ಹುಣಸೆಕಟ್ಟೆ, ಕುರುಮರಡಿ ಕೆರೆಗಳಿಗೆ ನೀರು ತುಂಬಿಸಲು ಒತ್ತಾಯ

 ಚಿತ್ರದುರ್ಗ ತಾಲೂಕು ಹುಣಸೆಕಟ್ಟೆ, ಕುರುಮರಡಿಕೆರೆ ಗ್ರಾಮಗಳ ಕೆರೆಗಳಿಗೆ ನೀರು ಹರಿಸುವಂತೆ ರೈತರು ಸೋಮವಾರ ಭದ್ರಾ ಮೇಲ್ದಂಡೆ ಯೋಜನೆ ಕಚೇರಿ ಎಸ್‌ಇ ಕೆ.ಟಿ. ಹರೀಶ್ ಅವರಿಗೆ ಮನವಿ ಸಲ್ಲಿಸಿದರು. ಧನಂಜಯ ಹಂಪಯ್ಯನ ಮಾಳಿಗೆ, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಬಸ್ತಿಹಳ್ಳಿ ಸುರೇಶ್‌ಬಾಬು, ಕೆ.ಎಂ. ಕಾಂತರಾಜು, ತಿಪ್ಪೇಸ್ವಾಮಿ, ಕೆಂಚಪ್ಪ ಇತರರು ಇದ್ದರು.
ಚಿತ್ರದುರ್ಗ ತಾಲೂಕು ಹುಣಸೆಕಟ್ಟೆ, ಕುರುಮರಡಿಕೆರೆ ಗ್ರಾಮಗಳ ಕೆರೆಗಳಿಗೆ ನೀರು ಹರಿಸುವಂತೆ ರೈತರು ಸೋಮವಾರ ಭದ್ರಾ ಮೇಲ್ದಂಡೆ ಯೋಜನೆ ಕಚೇರಿ ಎಸ್‌ಇ ಕೆ.ಟಿ. ಹರೀಶ್ ಅವರಿಗೆ ಮನವಿ ಸಲ್ಲಿಸಿದರು. ಧನಂಜಯ ಹಂಪಯ್ಯನ ಮಾಳಿಗೆ, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಬಸ್ತಿಹಳ್ಳಿ ಸುರೇಶ್‌ಬಾಬು, ಕೆ.ಎಂ. ಕಾಂತರಾಜು, ತಿಪ್ಪೇಸ್ವಾಮಿ, ಕೆಂಚಪ್ಪ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ರಾಜ್ಯ ರೈತ ಸಂಘದಿAದ ಪ್ರತಿಭಟನೆ
  • ಭದ್ರಾ ಮೇಲ್ದಂಡೆ ಯೋಜನೆ ಕಚೇರಿಗೆ ಮನವಿ ಸಲ್ಲಿಕೆ
  • ಅಂತರ್ಜಲ
ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆಯಡಿ ಚಿತ್ರದುರ್ಗ ತಾಲೂಕು ಹುಣಸೆಕಟ್ಟೆ, ಕುರುಮರಡಿಕೆರೆ ಗ್ರಾಮಗಳ ಕೆರೆಗಳಿಗೆ ಭದ್ರಾ ಮೇಲ್ದಂಡೆ ಯೋಜನೆಯಡಿ ನೀರು ಹರಿಸುವಂತೆ ಆಗ್ರಹಿಸಿ ರಾಜ್ಯ ರೈತ ಸಂಘದ ಕಾರ್ಯಕರ್ತರು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿ ಭದ್ರಾ ಮೇಲ್ದಂಡೆ ಯೋಜನೆ ಕಚೇರಿಗೆ ಮನವಿ ಸಲ್ಲಿಸಿದರು.
ಭದ್ರಾ ಮೇಲ್ದಂಡೆ ಯೋಜನೆ ಜಿಲ್ಲೆಯ ರೈತರಿಗೆ ವರದಾನವಾಗಿದೆ. ಆದರೆ, ಚಿತ್ರದುರ್ಗ ತಾಲೂಕಿನ ಅತ್ಯಂತ ಕಡಿಮೆ ಪ್ರದೇಶ ನೀರಾವರಿಗೆ ಒಳಪಡಲಿದೆ. ಶೋಷಿತ ಸಮುದಾಯಗಳು ವಾಸಿಸುವ ಪ್ರದೇಶದ ಕೆರೆಗಳು ಯೋಜನೆ ವ್ಯಾಪ್ತಿಯಿಂದ ಹೊರಗಿರುವುದು ಆತಂಕ ಮೂಡಿಸಿದೆ.
ಹುಣಸೆಕಟ್ಟೆ ಆಸುಪಾಸಿನ ಹಳ್ಳಿಗಳ ನೂರಾರು ಕುಟುಂಬಗಳು ಹೂವು ಬೆಳೆಯುತ್ತಿದ್ದು, ಬರ ಎದುರಾದಾಗಲೆಲ್ಲ ತೊಂದರೆ ಅನು ಭವಿಸುವಂತಾಗಿದೆ. ಅಂತರ್ಜಲ ಕುಸಿದಾಗ ರೈತರಿಗೆ ಸಂಕಷ್ಟ ಎದುರಾಗಲಿದೆ. ಆದ್ದರಿಂದ ಅಂತರ್ಜಲ ಹೆಚ್ಚಳಕ್ಕೆ ಸರ್ಕಾರ ಕ್ರಮಕೈಗೊಳ್ಳಬೇಕು.
ಯೋಜನೆಯಡಿ ಜಗಳೂರಿಗೆ ನೀರು ಪೂರೈಕೆ ಮಾರ್ಗ ಹುಣಸೆಕಟ್ಟೆ ಸಮೀಪದಲ್ಲಿದೆ. ಹುಣಸೆಕಟ್ಟೆಯ ೨ ಸಣ್ಣ ಕೆರೆಗಳನ್ನು ತುಂಬಿಸಿದರೆ ಈ ಭಾಗದ ಜನ ಜಾನುವಾರುಗಳಿಗೆ ಕುಡಿವ ನೀರಿಗೆ ಅನುಕೂಲದೆ ಜತೆಗೆ ಅಂತರ್ಜಲ ವೃದ್ಧಿಸಲಿದೆ.
ಕೈ ಬಿಟ್ಟಿರುವ ಕುರುಮರಡಿಕೆರೆ ಗ್ರಾಮದ ಕೆರೆಯನ್ನೂ ಯೋಜನೆ ವ್ಯಾಪ್ತಿಗೆ ಒಳಪಡಿಸಿ ನೀರು ತುಂಬಿಸಬೇಕು. ಇದು ಸಾಧ್ಯ ವಾಗದಿದ್ದರೆ ವಿವಿ ಸಾಗರ ಜಲಾಶಯದಿಂದ ಕೆರೆ ತುಂಬಿಸಲು ಕ್ರಿಯಾ ಯೋಜನೆ ರೂಪಿಸಬೇಕು ಎಂದು ಒತ್ತಾಯಿಸಿದರು.
ಸಂಘದ ಜಿಲ್ಲಾಧ್ಯಕ್ಷ ಧನಂಜಯ ಹಂಪಯ್ಯನ ಮಾಳಿಗೆ, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಬಸ್ತಿಹಳ್ಳಿ ಸುರೇಶ್‌ಬಾಬು, ಕೆ.ಎಂ. ಕಾಂತರಾಜು, ತಿಪ್ಪೇಸ್ವಾಮಿ, ಕೆಂಚಪ್ಪ, ವೆಂಕಟೇಶ್, ಮಾರುತಿ, ಪ್ರಭು, ಮೋಹನ್, ಸುರೇಶ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net