲೆಯ ಬಿ.ಜಿ.ಕೆರೆ ಕಂದಾಯ ಗ್ರಾಮದ ಸ.ನಂ. ೯೩ ದರ್ಖಾಸ್ತು ಜಮೀನಿನಲ್ಲಿ ಕಂಪನಿಯೊAದು ವಿಂಡ್ -Á್ಯನ್ ಗಳನ್ನು ಅಳವಡಿಸುತ್ತಿದ್ದು, ಸ್ಥಗಿತಗೊಳಿಸುವಂತೆ ಮಹರ್ಷಿ ವಾಲ್ಮೀಕಿ ನಾಯಕ ಮಹಾವೇದಿಕೆಯ ಅಧ್ಯಕ್ಷ ಲಕ್ಷಿ÷್ಮÃಸಾಗರ ರಾ ಜಣ್ಣ ಜಿ¯್ಲÁಡಳಿತಕ್ಕೆ ಒತ್ತಾಯಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅತ್ಯಂತ ಹಿಂದುಳಿದ ಬರಪೀಡಿತ ಪ್ರದೇಶ, ಬುಡಕಟ್ಟು ಸಮುದಾಯ ಹೆಚ್ಚಾಗಿ ವಾಸಿಸುತ್ತಿರುವ ಬಿ.ಜಿ.ಕೆರೆಯಲ್ಲಿ ಕಾನೂನು ಬಾಹಿರವಾಗಿ ಪವನಯಂತ್ರಗಳ ಅಳವಡಿಕೆ ವಿರುದ್ಧ ಜಿ¯್ಲÁಽಕಾರಿ, ಎಸ್ಪಿ ಅವರಿಗೂ ದೂರು ನೀಡಿದ್ದೇವೆ ಎಂದರು.
ಜನಪ್ರತಿನಿಽಗಳ ಕುಮ್ಮಕ್ಕಿನಿಂದ ಅಲ್ಲಿನ ಪೊಲೀಸರು ಇದಕ್ಕೆ ಸಹಕರಿಸುತ್ತಿz್ದÁರೆ. ಪ್ರಕರಣ ನ್ಯಾಯಾಲಯದಲ್ಲಿದೆ. ಹೀಗಾಗಿ ಅಳವಡಿಕೆ ಕಾರ್ಯ ಸ್ಥಗಿತಗೊಳಿಸಿ, ಪಿಐ, ಎಸ್‌ಐಗಳನ್ನು ಅಮಾನತ್ತುಗೊಳಿಸಿ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ವಕೀಲ ಪಾಲಯ್ಯ ಮಾತನಾಡಿ, ಅಳವಡಿಕೆಗೂ ಮುನ್ನಾ ರೈತರಿಗೆ ಲೀಗಲï ನೋಟಿಸ್ ಕೂಡ ನೀಡಿಲ್ಲ. ಕೃಷಿ ಜಮೀನನ್ನು ಕೃಷಿ ಯೇತರ ಭೂಮಿಯಾಗಿ ಪರಿವರ್ತಿಸಲು ಜಿ¯್ಲÁಡಳಿತದ ಅನುಮತಿ ಪಡೆಯಬೇಕು.
ರೈತರಿಗೆ ಪರಿಹಾರ ನೀಡಬೇಕು. ಇದ್ಯಾವು ದನ್ನೂ ಮಾಡದೆ, ೮ ಎಕರೆ ಜಮೀನಿನಲ್ಲಿ ವಿಂಡ್ -Á್ಯನ್ ಅಳವಡಿಸಲಾಗುತ್ತಿದೆ. ಇದರಿಂದ ರೈತರಿಗೆ ತೊಂದರೆಯಾಗಲಿದೆ. ಇದಕ್ಕೆ ಅವಕಾಶ ನೀಡುವುದಿಲ್ಲ. ಹೋರಾಟಕ್ಕೂ ಸಿದ್ಧ ಎಂದರು. ರಾಮಸಾಗರ ಮಂ ಜಣ್ಣ, ಕಾಂತರಾಜು ಲಿಂಗಾವರಹಟ್ಟಿ, ಸೂರಪ್ಪ, ವೇದಿಕೆಯ ಬೈಯಣ್ಣ ಇತರರಿದ್ದರು.