ಗೋವುಗಳ ಅಕ್ರಮ ಸಾಗಾಟ ತಡೆಗೆ ಆಗ್ರಹ

ಶಿಕಾರಿಪುರದಲ್ಲಿ ಇತ್ತೀಚೆಗೆ ಗೋ ರಕ್ಷಕರ ಮೇಲೆ ನಡೆದ ದಾಳಿ ಖಂಡಿಸಿ ವಿಎಚ್‌ಪಿ ಪ್ರಮುಖರು ಚಿತ್ರದುರ್ಗದಲ್ಲಿ ಸೋಮವಾರ ಡಿಸಿ ಕಚೇರಿ ಒಎ ತನುಜಾ ಸವದತ್ತಿ ಅವರಿಗೆ ಮನವಿ ಸಲ್ಲಿಸಿದರು. ರಾಘವೇಂದ್ರ, ತೇಜಶ್ವರ್, ಎಂ.ಜೆ. ಮಠ, ಜಿ. ಕಿಶೋರ್, ರಾಮಾಂಜನೇಯ, ಪ್ರೇಮ್, ಸಿದ್ಧಾರ್ಥ, ಸಂದೀಪ್ ಇತರರು ಇದ್ದರು.
ಶಿಕಾರಿಪುರದಲ್ಲಿ ಇತ್ತೀಚೆಗೆ ಗೋ ರಕ್ಷಕರ ಮೇಲೆ ನಡೆದ ದಾಳಿ ಖಂಡಿಸಿ ವಿಎಚ್‌ಪಿ ಪ್ರಮುಖರು ಚಿತ್ರದುರ್ಗದಲ್ಲಿ ಸೋಮವಾರ ಡಿಸಿ ಕಚೇರಿ ಒಎ ತನುಜಾ ಸವದತ್ತಿ ಅವರಿಗೆ ಮನವಿ ಸಲ್ಲಿಸಿದರು. ರಾಘವೇಂದ್ರ, ತೇಜಶ್ವರ್, ಎಂ.ಜೆ. ಮಠ, ಜಿ. ಕಿಶೋರ್, ರಾಮಾಂಜನೇಯ, ಪ್ರೇಮ್, ಸಿದ್ಧಾರ್ಥ, ಸಂದೀಪ್ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಗೋ ರಕ್ಷಕರ ಮೇಲೆ ದಾಳಿಗೆ ಖಂಡನೆ|
  • ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ರಾಜ್ಯಪಾಲರಿಗೆ ಮನವಿ
  • ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ

ಚಿತ್ರದುರ್ಗ:

ಶಿಕಾರಿಪುರದಲ್ಲಿ ಗೋರಕ್ಷಕ ಕಾರ್ಯಕರ್ತರ ಮೇಲೆ ನಡೆದ ಹತ್ಯೆ ಯತ್ನ ಖಂಡಿಸಿ ಹಾಗೂ ದಂಗೆಕೋರರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ವಿಹಿಂಪ ಕರ್ನಾಟಕ ದಕ್ಷಿಣ ಪ್ರಾಂತ ಪದಾಽಕಾರಿಗಳು ಜಿಲ್ಲಾಽಕಾರಿ ಸಮೂಲಕ ರಾಜ್ಯಪಾಲರಿಗೆ ಸೋಮವಾರ ಮನವಿ ಸಲ್ಲಿಸಿದರು.

ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನಲ್ಲಿ ಆ.೧೫ರಂದು ಹಿಂಸಾತ್ಮಕ ವಧೆಗೆ ಅಕ್ರಮವಾಗಿ ಜಾನುವಾರು ಸಾಗಿಸುತ್ತಿದ್ದ ವಾಹನ ತಡೆದು, ಅವುಗಳ ರಕ್ಷಣೆಗೆ ಮುಂದಾಗಿದ್ದ ಗೋರಕ್ಷಕರ ಮೇಲೆ ಮಾರಕಾಸ್ತçಗಳಿಂದ ಕೊಲೆಗೆ ಪ್ರಯತ್ನಿಸಿದ ಘಟನೆ ಆತಂಕಕಾ ರಿಯಾಗಿದೆ.
ಗೋವುಗಳ ಅಕ್ರಮ ಸಾಗಾಟಗಾರರ ಭೀಕರ ದಾಳಿಯಿಂದ ಗೋರಕ್ಷಕ ಕಾರ್ಯಕರ್ತರು ತೀವ್ರವಾಗಿ ಗಾಯಗೊಂಡಿದ್ದಾರೆ. ಅವರ ವಾಹನ ಧ್ವಂಸಗೊಳಿಸಿ ಸಾರ್ವಜನಿಕರಲ್ಲಿ ಭಯದ ವಾತಾವರಣ ಸೃಷ್ಟಿಸಲಾಗಿದೆ. ರಾಜ್ಯದ ಇತರೆಡೆಗಳಲ್ಲೂ ಪರವಾನಗಿ ಇಲ್ಲದೆ ಗೋವುಗಳ ಅಕ್ರಮ ಸಾಗಾಟ, ಅಕ್ರಮ ಕಸಾಯಿಖಾನೆಗಳು ಕಾರ್ಯಾಚರಣೆಯಲ್ಲಿವೆ. ಅವುಗಳನ್ನು ಸಂಪೂರ್ಣ ಬಂದ್ ಮಾಡಿಸ ಬೇಕು ಎಂದು ಆಗ್ರಹಿಸಿದರು.
ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ ಜಾರಿಯಲ್ಲಿದ್ದರೂ ರಾಜ್ಯದ ಹಲವೆಡೆ ಅಕ್ರಮ ಕಸಾಯಿ ಖಾನೆಗಳಿರುವುದು ಕಾನೂನು ಮತ್ತು ಸುವ್ಯವಸ್ಥೆಗೆ ಸವಾಲಾಗಿದೆ. ಗೋರಕ್ಷಕರ ಕೊಲೆಗೆ ಯತ್ನಿಸಿದ ಎಲ್ಲರನ್ನೂ ಹಾಗೂ ಅವರ ಹಿಂದಿರುವ ಸಂಚುಕೋರರನ್ನು ತಕ್ಷಣವೇ ಬಂಽಸಬೇಕು.
ಗೋಹತ್ಯೆ ಹಾಗೂ ಕಸಾಯಿಖಾನೆ ನಡೆಸುತ್ತಿರುವ ಕಟ್ಟಡಗಳನ್ನು ಧ್ವಂಸಗೊಳಿಸಿ ಅವರ ಆಸ್ತಿಯನ್ನು ಸರ್ಕಾರ ಮುಟ್ಟುಗೋಲು ಹಾಕಿ ಕೊಳ್ಳಬೇಕು. ಗೋಸಾಗಾಟ ತಡೆಗೆ ಎಲ್ಲ ಜಿಲ್ಲೆಗಳು ಹಾಗೂ ಗಡಿಗಳಲ್ಲಿ ಪೊಲೀಸರು ನಿರಂತರ ರಾತ್ರಿ ಗಸ್ತು ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.
ರಾಘವೇಂದ್ರ, ತೇಜೇಶ್ವರ್, ಎಂ.ಜೆ. ಮಠ, ಜಿ. ಕಿಶೋರ್, ರಾಮಾಂಜನೇಯ, ಪ್ರೇಮ್, ಸಿದ್ಧಾರ್ಥ, ಸಂದೀಪ್ ಮತ್ತಿತರ ವಿಎಚ್‌ಪಿ ಪದಾಽಕಾರಿಗಳು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net