ದೈಹಿಕ ಶಿಕ್ಷಣ ಶಿಕ್ಷಕರ ನೇಮಕಕ್ಕೆ ಆಗ್ರಹ

ಚಿತ್ರದುರ್ಗದಲ್ಲಿ ಏರ್ಪಡಿಸಿರುವ ದಾವಣಗೆರೆ ವಿಶ್ವವಿದ್ಯಾನಿಲಯ ಅಂತರ ಕಾಲೇಜು ಮಹಿಳಾ ಕ್ರೀಡಾಕೂಟದ ಉದ್ಘಾಟನಾ ಸಮಾ ರಂಭದಲ್ಲಿ ಎಚ್.ತಿಪ್ಪೇಸ್ವಾಮಿ, ಮಕ್ಸೂದ್‌ಅಹಮದ್ ಮಾತನಾಡಿ,ಎಂ.ಜೆ.ಸಾಽಕ್,ಶಿವಣ್ಣ,ಡಾ.ಡಿ.ಆರ್.ಪ್ರಸನ್ನಕುಮಾರ್,ಶಿವಪ್ರಸಾ ದ್, ಮಧುಸೂದನ್,ಸತೀಶ್‌ಅಳಸಂದಿ,ವೆAಕಟೇಶ್ ಇದ್ದರು.
ಚಿತ್ರದುರ್ಗದಲ್ಲಿ ಏರ್ಪಡಿಸಿರುವ ದಾವಣಗೆರೆ ವಿಶ್ವವಿದ್ಯಾನಿಲಯ ಅಂತರ ಕಾಲೇಜು ಮಹಿಳಾ ಕ್ರೀಡಾಕೂಟದ ಉದ್ಘಾಟನಾ ಸಮಾ ರಂಭದಲ್ಲಿ ಎಚ್.ತಿಪ್ಪೇಸ್ವಾಮಿ, ಮಕ್ಸೂದ್‌ಅಹಮದ್ ಮಾತನಾಡಿ,ಎಂ.ಜೆ.ಸಾಽಕ್,ಶಿವಣ್ಣ,ಡಾ.ಡಿ.ಆರ್.ಪ್ರಸನ್ನಕುಮಾರ್,ಶಿವಪ್ರಸಾ ದ್, ಮಧುಸೂದನ್,ಸತೀಶ್‌ಅಳಸಂದಿ,ವೆAಕಟೇಶ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕ್ರೀಡೆಯಿಂದ ಶಿಸ್ತು,ನಾಯಕತ್ವದ ಗುಣ
  • ಅಂತರ್ ಕಾಲೇಜು ಮಹಿಳಾ ಕ್ರೀಡಾಕೂಟ ಆರಂಭ
  • ಕ್ರೀಡೆಗೆ ಪ್ರೋತ್ಸಾಹ
ಚಿತ್ರದುರ್ಗ: ಮನಸ್ಸು ಮತ್ತು ದೇಹ ಚುರುಕಾಗಿರಲು ಶಿಕ್ಷಣದ ಜತೆ ಕ್ರೀಡೆಗೂ ಹೆಚ್ಚಿನ ಮಹತ್ವ ಕೊಡ ಬೇಕಾಗಿದೆ ಎಂದು ದಾವಣಗೆರೆ ವಿಶ್ವವಿದ್ಯಾ ನಿಲಯದ ಸಿಂಡಿಕೇಟ್ ಸದಸ್ಯ ಎಚ್.ತಿಪ್ಪೇಸ್ವಾಮಿ ಹೇಳಿದರು.
ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ,ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು,ಸರ್ಕಾರಿ ಕಲಾ ಕಾಲೇಜು ಸ್ವಾಯತ್ತ, ದಾವಣಗೆರೆ ವಿಶ್ವವಿದ್ಯಾನಿಲಯ ಹಾಗೂ ದೈಹಿಕ ಶಿಕ್ಷಣ ನಿರ್ದೇಶಕರ ಸಂಘದ ಸಹಯೋಗದೊಂದಿಗೆ ಚಿತ್ರದುರ್ಗದ ಸರ್ಕಾರಿ ಕಲಾ ಕಾಲೇಜು ಕ್ರೀಡಾಂಗಣದಲ್ಲಿ ಆಯೋಜಿಸಿರುವ ದಾವಣಗೆರೆ ವಿವಿ ಅಂತರ್ ಕಾಲೇಜು ಮಹಿಳಾ ಕ್ರೀಡಾಕೂಟಕ್ಕೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು.
ಶಿಕ್ಷಣವೆಂದರೆ ಕೇವಲ ಪಠ್ಯ ಜ್ಞಾನವಲ್ಲ,ವ್ಯಕ್ತಿಯ ವ್ಯಕ್ತಿತ್ವದ ಸಮಗ್ರ ಅಭಿವೃದ್ಧಿಯಾಗಿದೆ,ಹಾಗಾಗಿ ದೈಹಿಕ ಶಿಕ್ಷಣವನ್ನು ಶಿಕ್ಷಣದ ಅವಿಭಾ ಜ್ಯಅಂಗವೆAದು ಪರಿಗಣಿಸಲಾಗಿದೆ. ಕ್ರೀಡೆಯಿಂದ ಮಾನಸಿಕ ಮತ್ತು ದೈಹಿಕವಾಗಿ ಸದÊಢರಾಗಿರುವುದಷ್ಟೇಅಲ್ಲ. ಶಿಸ್ತು ಮತ್ತು ನಾಯಕ ತ್ವದ ಗುಣ ಬೆಳೆಸುತ್ತದೆ. ಕ್ರೀಡೆ, ವ್ಯಾಯಾಮ,ಯೋಗ ಮತ್ತು ವಿವಿಧ ದೈಹಿಕ ಚಟುವಟಿಕೆಗಳು ಇಂದಿನ ಒತ್ತಡ ಜೀವನದಲ್ಲಿ ಪ್ರತಿಯೊ ಬ್ಬರಿಗೂ ಅತ್ಯವಶ್ಯಕ ಎಂದು ತಿಳಿಸಿದರು.
ಪದವಿಪೂರ್ವ ಮತ್ತು ಪದವಿ ಕಾಲೇಜುಗಳಲ್ಲಿ ದೈಹಿಕ ಶಿಕ್ಷಕರುಗಳ ಕೊರತೆಯಿದ್ದು, ಕ್ರೀಡಾಪಟುಗಳಿಗೆ ತರಬೇತಿ ನೀಡುವುದು ಕಷ್ಟ ವಾಗಿದೆ. ಪ್ರತಿ ಸಾರಿಯೂ ನಾವುಗಳು ದೈಹಿಕ ಶಿಕ್ಷಣ ಶಿಕ್ಷಕರನ್ನು ನೇಮಿಸುವಂತೆ ಸರ್ಕಾರಕ್ಕೆ ಮನವಿ ಮಾಡುತ್ತಿದ್ದರೂ ಪ್ರಯೋಜನವಾ ಗಿಲ್ಲ. ಇನ್ನಾದರೂ ಕೊರತೆಯಿರುವ ದೈಹಿಕ ಶಿಕ್ಷಕರನ್ನು ನೇಮಿಸಿ ಕ್ರೀಡೆಗೆ ಪ್ರೋತ್ಸಾಹ ನೀಡುವಂತೆ ತಿಪ್ಪೇಸ್ವಾಮಿ ಸರ್ಕಾರಕ್ಕೆ ಮನವಿ ಮಾಡಿದರು.
ನಿವÊತ್ತ ದೈಹಿಕ ಶಿಕ್ಷಣ ನಿರ್ದೇಶಕ ಮಕ್ಸೂದ್ ಅಹಮದ್ ಮಾತನಾಡಿ, ಸಾಮಾಜಿಕ ಜಾಲತಾಣದಲ್ಲಿ ಕಾಲ ಕಳೆಯದೆ ಕ್ರೀಡೆಗಳಲ್ಲಿ ಹೆಚ್ಚಿನ ಆಸಕ್ತಿ ವಹಿಸುವಂತೆ ಯುವ ಜನರಿಗೆ ಮನವಿ ಮಾಡಿದರು. ಪಠ್ಯಗಳ ಜತೆಗೆ ಪಠ್ಯೇತರ ಚಟುವಟಿಕೆಗಳು ಪ್ರಗತಿಗೆ ಪೂರಕವಾಗಿದೆ ಎಂದರು. ನಿವÊತ್ತ ದೈಹಿಕ ಶಿಕ್ಷಣ ನಿರ್ದೇಶಕ ಎಂ.ಜೆ.ಸಾಽಕ್ ಮಾತನಾಡಿದರು.
ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಪ್ರಾಂಶುಪಾಲ ಶಿವಣ್ಣ, ಸರ್ಕಾರಿ ಕಲಾ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಡಾ. ಡಿ. ಆರ್.ಪ್ರಸನ್ನಕುಮಾರ್,ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಶಿವಪ್ರಸಾದ್, ಪ್ರಾಧ್ಯಾಪಕ ರಾದ ಮಧುಸೂದನ್,ಸತೀಶ್‌ಅಳಸಂದಿ, ಪತ್ರಾಂಕಿತ ವ್ಯವಸ್ಥಾಪಕ ವೆಂಕಟೇಶ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net